ನವದೆಹಲಿ: ಕರ್ನಾಟಕದಲ್ಲಿ ಇಂಗ್ಲಿಷ್ ಮಾತನಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ. 2011ರಲ್ಲಿ ನಡೆದ ಜನಗಣತಿಗೆ ಸಂಬಂಧಿಸಿದಂತೆ ಬಿಡುಗಡೆ ಮಾಡಲಾಗಿರುವ ಬಾಷೆಗಳಿಗೆ ಸಂಬಂಧಿಸಿದ ಮಾಹಿತಿಯಲ್ಲಿ ಈ ಅಂಶ ಉಲ್ಲೇಖವಾಗಿದೆ. ಪರಿಚ್ಛೇದದ ಹೊರಗಿರುವ ಭಾಷೆಗಳ (ಅನ್ ಶೆಡ್ನೂಲ್ಡ್) ಪೈಕಿ ಇಂಗ್ಲಿಷ್ ಇದ್ದು, ಸುಮಾರು 2.6 ಲಕ್ಷ ಮಂದಿ ಅದನ್ನೇ ಮಾತನಾಡುವುದಾಗಿ ಹೇಳಿಕೊಂಡಿದ್ದಾರೆ. ಈ ಪೈಕಿ ಮಹಾರಾಷ್ಟ್ರದಲ್ಲಿ 1.06 ಲಕ್ಷ ಮಂದಿ ಇದ್ದು ಮೊದಲ ಸ್ಥಾನ ದಲ್ಲಿದೆ. ತಮಿಳುನಾಡು ದ್ವಿತೀಯ ಸ್ಥಾನ ದಲ್ಲಿದೆ. ಜತೆಗೆ ಅದನ್ನು ಮಾತೃಭಾಷೆ ಎಂದೂ ಘೋಷಿಸಿಕೊಂಡಿದ್ದಾರೆ. ಈ ಪಟ್ಟಿಯಲ್ಲಿ ಕರ್ನಾಟಕದಲ್ಲಿ ತೃತೀಯ ಸ್ಥಾನದಲ್ಲಿದೆ.
ದೇಶದಲ್ಲಿ ಅಂಗೀಕೃತಗೊಂಡ 22 ಭಾಷೆಗಳ ಪೈಕಿ ಒಂದಾಗಿರುವ 22 ಭಾಷೆಗಳ ಪೈಕಿ ಸಂಸ್ಕೃತವನ್ನು ಅತ್ಯಂತ ಕಡಿಮೆ ಸಂಖ್ಯೆಯಲ್ಲಿ ಮಾತನಾಡುತ್ತಿದ್ದಾರೆ. ಕೊಂಕಣಿ, ಮಣಿಪುರಿ, ಬೋಡೋ ಮತ್ತು ಡೋಗ್ರಿ ಭಾಷೆ ಗಳಿಗೆ ಹೋಲಿಕೆ ಮಾಡಿದರೆ ಸಂಸ್ಕೃತವನ್ನು ಮಾತನಾಡುವವರ ಸಂಖ್ಯೆ ಗಣನೀಯವಾಗಿ ಕಡಿಮೆ.
ಇನ್ನು ಮಾತೃಭಾಷೆಯಾಗಿ ಹಿಂದಿ ಎಂದು ಗುರುತಿಸಿಕೊಂಡಿರುವವರ ಪ್ರಮಾಣ ಶೇ.41.03ಕ್ಕಿಂತ ಶೇ.43.63ಕ್ಕೆ ಏರಿಕೆಯಾಗಿದೆ. ಬಂಗಾಳಿ ಭಾಷೆ ದ್ವಿತೀಯ ಸ್ಥಾನದಲ್ಲಿದೆ. ತೃತೀಯ ಸ್ಥಾನಕ್ಕೆ ಮರಾಠಿ ಭಾಷೆ ಜಿಗಿದಿದೆ. ಬಂಗಾಳಿ ಭಾಷೆ 2001ರಲ್ಲಿ ಶೇ.8.3ರಿಂದ 2011ರಲ್ಲಿ ಶೇ.8.11ಕ್ಕೆ ಏರಿಕೆಯಾಗಿದೆ. ಮರಾಠಿ ಭಾಷೆ 2001ರಲ್ಲಿ ಶೇ.6.99 ಇದ್ದದ್ದು 2011ರಲ್ಲಿ ಶೇ.7.09ಕ್ಕೆ ವೃದ್ಧಿಸಿದೆ. ತೆಲುಗನ್ನು ಮಾತೃಭಾಷೆ ಎಂದು ಹೇಳಿಕೊಳ್ಳುವವರ ಸಂಖ್ಯೆ ಶೇ.7.19ರಿಂದ ಶೇ.6.93ಕ್ಕೆ ಇಳಿಕೆಯಾ ಗಿದೆ. ಉರ್ದು, ಗುಜರಾತಿ ಭಾಷೆ ಮಾತಾಡು ವವರ ಸಂಖ್ಯೆಯೂ ಗಣನೀಯ ಪ್ರಮಾಣ ದಲ್ಲಿ ಇಳಿಕೆಯಾಗಿದೆ.