Advertisement
ಜೂನ್‌ಗೆ ಅಂತ್ಯವಾದ ತ್ತೈಮಾಸಿಕದಲ್ಲಿ ನಿರುದ್ಯೋಗ ಪ್ರಮಾಣ ಶೇ.7.6ಕ್ಕಿಳಿದಿದೆ. 2021ರ ಇದೇ ಅವಧಿಯಲ್ಲಿ ನಿರುದ್ಯೋಗ ಪ್ರಮಾಣ ಶೇ.14.3ರಷ್ಟಿತ್ತು ಎಂದು ಕೇಂದ್ರ ಸರ್ಕಾರ ಹೇಳಿದೆ.
Related Articles
ದೇಶದಲ್ಲಿ ಮುಂದಿನ ದಿನಗಳಲ್ಲಿ ಜನರು ಹೆಚ್ಚಿನ ಪ್ರಮಾಣದಲ್ಲಿ ಖರ್ಚು ಮಾಡಲಿದ್ದಾರೆ ಮತ್ತು ಉದ್ಯೋಗದ ಪ್ರಮಾಣವೂ ಹೆಚ್ಚಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಇದರಿಂದಾಗಿ ದೇಶದ ಅರ್ಥ ವ್ಯವಸ್ಥೆ ಮತ್ತಷ್ಟು ಸುಸ್ಥಿತಿಗೆ ಬರಲಿದೆ ಎಂದು ಆಗಸ್ಟ್‌ಗೆ ಸಂಬಂಧಿಸಿದಂತೆ ಇರುವ ದೇಶದ ಮಾಸಿಕ ಆರ್ಥಿಕ ಸ್ಥಿತಿಯ ಪರಾಮರ್ಶೆಯ ವರದಿಯಲ್ಲಿ ಉಲ್ಲೇಖಿಸಲಾಗಿದೆ.
Advertisement
ಏಪ್ರಿಲ್‌ನಿಂದ ಆಗಸ್ಟ್ ಅವಧಿಯಲ್ಲಿ ವಾಣಿಜ್ಯೋದ್ಯಮ ಕ್ಷೇತ್ರದಲ್ಲಿನ ಹೂಡಿಕೆಗೆ ಕೇಂದ್ರ ಸರ್ಕಾರ ಉತ್ತೇಜನ ನೀಡಿದ್ದರಿಂದ ಅದರ ಪ್ರಮಾಣ ಶೇ.35ಕ್ಕೆ ಏರಿಕೆಯಾಗಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಕೆ ಮಾಡಿದರೆ ಈ ಪ್ರಮಾಣ ಗಣನೀಯವಾಗಿ ಏರಿಕೆಯಾಗಿದೆ ಎಂದು ವರದಿ ಹೇಳಿದೆ.
ಸರ್ಕಾರಕ್ಕೆ ವಿವಿಧ ತೆರಿಗೆಗಳ ಮೂಲದಿಂದ ಬರುವ ಆದಾಯದ ಪ್ರಮಾಣ ಹೆಚ್ಚಾಗಿದೆ. ಹೆಚ್ಚಿನ ಪ್ರಮಾಣದ ವಿದೇಶಿ ವಿನಿಮಯ ನಿಧಿ, ರಫ್ತು ಕ್ಷೇತ್ರದಿಂದ ಉಂಟಾದ ಲಾಭ, ಸ್ಥಿರವಾಗಿರುವ ವಿದೇಶಿ ಬಂಡವಾಳ ಹೂಡಿಕೆಯಿಂದಾಗಿಯೂ ಮುಂದಿನ ದಿನಗಳಲ್ಲಿ ದೇಶದ ಅರ್ಥ ವ್ಯವಸ್ಥೆ ಸದೃಢವಾಗಿರುವ ಮುನ್ಸೂಚನೆ ನೀಡಿದೆ