Advertisement
ಕಾಂಗ್ರೆಸ್‌ನ 14 ಹಾಗೂ ಜೆಡಿಎಸ್‌ನ 3 ಶಾಸಕರು ಮೈತ್ರಿ ಸರ್ಕಾರದ ನಾಯಕತ್ವದ ವಿರುದ್ಧ ಬಂಡಾಯವೆದ್ದು ರಾಜೀನಾಮೆ ಸಲ್ಲಿಸಿದ್ದರು. ಅವರ ವಿರುದ್ಧ ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಅವರನ್ನು ಅನರ್ಹಗೊಳಿಸುವಂತೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಸ್ಪೀಕರ್‌ಗೆ ದೂರು ನೀಡಿದ್ದರು.
Related Articles
Advertisement
ಪಕ್ಷ ವಿರೋಧಿ ಚಟುವಟಿಕೆ, ಪಕ್ಷಾಂತರದ ಬಗ್ಗೆ ಸುಪ್ರೀಂ ಕೋರ್ಟ್ ನೈತಿಕತೆಯ ಹಿನ್ನೆಲೆಯಲ್ಲಿ ಪರೋಕ್ಷ ಚಾಟಿ ಬೀಸಿ 17 ಶಾಸಕರನ್ನು ಅನ ರ್ಹರು ಎಂದು ಹೇಳಿ ಯಾವುದೇ ಶಿಕ್ಷೆಗೆ ಗುರಿ ಪಡಿಸದೇ ಅವರಿಗೆ ಚುನಾವಣೆಗೆ ಸ್ಪರ್ಧಿಸಲು ಮುಕ್ತ ಅವಕಾಶ ಕಲ್ಪಿಸಿರುವುದು. ಕಾಂಗ್ರೆಸ್ ನಾಯಕರ ಗೊಂದಲಕ್ಕೆ ಕಾರಣವಾಗಿದೆ.
ಬಹಿರಂಗ ದಾಳಿಗೆ ಕೈ ಸಿದ್ಧತೆ: ಸಂವಿಧಾನದ 10 ನೇ ಪರಿಚ್ಚೇದದಲ್ಲಿ ಅನರ್ಹ ಶಾಸಕರ ಅನರ್ಹತೆಯ ಅವಧಿಯನ್ನು ನಿಗದಿಪಡಿಸುವ ಅಧಿಕಾರ ಸ್ಪೀಕರ್‌ಗೆ ಇಲ್ಲ ಎನ್ನುವ ಮೂಲಕ ಸುಪ್ರೀಂ ಕೊರ್ಟ್ ರಮೇಶ್ ಕುಮಾರ್ ಅವರ ಆದೇಶವನ್ನು ತಳ್ಳಿ ಹಾಕಿದ್ದರೂ. ಈ ವಿಚಾರದಲ್ಲಿ ಸಂವಿಧಾನದ 10 ನೇ ಪರಿಚ್ಚೇದ ಬಲಗೊಳಿಸುವ ಅಗತ್ಯವಿದೆ ಎಂಬ ಸಂದೇಶವನ್ನೂ ಸುಪ್ರೀಂ ಕೋಟ್ಟಂತಿದೆ. ಹೀಗಾಗಿ ಕಾಂಗ್ರೆಸ್‌ನಲ್ಲಿ ಕೊಂಚ ಸಮಾಧಾನವಿದೆ.
ಅನರ್ಹಗೊಳಿಸಿರುವುದು ನೈತಿಕ ಬಲ: ಸುಪ್ರೀಂ ತೀರ್ಪು ಕಾಂಗ್ರೆಸ್‌ಗೆ ಒಂದು ರೀತಿಯ ನೈತಿಕ ಬಲ ತಂದಂತಾಗಿದ್ದು, ಪಕ್ಷ ವಿರೋಧಿ ಚಟುವಟಿಕೆ ನಡೆಸಿ ಮೈತ್ರಿ ಸರ್ಕಾರ ಪತನಗೊಳ್ಳಲು ಕಾರಣರಾಗಿದ್ದ 17 ಶಾಸಕರು ಅನರ್ಹರು ಎಂದು ಸುಪ್ರೀಂ ಕೋರ್ಟ್ ಹೇಳಿರುವುದರಿಂದ ಈಗ ಡಿ. 5ರ ಉಪ ಚುನಾವಣೆಯಲ್ಲಿ ಅವರನ್ನು ಅನರ್ಹರು ಎಂದು ಬಹಿರಂಗವಾಗಿ ದಾಳಿ ಮಾಡಲು ಕಾಂಗ್ರೆಸ್‌ಗೆ ಅವಕಾಶ ದೊರೆತಿದೆ ಎಂಬ ಅಭಿಪ್ರಾಯ ಪಕ್ಷದ ವಲಯದಲ್ಲಿ ಕೇಳಿ ಬರುತ್ತಿದೆ.
ನ್ಯಾಯಾಲಯ ಶಾಸಕರ ಅನರ್ಹತೆ ಎತ್ತಿ ಹಿಡಿದಿದೆ. ಅನರ್ಹತೆ ಅನ್ನೋದು ಒಂದು ಶಿಕ್ಷೆ. ಅವರೆಲ್ಲ ಅನರ್ಹತೆ ಮುಖ ಇಟ್ಟುಕೊಂಡು ಚುನಾವಣೆಗೆ ಹೋಗಬೇಕಿದೆ. ಉಪಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡಿರುವುದು ಅನರ್ಹ ಶಾಸಕರಿಗೆ ಖುಷಿ ಆಗಿರಬಹುದು. ಆದರೆ, ಜನತಾ ನ್ಯಾಯಾಲಯದಲ್ಲಿ ಅವರಿಗೆ ಸೋಲು ಖಚಿತ.-ಎಸ್.ಆರ್. ಪಾಟೀಲ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ * ಶಂಕರ ಪಾಗೋಜಿ