Advertisement

Standard Deduction ಮಿತಿ 75000 ರೂ.ಗೆ ಏರಿಕೆ!

08:26 PM Jul 23, 2024 | Team Udayavani |

ಹೊಸದಿಲ್ಲಿ: ಮಧ್ಯಮವರ್ಗದ ಕೊಳ್ಳುವಿಕೆಯನ್ನು ಹೆಚ್ಚಳ ಮಾಡುವ ದೃಷ್ಟಿಯಲ್ಲಿ ಸ್ಟಾಂಡರ್ಡ್‌ ಡಿಡಕ್ಷನ್‌ ಮಿತಿಯನ್ನು ಕೇಂದ್ರ ಸರ್ಕಾರ ಹೆಚ್ಚಳ ಮಾಡಿದೆ. ಸ್ಟಾಂಡರ್ಡ್‌ ಡಿಡಕ್ಷನ್‌ನಲ್ಲಿ ಶೇ.50ರಷ್ಟು ಹೆಚ್ಚಳವನ್ನು ಘೋಷಣೆ ಮಾಡಲಾಗಿದ್ದು, ಇದು 50000 ರೂ.ನಿಂದ 750000 ರೂ.ಗೆ ಏರಿಕೆ ಮಾಡಲಾಗಿದೆ.

Advertisement

ಇದರ ಜತೆಗೆ ಕುಟುಂಬ ಪಿಂಚಣಿಯಲ್ಲಿನ ಕಡಿತವನ್ನೂ ಸಹ 15000 ರೂ.ನಿಂದ 25000 ರೂ.ಗೆ ಏರಿಕೆ ಮಾಡಲಾಗಿದೆ. ಇದು 4 ಕೋಟಿ ಸಂಬಳದಾರರಿಗೆ ನೆರವನ್ನು ನೀಡಲಿದೆ. ಇದು 2025-26ರ ಅಸೆಸ್‌ಮೆಂಟ್‌ ವರ್ಷಕ್ಕೆ ಚಾಲ್ತಿಗೆ ಬರಲಿದೆ. ಇದರಿಂದಾಗಿ ತೆರಿಗೆದಾರರು 17500 ರೂ.ವರೆಗೆ ಉಳಿತಾಯ ಮಾಡಬಹುದಾಗಿದೆ.

17500 ರೂ. ಲಾಭ ಹೇಗೆ?
ಹೊಸ ತೆರಿಗೆ ನೀತಿಯಿಂದ ತೆರಿಗೆದಾರರು 17500 ರೂ.ವರೆಗೂ ಉಳಿತಾಯ ಮಾಡಬಹುದಾಗಿದೆ. ತೆರಿಗೆದಾರರ ಆದಾಯ 2000000 ರೂ. ಇದ್ದರೆ, ಅದರಲ್ಲಿ 75000 ರೂ. ಸ್ಟಾಂಡರ್ಡ್‌ ಡಿಡಕ್ಷನ್‌ ಆಗುತ್ತದೆ. ಹೀಗಾಗಿ ಒಟ್ಟು 19,25,000 ರೂ.ಗೆ ತೆರಿಗೆ ಕಟ್ಟಬೇಕಾಗುತ್ತದೆ. ಇದಕ್ಕೆ 2,67,500 ರೂ. ತೆರಿಗೆ ಕಟ್ಟಬೇಕಾಗುತ್ತದೆ. ಹಳೆಯ ತೆರಿಗೆ ನೀತಿಯಲ್ಲಿ ಇಷ್ಟು ಆದಾಯಕ್ಕೆ 2,85,000 ರೂ. ತೆರಿಗೆ ಕಟ್ಟಬೇಕಾಗಿತ್ತು. ಹೊಸ ತೆರಿಗೆ ನೀತಿಯಲ್ಲಿ ಸೆಸ್‌ ಇಲ್ಲದೇ ತೆರಿಗೆದಾರರು 17500 ರೂ.ವರೆಗೂ ಉಳಿತಾಯ ಮಾಡಬಹುದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next