Advertisement

Tax ಸೆ. 12ರಂದು ಕರ್ನಾಟಕ ಸೇರಿ 5 ವಿಪಕ್ಷ ರಾಜ್ಯಗಳ ವಿತ್ತ ಸಚಿವರ ಸಭೆ

01:20 AM Sep 07, 2024 | Team Udayavani |

ತಿರುವನಂತಪುರ: ತೆರಿಗೆ ಪಾಲು ಹಂಚಿಕೆ ವಿಚಾರದಲ್ಲಿ ಕೇಂದ್ರ ಸರಕಾರದೊಂದಿಗೆ ಜಟಾಪಟಿ ನಡೆಸುತ್ತಿರುವ ವಿಪಕ್ಷಗಳ ಆಡಳಿತವಿರುವ ರಾಜ್ಯಗಳು ಈಗ ಒಗ್ಗಟ್ಟಾಗಿ ಹೋರಾಡುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿವೆ. ಸೆ.12ರಂದು 5 ರಾಜ್ಯಗಳ ಸಮ್ಮೇಳನ ಕೇರಳದ ತಿರುವನಂತಪುರದಲ್ಲಿ ನಡೆಯಲಿದೆ.

Advertisement

ಬಿಜೆಪಿಯೇತರ ಆಡಳಿತ ಇರುವ ರಾಜ್ಯಗಳಿಗೆ ಕೇಂದ್ರ ಸರಕಾರ ತೆರಿಗೆಯಲ್ಲಿ ಪಾಲು ನೀಡುತಿಲ್ಲ ಎಂಬ ಆರೋಪಗಳ ನಡುವೆಯೇ ಈ ಸಮ್ಮೇಳನ ನಡೆಯುತ್ತಿರುವುದು ಮಹತ್ವ ಪಡೆದಿದೆ. ಈ ಸಂದರ್ಭದಲ್ಲಿ 16ನೇ ಹಣಕಾಸು ಆಯೋಗದ ಮುಂದೆ ಇರಿಸಬೇಕಾದ ಬೇಡಿಕೆಗಳ ಬಗ್ಗೆಯೂ ಚರ್ಚಿಸಲಾಗುತ್ತದೆ ಎಂದು ಕೇರಳ ವಿತ್ತ ಸಚಿವ ಕೆ.ಎನ್‌.ಬಾಲಗೋಪಾಲ್‌ ತಿಳಿಸಿದ್ದಾರೆ.

ಕರ್ನಾಟಕದ ಕಂದಾಯ ಸಚಿವ ಕೃಷ್ಣಬೈರೇಗೌಡ ಈ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ ಎಂದು ಬಾಲಗೋಪಾಲ್‌ ಹೇಳಿದ್ದಾರೆ. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಈ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.