Advertisement

Kundapura: ಫೈನಾನ್ಸ್‌ ಸಾಲ ವಸೂಲಿಗಾರನಿಂದ ವಂಚನೆ

09:12 PM Sep 05, 2024 | Team Udayavani |

ಕುಂದಾಪುರ: ಕುಂದಾಪುರದ ಸ್ಪಂದನ ಪೂರ್ತಿ ಫೈನಾನ್ಸ್‌ ಹಣಕಾಸು ಸಂಸ್ಥೆಯ ಲೋನ್‌ ಆಫೀಸರ್‌ ರಾಘವೇಂದ್ರ ಅವರು ಸಾಲ ವಸೂಲಿಯ ಕಂತಿನಲ್ಲಿ ಸಂಗ್ರಹವಾದ 78 ಸಾವಿರ ರೂ.ಗಳನ್ನು ವಂಚಿಸಿದ ಕುರಿತು ಪ್ರಕರಣ ದಾಖಲಾಗಿದೆ.

Advertisement

ರಾಘವೇಂದ್ರ 401 ಗ್ರಾಹಕರ ಸಾಲದ ಕಂತನ್ನು ವಸೂಲಿ ಮಾಡುವ ಜವಾಬ್ದಾರಿ ಹೊಂದಿದ್ದು, ಅದರಲ್ಲಿ 27 ಸಾಲಗಾರರ ಸಾಲದ ಕಂತಿನ ಬಾಬ್ತು 78,650 ರೂ.ಗಳನ್ನು ಮಾಸಿಕವಾಗಿ ವಸೂಲಿ ಮಾಡಿ ಸಂಸ್ಥೆಯ ಸ್ಲಿಪ್‌ನಲ್ಲಿ ಸಾಲಗಾರರ ಸಹಿ ಪಡೆದುಕೊಂಡಿದ್ದಾನೆ. ಇಬ್ಬರು ಗ್ರಾಹಕರ ಸಾಲದ ಕಂತನ್ನು ತನ್ನ ಮೊಬೈಲ್‌ಗೆ ಹಾಕಿಸಿಕೊಂಡು ಹಣವನ್ನು ಸಂಸ್ಥೆಗೆ ನೀಡದೆ ಮೋಸ ಮಾಡಿದ್ದಾಗಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next