Advertisement

ಆಪರೇಷನ್‌ ಕ್ಲೀನ್‌ ಮನಿ: ರಿಟರ್ನ್ಸ್ ಸಲ್ಲಿಕೆ ಶೇ.25 ಏರಿಕೆ

07:10 AM Aug 08, 2017 | Team Udayavani |

ಹೊಸದಿಲ್ಲಿ: ಅಪನಗದೀಕರಣ ಪರಿಣಾಮ ಈ ವಿತ್ತೀಯ ವರ್ಷದಲ್ಲಿ ತೆರಿಗೆ ರಿಟನ್ಸ್‌ ಸಲ್ಲಿಕೆ ಪ್ರಮಾಣ ಶೇ.25ರಷ್ಟು (2.28 ಕೋಟಿ) ಹೆಚ್ಚಾಗಿದೆ. ತೆರಿಗೆ ಇಲಾಖೆ ಪ್ರಕಾರ, ಕಳೆದ ವಿತ್ತೀಯ ವರ್ಷದಲ್ಲಿ ವೈಯಕ್ತಿಕ ತೆರಿಗೆ ರಿಟರ್ನ್ಸ್ ಸಲ್ಲಿಕೆ 2.22 ಕೋಟಿ ಇದ್ದು, ಈ ವರ್ಷ ಆ.5ರವರೆಗೆ ಇದು 2.82 ಕೋಟಿಗೆ ಏರಿಕೆಯಾಗಿದೆ. ಅರ್ಥಾತ್‌ ಶೇ.25.3ರಷ್ಟು ಹೆಚ್ಚಳ ಕಂಡಿದೆ.

Advertisement

ಅಪನಗದೀಕರಣ ಬಳಿಕ “ಆಪರೇಷನ್‌ ಕ್ಲೀನ್‌ ಮನಿ’ ಪರಿಣಾಮ ತೆರಿಗೆ ರಿಟರ್ನ್ಸ್ ಸಲ್ಲಿಕೆ ಹೆಚ್ಚಳಗೊಂಡಿದೆ ಎಂದು ತೆರಿಗೆ ಇಲಾಖೆ ಹೇಳಿದೆ. ಅಲ್ಲದೇ ಅಪನಗದೀಕರಣದಿಂದಾಗಿ ಹೊಸ ತೆರಿಗೆ ಪಾವತಿದಾರರು ಹುಟ್ಟಿಕೊಂಡಿದ್ದಾರೆ. ನೇರ ತೆರಿಗೆ ಸಂಪಾದನೆಯಲ್ಲೂ ಹೆಚ್ಚಳವಾಗಿದೆ ಎಂದು ಇಲಾಖೆ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next