ವಿಜಯಪುರ: ಕಾರ್ಮಿಕ ದಂಪತಿಯನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಮುದ್ದೇಬಿಹಾಳ ತಾಲೂಕಿನ ಶಿರೋಳ-ಕೋಳೂರ ಗ್ರಾಮಗಳ ಮಧ್ಯೆ ಇರುವ ತೋಟದ ಮನೆಯಲ್ಲಿ ನಡೆದಿದೆ.
ಯಾದಗಿರಿ ಜಿಲ್ಲೆಯ ನಾರಾಯಣಪುರ ಬಳಿ ಇರುವ ಬಸರಿಗಿಡದ ತಾಂಡಾ ನಿವಾಸಿಗಳಾದ ಶಾಂತಿಲಾಲ ದೇವಲಪ್ಪ ರಾಠೋಡ (50) ಆತನ ಪತ್ನಿ ರುಕ್ಮಾಬಾಯಿ ದೇವಲಪ್ಪ ರಾಠೋಡ (45) ಕೊಲೆಗೀಡಾದ ದುರ್ದೈವಿಗಳು.
ಇದನ್ನೂ ಓದಿ :ಮರಾಠ ಅಭಿವೃದ್ಧಿ ಪ್ರಾಧಿಕಾರಕ್ಕೆ ವಿರೋಧ: ಕರ್ನಾಟಕ ಬಂದ್ ಗೆ ವಾಟಾಳ್ ನಾಗರಾಜ್ ಕರೆ
ಎರಡು ದಿನಗಳ ಹಿಂದೆಯೇ ಕೊಲೆ ಮಾಡಿ ತೋಟದ ಮನೆಯಲ್ಲಿ ಬೀಗ ಹಾಕಿಡಲಾಗಿತ್ತು ಎನ್ನಲಾಗಿದೆ. ತೋಟದ ಮಾಲಿಕ ಮುದ್ನಾಳ ಗ್ರಾಮದ ವೆಂಕನಗೌಡ ಪಾಟೀಲ ಸೋಮವಾರ ತೋಟಕ್ಕೆ ಹೋಗಿ ನೋಡಿದಾಗ ಕಾರ್ಮಿಕ ದಂಪತಿ ಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ.
ದಾಯಾದಿಗಳ ನಡುವಿನ ಆಸ್ತಿ ಕಲಹ ಕೊಲೆಗೆ ಕಾರಣ ಎಂದು ಪೊಲೀಸರಿಗೆ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.