ವಿಜಯಪುರ: ಅಕ್ರಮವಾಗಿ ಹೊಲದ ಇತರೆ ಬೆಳೆಗಳ ಮಧ್ಯೆ ಬೆಳೆದ ಗಾಂಜಾವನ್ನು ಖಚಿತ ಮಾಹಿತಿ ಮೇಲೆ ದಾಳಿ ನಡೆಸಿ ಸುಮಾರು 5.30 ಲಕ್ಷ ರೂ. ಮೌಲ್ಯದ ಗಾಂಜಾ ವಶಕ್ಕೆ ಪಡೆದು ಓರ್ವನನ್ನು ಬಂಧಿಸಲಾಗಿದೆ.
ತಿಕೋಟಾ ತಾಲೂಕಿನ ರತ್ನಾಪುರ ಗ್ರಾಮದ ರಾಮು ಗಗನಮಾಲಿ ತನ್ನ ಹೊಲದಲ್ಲಿ ಇತರೆ ಬೆಳೆಗಳ ಮಧ್ಯೆ ಗಾಂಜಾ ಬೆಳೆದಿದ್ದ. ಖಚಿತ ಮಾಹಿತಿ ಆಧರಿಸಿ ಅಬಕಾರಿ ವಿಚಕ್ಷಣಾ ನಿರೀಕ್ಷಕ ಮಹಾದೇವ ಪೂಜಾರಿ ಹಾಗೂ ತಿಕೋಟಾ ತಹಶಿಲ್ದಾರ ಮಹಾದೇವ ಪೂಜಾರಿ ನೇತೃತ್ವದಲ್ಲಿ ದಾಳಿ ನಡೆಸಿದಾಗ ಅಕ್ರಮವಾಗಿ ಬೆಳೆದ 315 ಕೆಜಿ ಹಸಿಗಾಂಜಾ 3 ಒಣಗಾಂಜಾ ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ:ಎಂಜಿನಿಯರಿಂಗ್ ಸಂಶೋಧನೆ ಮತ್ತು ಅಭಿವೃದ್ಧಿ ನೀತಿ-2021 ಪ್ರಕಟಿಸಿದ ಡಿಸಿಎಂ ಅಶ್ವತ್ಥನಾರಾಯಣ
ಬೆಳಗಾವಿ ಅಬಕಾರಿ ಜಾರಿ ನಿರ್ದೇಶನಾಲಯದ ಅಪರಾಧ ವಿಭಾಗದ ಆಯುಕ್ತ ಡಾ.ವೈ.ಮಂಜುನಾಥ ಮಾರ್ಗದರ್ಶನದಲ್ಲಿ ನಡೆದ ದಾಳಿಯಲ್ಲಿ ಅಬಕಾರಿ ಪಿಎಸ್ಐ ಪ್ರಕಾಶ ಜಾಧವ, ಸಿಬ್ಬಂದಿ ಆಶ್ರೀತ್, ಈರಗೊಂಡ ಹಟ್ಟಿ, ಭೀಮಣ್ಣ ಕುಂಬಾರ, ಚಾಲಕ ಪರಶುರಾಮ ತೆಲಗಿ, ಪ್ರಜ್ವಲ ಭಜಂತ್ರಿ ಪಾಲ್ಗೊಂಡಿದ್ದರು.