Advertisement
ಹತ್ಯೆಯಾದ ಟಕ್ಕಳಕಿ ತಾಂಡಾ-1 ರ ನಿವಾಸಿ ಪುನ್ನಪ್ಪ ಪವಾರನ ಹತ್ಯೆಗೆ ಸುಪಾರಿ ಹಣ ನೀಡಿದ ಹಂತಕ ಪತ್ನಿ ನಗರದ ಬಂಜಾರಾ ತಾಂಡಾ ನಿವಾಸಿ ಲಲಿತಾ ಪುನ್ನಪ್ಪ ಪವಾರ (41), ಸುಪಾರಿ ಹತ್ಯೆ ಮಾಡಿದ ಭೂತನಾಳ ತಾಂಡಾದ ಶಂಕರ ಉರ್ಫ ಸಂಕ್ರೆ ಠಾಕ್ರೂ ಪವಾರ (42), ಪ್ರಕಾಶ ಪೋಮಿ ಚವ್ಹಾಣ (35), ಅನಿಲ ಹೇಮು ರಾಠೋಡ (28), ಅಪ್ಪು ಉರ್ಫ ಗಣ್ಯಾ ಧರ್ಮು ರಾಠೋಡ (28) ಹಾಗೂ ಜಾಲಗೇರಿ ತಾಂಡಾದ ಸುನಿಲ ಉಮೇಶ ರಾಠೋಡ (25) ಇವರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
Related Articles
Advertisement
ಹತ್ಯೆಯ ಕುರಿತು ಹಂತಕರು ಯಾವುದೇ ಸುಳಿವನ್ನು ನೀಡಿರದ ಕಾರಣ ಪೊಲೀಸರಿಗೆ ಈ ಪ್ರಕರಣ ಬೇಧಿಸುವುದು ಸವಾಲಿನ ಕೆಲಸವಾಗಿತ್ತು. ಹೀಗಾಗಿ ಎಸ್ಪಿ ಆನಂದಕುಮಾರ ಅವರು ಎಎಸ್ಪಿ ರಾಮ ಅರಸಿದ್ಧಿ ಅವರ ಮಾರ್ಗದರ್ಶನದಲ್ಲಿ ವಿಜಯಪುರ ಡಿಎಸ್ಪಿ ಲಕ್ಷ್ಮಿನಾರಾಯಣ ನೇತೃತ್ವದಲ್ಲಿ ವಿಜಯಪುರ ಗ್ರಾಮೀಣ ಸಿಪಿಐ ಸಂಗಮೇಶ ಪಾಲಭಾವಿ, ಎಸೈಗಳಾದ ಎ.ಎಸ್.ರಾಠೋಡ, ಎಸ್.ಕೆ.ಲಂಗೋಟಿ ಇವರೊಂದಿಗೆ ಸುಮಾರು 10 ಪೊಲೀಸ್ ಸಿಬ್ಬಂದಿಯ ವಿಶೇಷ ತನಿಖಾ ತಂಡವನ್ನು ರಚಿಸಿದ್ದರು.
ಸದರಿ ತನಿಖಾ ತಂಡ ವಿಜಯಪುರ ಜಿಲ್ಲೆಯಲ್ಲಿ ಮಾತ್ರವಲ್ಲದೇ ಬಾಗಲಕೋಟೆ, ಕಲಬುರ್ಗಿ ಹಾಗೂ ಮಹಾರಾಷ್ಟ್ರ ರಾಜ್ಯದಲ್ಲಿ ಸಂಚರಿಸಿ, ಸುಪಾರಿ ಹತ್ಯಾ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ತನಿಖಾ ತಂಡಕ್ಕೆ ಸೂಕ್ತ ಬಹುಮಾನ ಘೋಷಿಸಲಾಗಿದೆ ಎಂದು ಎಸ್ಪಿ ಆನಂದಕುಮಾರ ವಿವರಿಸಿದ್ದಾರೆ.