ತೆಲಸಂಗ: ಶುಕ್ರವಾರ ರಾತ್ರಿ ಗ್ರಾಮದಲ್ಲಿ ಸರಣಿಗಳ್ಳತನ ನಡೆದಿದ್ದು, ಕಳ್ಳರ ಕೈ ಚಳಕಕ್ಕೆ ಜನ ಭಯಭೀತರಾಗಿದ್ದಾರೆ.ಬೇಸಿಗೆ ಬಿಸಿ ತಾಳಲಾಗದೆ ತಂಪಾಗಿಸೂಸುವ ಗಾಳಿಯಲ್ಲಿ ಮಲಗಲುಮನೆಗೆ ಬೀಗ ಜಡಿದು ಮಾಳಗಿ ಮೇಲೆಮಲಗಿದ್ದ ಮನೆಗಳನ್ನೇ ಟಾರ್ಗೆಟ್‌ಮಾಡಿದ ಕಳ್ಳರು 6 ಮನೆ ಹಾಗೂಒಂದು ದೇವಸ್ಥಾನಕ್ಕೆ ಕನ್ನ ಹಾಕಿ ನಗ-ನಾಣ್ಯ ದೋಚಿದ್ದಾರೆ.
ಗ್ರಾಮದ ಹೊರಟ್ಟಿಯಲ್ಲಿನ ಗುರುದೇವ ನಿಂಗಪ್ಪ ಜಮಖಂಡಿಮನೆ ಕೀಲಿ ಕೊರೆದು 1 ತೊಲೆ ಚಿನ್ನ,1 ಮೊಬೈಲ್, 20 ಸಾವಿರ ನಗದು;ಹಣಮಂತ ನಿಂಗಪ್ಪ ಜಮಖಂಡಿ ಅವರ ಮನೆಯಲ್ಲಿ 3 ತೊಲೆ ಚಿನ್ನದಸರ, 20 ಸಾವಿರ ನಗದು; ಬಸೀರ ಬಾಶಾಸಾಹೇಬ ಅಪರಾಜರ್ ಅವರ ಮನೆಯಲ್ಲಿ 6 ಲಕ್ಷ; ಅಕಬರ ಕರಜಗಿ ಅವರ ಮನೆಯಲ್ಲಿ 7 ಸಾವಿರ ನಗದು; ಗುರು ಮಾದರ ಮನೆಯಲ್ಲಿ 2 ಲಕ್ಷ ಹಣ ದೋಚಿದ್ದಾರೆ. ಅಲ್ಲದೇ ವಿಠಲ ದೇವಸ್ಥಾನದ ಗರ್ಭಗುಡಿ ಕೊಂಡಿ ಕೊರೆದು 1 ಕೆಜಿ ಬೆಳ್ಳಿ ಕಿರೀಟ, 1 ತೊಲೆ ಚಿನ್ನ ದೋಚಿದ್ದಾರೆ.
ಆಯುಧ ಹಿಡಿದು ನುಗ್ಗಿದರು: ನಾಲ್ಕು ಜನರ ದಂಡು ಆಯುಧಹಿಡಿದು ಗ್ರಾಮದೊಳಕ್ಕೆ ನುಗ್ಗಿದ್ದು,ಬೈಕ್ ಸವಾರನೋರ್ವನಿಗೆ ಹಲ್ಲೆ ಮಾಡಲೆತ್ನಿಸಿದ್ದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಆಯುಧದೊಂದಿಗೆಶುಕ್ರವಾರ ರಾತ್ರಿ ತೆಲಸಂಗಕ್ಕೆ ನುಗ್ಗಿರುವಕಳ್ಳರ ಗುಂಪು, ಇತ್ತೀಚಿಗೆ ವಿವಿಧಗ್ರಾಮಗಳಲ್ಲಿ ನಡೆದಿರುವ ಕಳ್ಳತನ, ತಿಂಗಳಹಿಂದೆ ಗ್ರಾಮದಲ್ಲಿ ನಡೆದಿದ್ದ ಕಳ್ಳತನಹಾಗೂ ಗುರುವಾರ ರಾತ್ರಿ ಕೊಕಟನೂರ ಗ್ರಾಮದಲ್ಲಿ ನಡೆದಿರುವ ಕಳ್ಳತನದ ಸುದ್ದಿಜನರನ್ನು ಭಯಭೀತರನ್ನಾಗಿ ಮಾಡಿವೆ.
6 ತಿಂಗಳಿಂದ ನಡೆಯುತ್ತಿವೆ: ಅಥಣಿ ತಾಲೂಕಿನ ಕೊಟ್ಟಲಗಿ, ಕಕಮರಿ, ಕನ್ನಾಳ, ಕೊಕಟನೂರ ಸೇರಿದಂತೆವಿವಿಧ ಗ್ರಾಮಗಳಲ್ಲಿ 6 ತಿಂಗಳಿಂದ ಬೀಗಜಡಿದ ಮನೆಗಳನ್ನೇ ಟಾರ್ಗೆಟ್‌ಮಾಡಿ ಮನೆ ಕೀಲಿ ಕೊರೆದು ಒಳ ನುಗ್ಗಿ ಕಳವು ಮಾಡುತ್ತಿದ್ದಾರೆ. ಇನ್ನುವರೆಗೂ ಪೊಲೀಸರಿಗೆ ಯಾವೊಂದು ಸುಳಿವುಸಿಕ್ಕಿಲ್ಲ. ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಿರುವ ತಂಡ ಬಲೆಗೆ ಬೀಳುವುದು ಯಾವಾಗ ಎಂದು ಜನ ಪ್ರಶ್ನೆ ಮಾಡುತ್ತಿದ್ದಾರೆ.
ಶ್ವಾನದಳದಿಂದ ಕಾರ್ಯಾಚರಣೆ: ಸರಣಿಗಳ್ಳತನ ಸುದ್ದಿ ತಿಳಿಯುತ್ತಿದ್ದಂತೆ ರಾತ್ರಿಯಿಂದಲೇ ಕಾರ್ಯಾಚರಣೆಗಿಳಿದಅಥಣಿ ಸಿಪಿಐ ಶಂಕರಗೌಡ ಬಸನಗೌಡರಹಾಗೂ ಐಗಳಿ ಠಾಣಾ ಪಿಎಸ್‌ಐ ಶಿವರಾಜನಾಯಕವಾಡಿ, ಸಿಸಿ ಕ್ಯಾಮರಾ ಫುಟೇಜ್‌ಕಲೆ ಹಾಕುವುದು, ಸ್ಥಾನಿಕ ವಿಚಾರಣೆಮಾಡುವುದು ಮತ್ತು ಶ್ವಾನದಳದಕಾರ್ಯಾಚರಣೆ ಮೂಲಕ ಕಳ್ಳರ ಸೆರೆಹಿಡಿಯುಲು ಬಲೆ ಬೀಸಿದ್ದಾರೆ. ಕಳ್ಳತನಘಟನೆಗಳಿಂದ ಜನ ಹುಷಾರಾಗಿರುವಂತೆ ಮನವಿ ಮಾಡಿದ್ದಾರೆ.