ಬೆಂಗಳೂರು: ಪ್ರಥಮ ವರ್ಷದ ಪಿಯುಸಿ ವಿದ್ಯಾರ್ಥಿಯೊಬ್ಬ ಸೆಲ್ಫಿ ವಿಡಿಯೋ ಮಾಡಿ ಪೋಷಕರಿಗೆ ಕಳುಹಿಸಿ ಅಪಾರ್ಟ್‌ಮೆಂಟ್‌ನ 23ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೋಣನಕುಂಟೆ ಠಾಣೆ ವ್ಯಾಪ್ತಿಯಲ್ಲಿ ಜರುಗಿದೆ.
ಕೋಣನಕುಂಟೆಯ ನಿವಾಸಿ ಆರ್. ಅಂಜನ್ (17) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ.
ಸ್ಥಳೀಯ ಪಿಯುಸಿ ಕಾಲೇಜಿ ನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಅಂಜನ್, ಕೋಣನಕುಂಟೆಕ್ರಾಸ್‌ನಲ್ಲಿರುವ ಪ್ರಸ್ಟೀಜ್ ಪಾಲ್ಕನ್ ಸಿಟಿಅಪಾರ್ಟ್‌ಮೆಂಟ್‌ನ 23ನೇಮಹಡಿಯಲ್ಲಿರುವ ದೊಡ್ಡಪ್ಪನ ಫ್ಲ್ಯಾಟ್ ಭಾನುವಾರ ಬಂದಿದ್ದ. ದೊಡ್ಡಪ್ಪನ ಮಗಅಚಲ್ ಜತೆ ಟೀವಿಯಲ್ಲಿ ಕ್ರಿಕೆಟ್ ವೀಕ್ಷಿಸುತ್ತಿದ್ದರು. ನಂತರ ಇಬ್ಬರು ಮಲಗಿದ್ದಾರೆ.ಈ ಮಧ್ಯೆ ಮುಂಜಾನೆ 4 ಗಂಟೆ ಸುಮಾರಿಗೆ ಫ್ಲ್ಯಾಟ್‌ನ ಬಾಲ್ಕನಿ ಬಳಿ ಬಂದ ಅಂಜನ್ ಅಲ್ಲಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಕೆಳಗೆ ಬಿದ್ದ ಶಬ್ದ ಕೇಳಿ ಅಪಾರ್ಟ್ ಮೆಂಟ್‌ನ ಭದ್ರತಾ ಸಿಬ್ಬಂದಿ ಸ್ಥಳಕ್ಕೆ ಬಂದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ತನಿಖೆ ಮುಂದುವರಿದಿದೆ ಎಂದು ಪೊಲೀಸರು ಹೇಳಿದರು.
ಆತ್ಮಹತ್ಯೆಗೂ ಮುನ್ನ ವಿಡಿಯೋ :
ಆತ್ಮಹತ್ಯೆಗೂ ಮೊದಲು ಅಂಜನ್ ಸೆಲ್ಫಿ ವಿಡಿಯೋ ಮಾಡಿ, ಅದನ್ನು ಪೋಷಕರಿಗೆ ವಾಟ್ಸ್‌ಆ್ಯಪ್ ಕಳುಹಿಸಿದ್ದಾನೆ. ಅದರಲ್ಲಿ “ನಾನು ದಪ್ಪ ಇದ್ದೇನೆ ಎಂದಾಗಲಿ ಅಥವಾ ಪ್ರೇಮ ವೈಫಲ್ಯದಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿಲ್ಲ. ಕ್ಷಮಿಸಿ ಅಪ್ಪ-ಅಮ್ಮ’ ಎಂದು ವಿಡಿಯೋದಲ್ಲಿಆತ ಹೇಳಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.