Advertisement

Gaza: ಗಾಜಾದಲ್ಲಿ ನಿಲ್ಲದ ವೈಮಾನಿಕ ದಾಳಿ- ದಾಳಿಯಿಂದ ನೆರವಿಗೆ ತೊಂದರೆ: ವಿಶ್ವಸಂಸ್ಥೆ

11:13 PM Oct 25, 2023 | Team Udayavani |

ಟೆಲ್‌ ಅವಿವ್‌: ಗಾಜಾ ಪಟ್ಟಿಯ ಮೇಲೆ ಇಸ್ರೇಲ್‌ನಿಂದ ಬಾಂಬ್‌ ದಾಳಿಗಳು ತೀವ್ರಗೊಂಡಿದೆ. ಇದೇ ವೇಳೆ ತನಗೆ ಕೂಡಲೇ ಇಂಧನ ಒದಗಿಸದಿದ್ದರೆ ಗಾಜಾ ಪಟ್ಟಿಯಲ್ಲಿ ನೆರವಿನ ಕಾರ್ಯವನ್ನು ಸ್ಥಗಿತಗೊಳಿಸಲಾಗುವುದು ಎಂದು ವಿಶ್ವಸಂಸ್ಥೆ ಎಚ್ಚರಿಸಿದೆ.

Advertisement

ಈಗಾಗಲೇ ಸಿಬಂದಿ ಕೊರತೆ ಹಾಗೂ ಸಂಪನ್ಮೂಲ ಕೊರತೆಯ ಕಾರಣ ಗಾಜಾ ನಗರದ ಹಲವು ಆಸ್ಪತ್ರೆಗಳು ತಮ್ಮ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿವೆ. ಅಗತ್ಯ ವಸ್ತುಗಳ ಹಾಗೂ ಮೂಲ ಸೌಕರ್ಯಗಳ ಕೊರತೆಯಿಂದಾಗಿ ನೆರವು ಕಾರ್ಯಾಚರಣೆ ಮುಂದುವರಿಸುವುದು ಕಷ್ಟಕರ ಎಂದು ವಿಶ್ವಸಂಸ್ಥೆ ಹೇಳಿದೆ.

8 ಸಿರಿಯಾ ಯೋಧರ ಸಾವು: ಇಸ್ರೇಲ್‌ ನಡೆಸಿದ ವಾಯು ದಾಳಿಗೆ ಸಿರಿಯಾದ 8 ಯೋಧರು ಮೃತಪಟ್ಟಿದ್ದಾರೆ. ಅಲ್ಲೆಪ್ಪೊ ವಿಮಾನ ನಿಲ್ದಾಣದ ಮೇಲೆ ಪುನಃ ಇಸ್ರೇಲ್‌ ಬಾಂಬ್‌ ದಾಳಿ ನಡೆಸಿದೆ. ಕಳೆದ 15 ದಿನಗಳಲ್ಲಿ ಅಲ್ಲೆಪ್ಪೊ ವಿಮಾನ ನಿಲ್ದಾಣದ ಮೇಲೆ ಇಸ್ರೇಲ್‌ ವಾಯು ಸೇನೆ ದಾಳಿ ಮಾಡಿರುವುದು ಇದು ನಾಲ್ಕನೇ ಬಾರಿ ಎಂದು ಸಿರಿಯಾ ವಿದೇಶಾಂಗ ಸಚಿವಾಲಯ ತಿಳಿಸಿದೆ.

750ಕ್ಕೂ ಹೆಚ್ಚು ಮಂದಿ ಸಾವು: ಇನ್ನೊಂದೆಡೆ ಗಾಜಾದ ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ, ಇಸ್ರೇಲ್‌ ಸೇನೆಯ ವಾಯು ದಾಳಿಯಿಂದ ಮಂಗಳವಾರ ಮತ್ತು ಬುಧವಾರ ಗಾಜಾದಲ್ಲಿ 750ಕ್ಕೂ ಹೆಚ್ಚು ಮಂದಿ ಅಸುನೀಗಿದ್ದಾರೆ ಎಂದು ತಿಳಿಸಿದೆ. ಆದರೆ ಈ ಪೈಕಿ ಹಮಾಸ್‌ ಉಗ್ರರು ಎಷ್ಟು ಎಂಬುದನ್ನು ಅದು ಬಹಿರಂಗಪಡಿಸಿಲ್ಲ. ಅ.7ರಿಂದ ಇದುವರೆಗೆ ಗಾಜಾ ಪಟ್ಟಿಯಲ್ಲಿ

6,546ಕ್ಕೂ ಅಧಿಕ, ಇಸ್ರೇಲ್‌ನಲ್ಲಿ 1,400 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

Advertisement

ಉಗ್ರ ಸಂಘಟನೆಯಲ್ಲ: “ಹಮಾಸ್‌ ಉಗ್ರ ಸಂಘಟನೆಯಲ್ಲ. ಬದಲಾಗಿ ತನ್ನ ಭೂಮಿಯನ್ನು ರಕ್ಷಿಸಲು ಹೋರಾಟ ನಡೆಸುತ್ತಿರುವ ವಿಮೋಚನ ಸಂಘಟನೆ” ಎಂದು ಟರ್ಕಿ ಅಧ್ಯಕ್ಷ ರೀಪ್‌ ತಯ್ಯಿಪ್‌ ಎರ್ಡೋಗನ್‌ ಪ್ರತಿಪಾದಿಸಿದ್ದಾರೆ. “ಇಸ್ರೇಲ್‌ ಮತ್ತು ಹಮಾಸ್‌ ಕೂಡಲೇ ಕದನ ವಿರಾಮ ಘೋಷಿಸಬೇಕು. ಗಾಜಾ ಪಟ್ಟಿಯಲ್ಲಿ ಶಾಂತಿ ನೆಲೆಸಲು ಎಲ್ಲ ಮುಸ್ಲಿಂ ರಾಷ್ಟ್ರಗಳ ಒಟ್ಟಾಗಿ ಕೆಲಸ ಮಾಡಬೇಕು. ಗಾಜಾ ಮೇಲಿನ ದಾಳಿಯನ್ನು ಕೂಡಲೇ ಸ್ಥಗಿತಗೊಳಿಸುವಂತೆ ವಿಶ್ವ ಸಮುದಾಯವು ಇಸ್ರೇಲ್‌ ಮೇಲೆ ಒತ್ತಡ ಹೇರಬೇಕು’ ಎಂದು ಆಗ್ರಹಿಸಿದ್ದಾರೆ.

ಫ್ರಾನ್ಸ್‌ ನೆರವಿನ ಹಸ್ತ: ಗಾಜಾ ಪಟ್ಟಿಯಲ್ಲಿರುವ ಆಸ್ಪತ್ರೆಗಳ ನೆರವಿಗಾಗಿ ಔಷಧಗಳು ಹಾಗೂ ವೈದ್ಯಕೀಯ ಪರಿಕರಗಳನ್ನು ಹೊತ್ತ ಫ್ರಾನ್ಸ್‌ ನೌಕಾ ಪಡೆಯ ಹಡಗು ಶೀಘ್ರ ಗಾಜಾ ಕರಾವಳಿಗೆ ತೆರಳಲಿದೆ ಎಂದು ಫ್ರಾನ್ಸ್‌ ಅಧ್ಯಕ್ಷ ಎಮ್ಯಾನುಯಲ್‌ ಮ್ಯಾಕ್ರಾನ್‌ ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next