Advertisement

ಹೆಚ್ಚು ಮಕ್ಕಳಿದ್ದರೆ ಆಂಧ್ರದಲ್ಲಿ ಪ್ರೋತ್ಸಾಹಧನ!

12:30 AM Dec 30, 2018 | |

ಹೈದರಾಬಾದ್‌: ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದುವ ದಂಪತಿಗೆ ಪ್ರೋತ್ಸಾಹಧನ ನೀಡಲು ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ನಿರ್ಧರಿಸಿದ್ದಾರೆ. ಅಷ್ಟೇ ಅಲ್ಲ, ಎರಡಕ್ಕಿಂತ ಹೆಚ್ಚು ಮಕ್ಕಳಿರುವವರು ಸ್ಥಳೀಯ ಚುನಾವಣೆಯಲ್ಲಿ ಸ್ಪರ್ಧಿಸಬಾರದು ಎಂಬ ನಿಷೇಧವನ್ನೂ ತೆಗೆದುಹಾಕಲು ನಿರ್ಧರಿಸಿದ್ದಾರೆ. 10 ವರ್ಷದಲ್ಲಿ ರಾಜ್ಯದ ಜನಸಂಖ್ಯೆ ಶೇ. 1.6ರಷ್ಟು ಕುಸಿದಿದೆ. ಇದು ಭೌಗೋಳಿಕ ಅಸಮ ತೋಲನಕ್ಕೆ ಕಾರಣವಾಗುತ್ತಿದೆ. ಮುಂದಿನ ಎರಡು ದಶಕಗಳಲ್ಲಿ ರಾಜ್ಯದಲ್ಲಿ ಕೆಲಸ ಮಾಡಲು ಅರ್ಹ ಯುವ ಕರಿಗಿಂತ ವೃದ್ಧರ ಸಂಖ್ಯೆಯೇ ಹೆಚ್ಚಾಗುತ್ತದೆ ಎಂದು ನಾಯ್ಡು ಹೇಳಿದ್ದಾರೆ.

Advertisement

ರಾಜ್ಯದಲ್ಲಿ ಯುವಕರ ಸಂಖ್ಯೆ ಶೇ. 50 ಇದೆ. ಯುವಕರ ಸಂಖ್ಯೆ ಹೆಚ್ಚಲು ಮಕ್ಕಳ ಸಂಖ್ಯೆಯೂ ಹೆಚ್ಚಬೇಕಿದೆ ಎಂದು ಅವರುಹೇಳಿದ್ದಾರೆ. ಯುವಕರ ಸಂಖ್ಯೆಯಲ್ಲಿ ಇಳಿಕೆಯಾಗಿರುವುದಕ್ಕೆ ಕುಟುಂಬ ಕಲ್ಯಾಣ ಯೋಜನೆಯ ಜಾರಿಯೇ ಕಾರಣವಾಗಿದೆ ಎಂಬುದು ನಾಯ್ಡು ಅಭಿಪ್ರಾಯವಾಗಿದೆ. 2011ರ ಜನಗಣತಿಯ ಪ್ರಕಾರ ಅವಿಭಜಿತ ಆಂಧ್ರಪ್ರದೇಶವು ದೇಶದಲ್ಲಿ 10ನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next