Advertisement

2030ರ ವೇಳೆಗೆ 4.5 ಲಕ್ಷ ಮೆಗಾವ್ಯಾಟ್‌ ವಿದ್ಯುತ್‌ ಉತ್ಪಾದನೆ ಗುರಿ

04:16 PM Dec 19, 2020 | Suhan S |

ಬ್ಯಾಡಗಿ: ಸೌರಶಕ್ತಿ, ಪವನಶಕ್ತಿ ಸೇರಿದಂತೆ ಇನ್ನಿತರ ಅಸಂಪ್ರದಾಯಿಕ ಶಕ್ತಿಗಳನ್ನುಬಳಸಿಕೊಂಡು 2030ರ ವೇಳೆಗೆ 4.5 ಲಕ್ಷಮೆಗಾವ್ಯಾಟ್‌ ವಿದ್ಯುತ್‌ ಉತ್ಪಾದನೆ ಮಾಡುವಮೂಲಕ ಕೈಗಾರಿಕೆಗಳ ಅಭಿವೃದ್ಧಿ ಮತ್ತು ಕತ್ತಲೆ ರಹಿತ ಭಾರತ ಮಾಡುವ ಉದ್ದೇಶವನ್ನು ಪ್ರಧಾನಿನರೇಂದ್ರ ಮೋದಿ ಹೊಂದಿರುವುದಾಗಿ ಸಂಸದ ಶಿವಕುಮಾರ ಉದಾಸಿ ಹೇಳಿದರು.

Advertisement

ಟಾಟಾ ಪವರ್‌ ಸೋಲಾರ್‌ ಸಿಸ್ಟಮ್ಸ್‌ ಲಿ. ಬೆಂಗಳೂರ ಇವರ ಸಹಭಾಗಿತ್ವದಲ್ಲಿ ಪಟ್ಟಣದ ಕೈಲಾಸ್‌ ಕೋಲ್ಡ್‌ ಸ್ಟೋರೆಜ್‌ನಲ್ಲಿಅಳವಡಿಸಿರುವ 94 ಕಿ.ವ್ಯಾ. ಉತ್ಪಾದನಾಸಾಮರ್ಥ್ಯದ ಸೌರಶಕ್ತಿ ಘಟಕ ಉದ್ಘಾಟಿಸಿಅವರು ಮಾತನಾಡಿದರು. ಅಂತಾರಾಷ್ಟ್ರೀಯಮಟ್ಟದಲ್ಲಿ ಸ್ವಾವಲಂಬನೆಗೆ ನಾವೆಲ್ಲ ನೂತನ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕಾಗಿದೆ. ಅದರ ಮುಂದುವರಿದ ಭಾಗವಾಗಿ ಇವತ್ತು ನಿಸರ್ಗದಲ್ಲಿ ಉಚಿತವಾಗಿ ದೊರೆಯುತ್ತಿರುವ ಸೌರಶಕ್ತಿ ಪವನಶಕ್ತಿಗಳ ಸದ್ಭಳಕೆಗೆ ಮುಂದಾಗಬೇಕಾಗಿದೆ ಎಂದರು.

ರೈತರು ತಮ್ಮ ಪಂಪ್‌ಸೆಟ್‌ಗಳಿಗೂ ಸೋಲಾರ್‌ ಅಥವಾ ಪವನಶಕ್ತಿ ಅಳವಡಿಸಿಕೊಂಡಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಆತ್ಮ ನಿರ್ಭರ ಅತ್ಯಂತಪರಿಣಾಮಕಾರಿಯಾಗಿ ಯಶಸ್ವಿಯಾಗಲಿದೆ.ವಿದ್ಯುತ್‌ಗಾಗಿ ರೈತರು ಹೋರಾಟ ನಡೆಸುವಪ್ರಮೇಯ ಇರುವುದಿಲ್ಲ. ರೈತರು ತಮ್ಮಜೀವಪಣಕ್ಕಿಟ್ಟು ಹಗಲು-ರಾತ್ರಿಯೆನ್ನದೇಹೊಲಗಳಿಗೆ ನೀರು ಹಾಯಿಸಬೇಕೆನ್ನುವ ಪ್ರಶ್ನೆ ಎದುರಾಗುವುದಿಲ್ಲ ಎಂದರು.

ಜಾಗತಿಕ ತಾಪಮಾನ ಇದೀಗ ಬಹುಚರ್ಚಿತ ವಿಷಯವಾಗಿದ್ದು, ಬರುವವರ್ಷಗಳಲ್ಲಿ ಕನಿಷ್ಟ 3 ಸೆಂಟಿಗ್ರೇಡ್‌ನ‌ಷ್ಟುತಾಪಮಾನ ಹೆಚ್ಚಾಗಲಿದೆ ಎಂದು ವರದಿಯೊಂದು ತಿಳಿಸಿದೆ. ಇದರಿಂದ ಮನುಷ್ಯ ಸೇರಿದಂತೆ ಪ್ರಾಣಿ ಸಂಕುಲಗಳ ಮೇಲೆ ವ್ಯತಿರಿಕ್ತಪರಿಣಾಮ ಬೀರಲಿದೆ. ಆದರೆ ಈಗಾಗಲೇ ಅಕಾಲಿಕವಾಗಿ ಮಳೆ, ಶೀತ ಹಾಗೂ ಬಿಸಿಲುಬೀಳುತ್ತಿದ್ದು, ಋತುಗಳಲ್ಲಿ ಬದಲಾವಣೆ ಕಾಣುತ್ತಿದೆ ಎಂದರು.

ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಮಾತನಾಡಿ, ಬೆಳೆಯುತ್ತಿರುವ ಜನಸಂಖ್ಯೆಗೆ ಮೂಲ ಸೌಕರ್ಯಗಳನ್ನು ಕಲ್ಪಿಸಲು ಸರ್ಕಾರಗಳು ಹೆಣಗಾಡುವಂತಾಗಿದೆ. ಹೀಗಾಗಿ ಪ್ರಕೃತಿಯಲ್ಲಿ ಉಚಿತವಾಗಿ ಸಿಗುವಂತಹ ಎಲ್ಲ ಶಕ್ತಿ ಗಳನ್ನು ಅನಿವಾರ್ಯವಾಗಿ ಬಳಸುವುದು ಸರ್ಕಾರಗಳಿಗೆ ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ಸದರಿಕೋಲ್ಡ್‌ ಸ್ಟೋರೇಜ್‌ ಮಾಲೀಕರು ಸೌರಶಕ್ತಿಬಳಕೆಗೆ ಮುಂದಾಗಿರುವುದು ಅತ್ಯಂತ ಸ್ವಾಗತಾರ್ಹವೆಂದರು.

Advertisement

ಸೌರಶಕ್ತಿ ಬಳಕೆ ಮಾಡುವ ಮೂಲಕ ಭಾರತ ಇನ್ನಿತರ ದೇಶಗಳಿಗೆ ಮಾದರಿಯಾಗುವ ಕಾಲಸನ್ನಿಹಿತ. ಇದಕ್ಕಾಗಿ ಪ್ರಧಾನಿ ಮೋದಿಯವರುಪಣತೊಟ್ಟು ನಿಂತಿದ್ದು, ದೇಶದ ಸಾರ್ವಜನಿಕರುಅವರಿಗೆ ಸಾಥ್‌ ನೀಡಬೇಕಾಗಿದೆ. ಉತ್ಪಾದನೆಗಿಂತ ವೆಚ್ಚವೇ ಹೆಚ್ಚಾದಲ್ಲಿ ಸರಿದೂಗಿಸಲು ಪರ್ಯಾಯಮಾರ್ಗವನ್ನು ಕಂಡುಕೊಳ್ಳಲು ಸಾಧ್ಯವಿಲ್ಲ.ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿಇಂತಹದ್ದೊಂದು ಪ್ರಯತ್ನ ಖುಷಿ ತಂದಿದೆ ಎಂದರು.

ಪುರಸಭೆ ಅಧ್ಯಕ್ಷೆ ಕವಿತಾ ಸೊಪ್ಪಿನಮಠ, ಜಿಪಂಮಾಜಿ ಅಧ್ಯಕ್ಷ ಶಂಕ್ರಣ್ಣ ಮಾತನವರ, ಟಾಟಾಕಂಪನಿಯ ಪ್ರಶಾಂತ ಬೈಂದೂರ, ವೀರಭದ್ರೇಶ್ವರದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಸಿ.ಆರ್‌.ಆಲದಗೇರಿ, ವರ್ತಕ ಕೈಲಾಸ ಆರಾಧ್ಯಮಠ ಇದ್ದರು. ನ್ಯಾಯವಾದಿ ಚಿದಾನಂದ ಮಠದ ಸ್ವಾಗತಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next