ಲಕ್ನೋ: ಮುಂದಿನ ತಿಂಗಳು 22ರಂದು ಅಯೋಧ್ಯೆ ಯಲ್ಲಿ ರಾಮ ಮಂದಿರದ ಪ್ರಾಣ ಪ್ರತಿಷ್ಠೆ ನೆರ ವೇರ ಲಿದೆ. ಅದಕ್ಕೆ ಪೂರಕವಾಗಿ ಡಿ.30ರಂದು ಅಲ್ಲಿ ಹಲವು ಕಾಮಗಾರಿಗಳನ್ನು ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆಗೊಳಿಸಲಿದ್ದಾರೆ. ಅದ ಕ್ಕಾಗಿ ಎಲ್ಲ ಸಿದ§ತೆಗಳು ನಡೆದಿವೆ ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ವಿಮಾನ ನಿಲ್ದಾಣ ಹಾಗೂ ನವೀಕರಣಗೊಂಡಿರುವ ರೈಲ್ವೇ ನಿಲ್ದಾಣವನ್ನು ಉದ್ಘಾಟಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಡಿ.30ರಂದು ಅಯೋಧ್ಯೆಗೆ ಆಗಮಿಸಲಿದ್ದಾರೆ.
ಆಹ್ವಾನಿತರಿಗಷ್ಟೇ ಪ್ರವೇಶ: ಪ್ರಾಣಪ್ರತಿಷ್ಠಾಪನೆ ಸಮಾರಂಭಕ್ಕೆಂದು ಅಧಿಕೃತವಾಗಿ ಆಹ್ವಾನಿಸಿರುವ ಅತಿಥಿಗಳು ಹಾಗೂ ಸರಕಾರಿ ಕೆಲಸಗಳಿಗಾಗಿ ಆಗಮಿಸುತ್ತಿರುವವರಿಗೆ ಮಾತ್ರ ಜ. 22 ರಂದು ಪ್ರವೇಶ ನೀಡಬೇಕು ಎಂದು ಯೋಗಿ ಸೂಚಿಸಿದ್ದಾರೆ.
ಬೆಂಗಳೂರು -ಕೊಯಮತ್ತೂರು ವಂದೇ ಭಾರತ್‌ಗೆ ಚಾಲನೆ: ಕೊಯಂಬತ್ತೂರು- ಬೆಂಗಳೂರು ವಂದೇ ಭಾರತ್‌ಸೇರಿದಂತೆ ಐದು ವಂದೇ ಭಾರತ್ ರೈಲುಗಳಿಗೆ ಮೋದಿ ಡಿ.30ರಂದು ಚಾಲನೆ ನೀಡಲಿದ್ದಾರೆ. ಇದೇ ವೇಳೆ ಮಾಲ್ಡಾ-ಬೆಂಗಳೂರು ಹಾಗೂ ದಿಲ್ಲಿ-ದರ್ಭಾಂಗಾ ಮಾರ್ಗದ ಅಮೃತಭಾರತ್ ರೈಲುಗಳಿಗೂ ಪ್ರಧಾನಿ ಹಸುರು ನಿಶಾನೆ ತೋರಲಿದ್ದಾರೆ.