Advertisement

ಮಣಿಪಾಲ ಕೌಶಲ ಅಭಿವೃದ್ಧಿ ಕೇಂದ್ರ- ಬ್ಯೂಟಿ ಆ್ಯಂಡ್‌ ವೆಲ್‌ನೆಸ್‌ ಸೆಂಟರ್‌ ಉದ್ಘಾಟನೆ

12:43 AM Dec 16, 2023 | Team Udayavani |

ಮಣಿಪಾಲ: ಡಾ| ಟಿಎಂಎ ಪೈ ಪ್ರತಿಷ್ಠಾನದ ಅಂಗಸಂಸ್ಥೆಯಾದ ಮಣಿಪಾಲ ಕೌಶಲ ಅಭಿವೃದ್ಧಿ ಕೇಂದ್ರದ (ಎಂಎಸ್‌ಡಿಸಿ) ಆವರಣದಲ್ಲಿ ಓರೇನಾ ಸ್ಕೂಲ್‌ ಆಫ್‌ ಬ್ಯೂಟಿ ಆ್ಯಂಡ್‌ ವೆಲ್‌ನೆಸ್‌ ಸೆಂಟರ್‌ಗೆ ಶುಕ್ರವಾರ ಜಿಲ್ಲಾಧಿಕಾರಿ ಡಾ| ಕೆ. ವಿದ್ಯಾಕುಮಾರಿ ಚಾಲನೆ ನೀಡಿ, ಶುಭ ಹಾರೈಸಿದರು.

Advertisement

ಡಾ| ಟಿಎಂಎ ಪೈ ಪಾಲಿಟೆಕ್ನಿಕ್‌ ಕ್ಯಾಂಪಸ್‌ನಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಎಂಎಸ್‌ಡಿಸಿ ವೆಬ್‌ಸೈಟ್‌ www.msdskills.org ಬಿಡುಗಡೆ ಮಾಡಿ ಮಾತನಾಡಿದ ಅಪರ ಜಿಲ್ಲಾಧಿಕಾರಿ ಡಾ| ಮಮತಾದೇವಿ ಜಿ.ಎಸ್‌., ಸ್ವೋದ್ಯೋಗ ಮತ್ತು ಉದ್ಯಮಶೀಲತೆಗೆ ಕೌಶಲಾಭಿವೃದ್ಧಿ ಅತಿ ಮುಖ್ಯವಾಗಿದೆ. ಕೇಂದ್ರ ಹಾಗೂ ರಾಜ್ಯ ಸರಕಾರಗಳು ಕೌಶಲಾಭಿವೃದ್ಧಿಗೆ ಹೆಚ್ಚೆಚ್ಚು ಒತ್ತು ನೀಡುತ್ತಿವೆ. ಎಂಎಸ್‌ಡಿಸಿ ಕರಾವಳಿ ಭಾಗದಲ್ಲಿ ಸ್ಟಾರ್ಟ್‌ಅಪ್‌ ಇಕೋ ಸಿಸ್ಟಮ್‌ ಅಭಿವೃದ್ಧಿಯೊಂದಿಗೆ ಕೌಶಲ ಕ್ಷೇತ್ರದಲ್ಲಿ ಮಾದರಿ ಸಂಸ್ಥೆಯಾಗಲಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಡಾ| ಟಿಎಂಎ ಪೈ ಪ್ರತಿಷ್ಠಾನದ ಅಧ್ಯಕ್ಷ ಟಿ. ಅಶೋಕ್‌ ಪೈ ಅವರು ಮಾತನಾಡಿ, ಎಂಎಸ್‌ಡಿಸಿ ಮೂಲಕ ಸುಸಜ್ಜಿತ ಹಾಗೂ ಸುಧಾರಿತ ವ್ಯವಸ್ಥೆಯಲ್ಲಿ ವಿವಿಧ ಕೋರ್ಸ್‌ಗಳಿಗೆ ಕೌಶಲಾಧಾರಿತ ತರಬೇತಿ ನೀಡಲಾಗುತ್ತಿದೆ ಎಂದರು.

ಪ್ರತಿಷ್ಠಾನದ ಟ್ರಸ್ಟಿ ಟಿ. ಸಚಿನ್‌ ಪೈ ಮಾತನಾಡಿ, ಎಂಎಸ್‌ಡಿಸಿ ಸ್ಕಿಲ್‌ ಹಬ್‌ ಆಗಿ, ದೇಶದಲ್ಲೇ ಮಾದರಿ ಕೌಶಲಾಭಿವೃದ್ಧಿ ಸಂಸ್ಥೆಯಾಗಿ ಬೆಳೆಯಲಿದೆ ಎಂದು ಹೇಳಿದರು.

ಓರೇನಾ ಎಕ್ಸ್‌ಪಾನ್ಶನ್‌ ಮ್ಯಾನೇಜರ್‌ ನೇಹಾ ಮಾತನಾಡಿ, ಬ್ಯೂಟಿ ಮತ್ತು ವೆಲ್‌ನೆಸ್‌ ಕೋರ್ಸ್‌ ಆರ್ಥಿಕ ಸ್ವಾಲಂಬನೆ ಹಾಗೂ ಸ್ವೋದ್ಯೋಗಕ್ಕೂ ಪೂರಕವಾಗಿದೆ ಎಂದರು.
ಎಂಎಸ್‌ಡಿಸಿ ಮುಖ್ಯಸ್ಥ ಬಿ| ಡಾ| ಸುರ್ಜಿತ್‌ ಸಿಂಗ್‌ ಪಾಬ್ಲಿ ಮಾತನಾಡಿ, ಎಂಎಸ್‌ಡಿಸಿಯು ನ್ಯಾಶನಲ್‌ ಸ್ಕಿಲ್‌ ಡೆವಲಪ್‌ಮೆಂಟ್‌ ಕಾರ್ಪೋರೇಶನ್‌ನಿಂದ ಮಾನ್ಯತೆ ಪಡೆದಿದೆ. ಸ್ಕೂಲ್‌ ಆಫ್ ರೊಬೊಟಿಕ್‌, ಡ್ರೋನ್‌ ಟೆಕ್ನಾಲಜಿ, 3ಡಿ ಪ್ರಿಟಿಂಗ್‌ ಹೀಗೆ ಹಲವು ಕೋರ್ಸ್‌ಗಳನ್ನು ನೀಡುತ್ತಿದ್ದೇವೆ. ಇದೀಗ ಬ್ಯೂಟಿ ಆ್ಯಂಡ್‌ ವೆಲ್‌ನೆಸ್‌ ಕೋರ್ಸ್‌ ಸೇರಿಕೊಂಡಿದೆ. ಸರ್ಟಿಪಿಕ್‌, ಡಿಪ್ಲೊಮಾ, ಪದವಿ, ಸ್ನಾತಕೋತ್ತರ ಪದವಿ ಕೋರ್ಸ್‌ಗಳನ್ನು ಹಂತ ಹಂತವಾಗಿ ನೀಡಲಿದ್ದೇವೆ ಎಂದು ವಿವರಿಸಿದರು.

Advertisement

ಡಾ| ಟಿಎಂಎ ಪೈ ಪಾಲಿಟೆಕ್ನಿಕ್‌ ನಿರ್ದೇಶಕ ಟಿ.ರಂಗ ಪೈ, ಪ್ರಾಂಶುಪಾಲ ಡಾ| ಕಾಂತರಾಜ್‌, ಉದ್ಯಮಿ ಪುರುಷೋತ್ತಮ ಶೆಟ್ಟಿ ಉಪಸ್ಥಿತರಿದ್ದರು.
ಕೇಂದ್ರದ ವ್ಯವಸ್ಥಾಪಕಿ ನೀತಾ ಶೆಟ್ಟಿ ಸ್ವಾಗತಿಸಿ, ಎಂಎಸ್‌ಡಿಸಿ ಕುಲಸಚಿವ ಡಾ| ರಾಧಾಕೃಷ್ಣ ಐತಾಳ್‌ ವಂದಿಸಿ, ಬಿಬಿನಾ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next