Advertisement
ನಗರಸಭೆ ವ್ಯಾಪ್ತಿಗೆ ಬರುವ ಮಿಟ್ಟೆನಹಳ್ಳಿ ಬಡಾವಣೆಯಲ್ಲಿ (23ನೇ ವಾರ್ಡ) ಸುಮಾರು 100ಕ್ಕೂ ಹೆಚ್ಚು ಮನೆಗಳಿದ್ದು, ಇಲ್ಲಿನ ಜನತೆ ಕನಿಷ್ಠ ಮೂಲಭೂತ ಸೌಕರ್ಯಯಗಳಿಲ್ಲದೆ ಪರಿತಪಿಸುವಂತಾಗಿದೆ ಆಕ್ರೋಶ ವ್ಯಕ್ತಪಡಿಸಿದರು.
Related Articles
Advertisement
ಕಗ್ಗತ್ತಲು: ಬಡಾವಣೆಯಲ್ಲಿ ಸಂಜೆಯಾದರೆ ಕಗ್ಗತ್ತಲು ಆವರಿಸುತ್ತದೆ, ವಿದ್ಯುತ್ ಕಂಬಗಳಿದ್ದರೂ ಬೀದಿ ದೀಪಗಳು ಅಳವಡಿಸಿಲ್ಲ. ನಗರ ಮತ್ತು ಇನ್ನಿತರೆ ಹೊಲಗದ್ದೆಗಳಲ್ಲಿ ಕೂಲಿನಾಲಿ ಮಾಡಿಕೊಂಡು ಮನೆಗೆ ಬರುವಾಗ ಕಗ್ಗತ್ತಲು ಆವರಿಸಿರುತ್ತದೆ. ಬೆಳಕಿಲ್ಲದೇ ವಿಷಜಂತುಗಳ ಆತಂಕ ಕಾಡುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ.
ಪರಿಹಾರ: ಸ್ಥಳಕ್ಕಾಗಮಿಸಿದ ನಗರಸಭೆ ಮಾಜಿ ಉಪಾಧ್ಯಕ್ಷ ಆರ್.ಪಿ.ಗೋಪಿನಾಥ್ ಮತ್ತು ನಗರ ನೀರು ಸರಬರಾಜು ವ್ಯವಸ್ಥಾಪಕ ಮುರಳಿ ಮಾತನಾಡಿ, ಇನ್ಮುಂದೆ ಸಮರ್ಪಕವಾಗಿ ನೀರು ಸರಬರಾಜು ಮಾಡುವುದರ ಜತೆಗೆ ಮೂಲ ಸೌಕರ್ಯಗಳಿಗೆ ಆದ್ಯತೆ ನೀಡುವುದಾಗಿ ತಿಳಿಸಿದರೂ ಮಹಿಳೆಯರು ಪ್ರತಿಭಟನೆ ಹಿಂಪಡೆಯಲಿಲ್ಲ.
ಕೆಲ ಕಾಲ ಮಹಿಳೆಯರು ಮತ್ತು ಅಧಿಕಾರಿಗಳೊಂದಿಗೆ ಮಾತಿನ ಚಕಮಕಿ ನಡೆದಿದ್ದರಿಂದ ಕೂಡಲೇ ಟ್ಯಾಂಕರ್ ಕಳುಹಿಸಲಾಗುವುದು. ಚರಂಡಿ ಸ್ವತ್ಛತೆಗೆ ಸಿಬ್ಬಂದಿಯನ್ನು ಕಳುಹಿಸುತ್ತಿದ್ದು, ಇನ್ನೆರಡು ದಿನಗಳಲ್ಲಿ ಬೀದಿ ದೀಪಗಳ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದರು. ನಂತರ ನೀರಿನ ಟ್ಯಾಂಕರ್ ಕಳುಹಿಸಿದ ಬಳಿಕವಷ್ಟೇ ಪ್ರತಿಭಟನೆ ಹಿಂಪಡೆದರು.
ನಿತ್ಯ ನೀರಿಲ್ಲದೇ ಸ್ನಾನಕ್ಕೆ ಹಾಗೂ ಬಹಿರ್ದೆಸೆಗೂ ನೀರಿಲ್ಲದ ಸ್ಥಿತಿ ನಿರ್ಮಾಣವಾಗಿದೆ. ಸ್ನಾನ ವಾರಕ್ಕೊಮ್ಮೆ ಮಾಡಿಕೊಳ್ಳುವ ಪರಿಸ್ಥಿಗೆ ಬಂದಿದ್ದೇವೆ. ಸ್ವತ್ಛತೆ ಮರೀಚಿಕೆಯಾಗಿ ಸಾಂಕ್ರಮಿಕ ರೋಗದ ಭೀತಿ ಕಾಡುತ್ತಿದೆ. ಇದೇ ರೀತಿ ಮುಂದುವರಿದಲ್ಲಿ ಡಿಸಿ ಕಚೇರಿ ಮುಂದೆ ಪ್ರತಿಭಟನೆ ಮಾಡುತ್ತೇವೆ. -ಪ್ರೇಮಮ್ಮ, ಬಡಾವಣೆಯ ನಿವಾಸಿ