Advertisement

ಅಸಮರ್ಪಕ ವಿದ್ಯುತ್‌ ಪೂರೈಕೆ: ಹೆಸ್ಕಾಂ ಕಚೇರಿಗೆ ಮುತ್ತಿಗೆ

06:05 PM Mar 10, 2021 | Team Udayavani |

ಶಿರಹಟ್ಟಿ: ಅಸಮರ್ಪಕ ವಿದ್ಯುತ್‌ಪೂರೈಕೆ ಹಾಗೂ ಕಚೇರಿಯಲ್ಲಿ ಸಿಬ್ಬಂದಿಇಲ್ಲದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿ ತಾಲೂಕಿನವಡವಿ-ಹೊಸೂರ, ಅಲಗಿಲವಾಡ, ಮಾಚೇನಹಳ್ಳಿ, ದೇವಿಹಾಳ ಸೇರಿದಂತೆ ವಿವಿಧ ಗ್ರಾಮಗಳ ರೈತರು ಮಂಗಳವಾರ ಬೆಳ್ಳಟ್ಟಿಹೆಸ್ಕಾಂ ಕಚೇರಿ ಬೀಗ ಒಡೆದು ಒಳನುಗ್ಗಿ ಪ್ರತಿಭಟನೆ ನಡೆಸಿದರು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಯುವ ರೈತ ರಾಜೀವ್‌ರೆಡ್ಡಿ ಬಮ್ಮನಕಟ್ಟಿ, ಬೆಳ್ಳಟ್ಟಿ ಫೀಡರ್‌ನಿಂದ ರೈತರ ಪಂಪ್‌ಸೆಟ್‌ಗಳಿಗೆಪೂರೈಕೆಯಾಗುವ ವಿದ್ಯುತ್‌ ಸರಬರಾಜಿಗೆ ಯಾವುದೇ ಸಮಯ ನಿಗದಿ ಮಾಡಿಲ್ಲ.ತಮಗೆ ಬೇಕಾದಾಗ ವಿದ್ಯುತ್‌ ಸರಬರಾಜು ಮಾಡುವ ಪರಿಪಾಠ ಬೆಳೆಸಿಕೊಂಡಿದ್ದಾರೆ.ಸಧ್ಯ ಬೇಸಿಗೆ ಕಾಲ ಇರುವುದರಿಂದ ಬೆಳೆಗಳಿಗೆಸರಿಯಾದ ಸಮಯಕ್ಕೆ ನೀರು ಹಾಯಿಸದಿದ್ದರೆಸಾಲ-ಶೂಲ ಮಾಡಿ ಬಿತ್ತಿದ ಬೆಳೆಗಳು ಒಣಗಿ ಹೋಗಿ ಅಪಾರ ನಷ್ಟ ಉಂಟಾಗಲಿದೆ.

ಇದನ್ನು ಸರಿಪಡಿಸುವಂತೆ ಬೆಳ್ಳಟ್ಟಿಯ ಎಸ್‌ಒ ಹಾಗೂ ಸಿಬ್ಬಂದಿಗೆ ಸಾಕಷ್ಟು ಬಾರಿ ಮನವಿಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಆದ್ದರಿಂದ,ನಮಗೆ ಹಗಲು ಸಮಯದಲ್ಲಿಯೇಸಮರ್ಪಕ ವಿದ್ಯುತ್‌ ಪೂರೈಸಬೇಕೆಂದು ಒತ್ತಾಯಿಸಿದರು.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಮಾತನಾಡಿದ ಹೆಸ್ಕಾಂ ಎಇಇ ಎಂ.ಟಿ.ದೊಡ್ಡಮನಿ, ಬೇಸಿಗೆ ಇರುವುದರಿಂದ ವಿದ್ಯುತ್‌ ಪೂರೈಕೆಯಲ್ಲಿವ್ಯತ್ಯಯವಾಗುತ್ತಿದೆ. ಸಿಬ್ಬಂದಿಗೆ ಸೂಕ್ತನಿರ್ದೇಶನ ನೀಡಿ ರೈತರ ಬೇಡಿಕೆ ಈಡೇರಿಸಲು ಕ್ರಮ ಕೈಕೊಳ್ಳಲಾಗುವುದು ಎಂದರು. ಹೆಸ್ಕಾಂಎಇಇ ಸೂಕ್ತ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆದರು.

ಈ ವೇಳೆ ಹನುಮಂತ ಬಾಲೇಹೊಸೂರು,ಸುಭಾಸ ಕೊಂಚಿಗೇರಿ, ಪ್ರವೀಣ ಅಳವಂಡಿ,ಹನುಮರೆಡಿ ಆನ್ವೇರಿ, ಮಹೇಶ ಬಾಗೇವಾಡಿ,ಅಶೋಕರೆಡ್ಡಿ ಹುಲ್ಲೂರ, ಶ್ರೀಧರ ಹುಲ್ಲೂರ, ನಾಗರಾಜ ತಳವಾರ ಇತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next