ವಯನಾಡ್/ನವದೆಹಲಿ:ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿಯವರಿಗೆ ಜನ್ಮ ನೀಡುವಾಗ ಹೆರಿಗೆ ಮಾಡಿಸಿದ್ದ ನರ್ಸ್ ರಾಜಮ್ಮ ವವಾತಿಲ್ ಎಂಬುವರು ಅವರನ್ನು ಭೇಟಿಯಾಗಿದ್ದಾರೆ.
ಜತೆಗೆ ಅವರಿಗೆ ಸಿಹಿ ಇರುವ ಬಾಕ್ಸ್ ನೀಡಿ, ತಾಯಿ ಸೋನಿಯಾ ಮತ್ತು ಕುಟುಂಬದ ಇತರ ಸದಸ್ಯರ ಆರೋಗ್ಯ ವಿಚಾರಿಸಿದ್ದಾರೆ.
ಇದನ್ನೂ ಓದಿ:ಕಲಾಪದಿಂದ ಪಲಾಯನ ಮಾಡಿದ ಕಾಂಗ್ರೆಸ್‍ನಿಂದ ಜನತೆಯ ದಾರಿ ತಪ್ಪಿಸುವ ವ್ಯರ್ಥ ಪ್ರಯತ್ನ
ವಯನಾಡ್ ಸಂಸದರಾಗಿರುವ ರಾಹುಲ್ ಕ್ಷೇತ್ರ ಪ್ರವಾಸ ನಡೆಸುತ್ತಿದ್ದ ವೇಳೆ ಈ ಘಟನೆ ನಡೆದಿದೆ. “1970ರಲ್ಲಿ ನವದೆಹಲಿಯ ಹೋಲಿಸ್ ಫ್ಯಾಮಿಲಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದೆ. ರಾಹುಲ್ ಅದೇ ಆಸ್ಪತ್ರೆ ಯಲ್ಲಿ ಜನಿಸಿದ್ದರು. ರಾಹುಲ್‌ನ್ನು ಎಲ್ಲರಿಗಿಂತ ಮೊದಲು ನೋಡಿದ್ದು ನಾನೇ’ ಎಂದು ಅವರು ರಾಹುಲ್ ಕೈ ಹಿಡಿದುಕೊಂಡು ಜನರಿಗೆ ತಿಳಿಸಿದ್ದಾರೆ.
ರಾಹುಲ್‌ಗೆ ಸಿಹಿ ಇರುವ ಬಾಕ್ಸ್ ಕೊಟ್ಟು, “ನಿಮಗೆ ಸ್ವೀಟ್ ಬಾಕ್ಸ್ ಕೊಡಬೇಕೆಂದರೆ ನಿಮ್ಮ ರಕ್ಷಣಾ ಸಿಬ್ಬಂದಿ ಬಿಡು ತ್ತಿಲ್ಲ. ನನ್ನ ಮನೆ ಇಲ್ಲೇ ಇದೆ’ ಎಂದು ಮನೆಯತ್ತ ಕೈ ತೋರಿಸಿದ್ದಾರೆ. ರಾಹುಲ್ ಅವರೊಂದಿಗೆ ಸಂತಸದಿಂದ ಮಾತನಾಡಿದ್ದಾರೆ. ಈ ವಿಡಿಯೋ ಈಗ ವೈರಲ್ ಆಗಿದೆ.