ಬೆಂಗಳೂರು: ತೀರಿಸಿಕೊಳ್ಳುವ ಉದ್ದೇಶದಿಂದ ಪತ್ನಿಯ ಫೋಟೋಗಳನ್ನು ಡೇಟಿಂಗ್ ವೆಬ್‌ಸೈಟ್‌ಗೆ ಅಪ್‌ಲೋಡ್ ಮಾಡಿ ವಿಕೃತಿ ಮೆರೆದ ಪತಿ ಪೊಲೀಸರ ಅತಿಥಿಯಾಗಿದ್ದಾನೆ. ತೀರ್ಥಹಳ್ಳಿ ಮೂಲದ ಬಿ.ಎಂ.ವಿನಯ್ (32) ಬಂಧಿತ. ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ವಿಚ್ಛೆಧನಕ್ಕೆ ಅರ್ಜಿ ಹಾಕಿದ್ದ ಆರೋಪಿ, ಪತ್ನಿ ವಿರುದ್ಧ ಸೇಡು ತೀರಿಸಿಕೊಳ್ಳಲು ಡೇಟಿಂಗ್ ವೆಬ್‌ಸೈಟ್ ಒಂದರಲ್ಲಿ ಪತ್ನಿಯ ಮೊಬೈಲ್ ನಂಬರ್ ಹಾಗೂ ಫೋಟೋ ಪ್ರಕಟಿಸಿದ್ದ.
ಅಲ್ಲದೆ, ಆಕೆ ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಖಾತೆ ತೆರೆದು, ಬೇರೊಬ್ಬ ಯುವತಿಯ ಅರೆನಗ್ನ ದೇಹಕ್ಕೆ ಪತ್ನಿಯ ಮುಖ ಮಾಫ್ì ಮಾಡಿದ ಫೋಟೋ ಅಪ್‌ಲೋಡ್ ಮಾಡಿದ್ದ. ಈತ ಡೇಟಿಂಗ್ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದ್ದ ಮೊಬೈಲ್ ಸಂಖ್ಯೆಗೆ ಕರೆ ಮಾಡಿದ ಕೆಲ ಯುವಕರು, ಆಕೆಗೆ ಕಿರುಕುಳ ನೀಡುತ್ತಿದ್ದರು ಎಂದು ಸೈಬರ್ ಕ್ರೈಂ ಪೊಲೀಸರು ತಿಳಿಸಿದ್ದಾರೆ.
ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ವಿನಯ್, ಮತ್ತೂಂದು ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಯುವತಿಯನ್ನು ಪ್ರೀತಿಸಿ ವಿವಾಹವಾಗಿದ್ದ. ಆರಂಭದಲ್ಲಿ ಅನ್ಯೂನ್ಯವಾಗಿದ್ದ ದಂಪತಿ, ನಂತರ ಕೌಟುಂಬಿಕ ಕಲಹದಿಂದ ದೂರವಾಗಿ ವಿಚ್ಛೇದನಕ್ಕೂ ಅರ್ಜಿ ಹಾಕಿದ್ದರು. ಈ ನಡುವೆ, ವಿನಯ್ ಆಕೆಗೆ ನಿತ್ಯ ಒಂದಿಲ್ಲೊಂದು ರೀತಿಯಲ್ಲಿ ಕಾಟ ಕೊಡುತ್ತಿದ್ದ.
ಬೇಸತ್ತ ಯುವತಿ, ವನಿತಾ ಸಹಾಯವಾಣಿಗೆ ದೂರು ನೀಡಿದ್ದರು. ಸಹಾಯವಾಣಿ ಕೇಂದ್ರದ ಅಧಿಕಾರಿಗಳು ಎಚ್ಚರಿಕೆ ನೀಡಿದ ಬಳಿಕ ಸುಮ್ಮನಾಗಿದ್ದ. ಪತ್ನಿಯ ಈ ಕ್ರಮದಿಂದ ಕೋಪಗೊಂಡಿದ್ದ ವಿನಯ್, ಆಕೆ ವಿರುದ್ಧ ಸೇಡು ತೀರಿಸಿಕೊಳ್ಳಲು ನಿರ್ಧರಿಸಿ, ಮಾಫ್ì ಮಾಡಿದ ಅರೆನಗ್ನ ಫೋಟೋಗಳನ್ನು, ಆಕೆಯ ಮೊಬೈಲ್ ಸಂರ್ಖಯೆ ಸಹಿತ ಡೇಟಿಂಗ್ ವೆಬ್‌ಸೈಟ್‌ಗೆ ಅಪ್‌ಲೋಡ್ ಮಾಡಿದ್ದ.
ಕೆಲವರು ಆ ಸಂಖ್ಯೆಗೆ ಕರೆ ಮಾಡಿ, ಯುವತಿ ಜತೆ ಅಶ್ಲೀಲವಾಗಿ ಮಾತನಾಡಿದ್ದಾರೆ. ಅನುಮಾನಗೊಂಡ ಯುವತಿ ಕರೆ ಮಾಡಿದ ಯುವಕನಿಗೆ ಈ ನಂಬರ್ ಎಲ್ಲಿ ದೊರೆಯಿತು ಎಂದು ಕೇಳಿದಾಗ, ಆತ ಡೇಟಿಂಗ್ ವೆಬ್‌ಸೈಟ್‌ನಲ್ಲಿ ಎಂದು ಹೇಳಿದ್ದ. ನಂತರ ಆಕೆ ಸೈಬರ್ ಠಾಣೆಗೆ ದೂರು ನೀಡಿದ್ದರು.
ಪತಿ ಮೇಲೆ ಅನುಮಾನ: ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ ಸಂತ್ರಸ್ತೆ, ವಿನಯ್ ಮೇಲೆ ಅನುಮಾನ ವ್ಯಕ್ತಪಡಿಸಿದ್ದರು. ಜತೆಗೆ ವೆಬ್‌ಸೈಟ್‌ನಲ್ಲಿರುವ ಫೋಟೋ ವಿನಯ್ ಜತೆ ಪ್ರವಾಸಕ್ಕೆ ಹೋದಾಗ ತೆಗೆದಿದ್ದು. ಹಾಗೇ ಮೊಬೈಲ್ ಸಂಖ್ಯೆ ವಿನಯ್ ಹೊರತು ಬೇರೆ ಯಾರ ಬಳಿಯೂ ಇಲ್ಲ ಎಂದು ಹೇಳಿದ್ದರು. ಈ ಸಂಬಂದ ವಿನಯ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಾನೇ ಕೃತ್ಯ ಎಸಗಿದ್ದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.