Advertisement

Bangladesh: ಹಿಂದೂಗಳ ರಕ್ಷಣೆಗೆ ಮುಂದಾಗಿ: ಬಾಂಗ್ಲಾಕ್ಕೆ ಕೇಂದ್ರ ಸರ್ಕಾರ ಮನವಿ

10:01 PM Nov 26, 2024 | Team Udayavani |

ಢಾಕಾ/ನವದೆಹಲಿ: ಕೇಸರಿ ಧ್ವಜ ಹಾರಿಸಿದ, ಬಾಂಗ್ಲಾದೇಶದಲ್ಲಿ ಹಿಂದೂಗಳ ವಿರುದ್ಧ ದೌರ್ಜನ್ಯ ವಿರುದ್ಧ ಪ್ರತಿಭಟಿಸಿದ್ದಕ್ಕಾಗಿ ಇಸ್ಕಾನ್‌ನ ಚಿನ್ಮೋಯ್‌ ಕೃಷ್ಣದಾಸ್‌ ಬ್ರಹ್ಮಾಚಾರಿ ಬಂಧನಕ್ಕೆ ಕೇಂದ್ರ ಸರ್ಕಾರ ಆಕ್ರೋಶ ವ್ಯಕ್ತಪಡಿಸಿದೆ.

Advertisement

ಈ ಬಗ್ಗೆ ಮಂಗಳವಾರ ಹೇಳಿಕೆ ಬಿಡುಗಡೆ ಮಾಡಿರುವ ವಿದೇಶಾಂಗ ಸಚಿವಾಲಯ ಹಿಂದೂಗಳು ಮಾತ್ರವಲ್ಲದೆ ಇತರ ಅಲ್ಪಸಂಖ್ಯಾತರನ್ನು ರಕ್ಷಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದೆ. ಇದಲ್ಲದೆ ಅವರಿಗೆ ಬಾಂಗ್ಲಾದೇಶ ಕೋರ್ಟ್‌ ಜಾಮೀನು ನಿರಾಕರಿಸಿ, ಜೈಲಿಗೆ ಕಳುಹಿಸಿರುವ ಅಂಶವೂ ಗೊತ್ತಾಗಿದೆ ಎಂದಿದೆ. ಅಲ್ಪಸಂಖ್ಯಾತರಿಗೆ ಸೇರಿದ ಧಾರ್ಮಿಕ ಸ್ಥಳಗಳನ್ನು ಧ್ವಂಸಗೊಳಿಸಿದ ಪ್ರಕರಣಗಳ ಬಗ್ಗೆ ಸಾಕ್ಷ್ಯ ಕೂಡ ಇದೆ ಎಂದು ಸರ್ಕಾರ ತಿಳಿಸಿದೆ.

ಬಾಂಗ್ಲಾ ತಿರುಗೇಟು: ಹಿಂದೂ ನಾಯಕನ ಬಂಧನಕ್ಕೆ ಭಾರತ ಆಕ್ಷೇಪಕ್ಕೆ ಬಾಂಗ್ಲಾದೇಶ ಆಕ್ರೋಶ ವ್ಯಕ್ತಪಡಿಸಿದೆ. ಇದು 2 ದೇಶಗಳ ನಡುವಿನ ಸ್ನೇಹಕ್ಕೆ ಧಕ್ಕೆ ತರುವ ಹೇಳಿಕೆ ಎಂದು ಮಧ್ಯಂತರ ಸರ್ಕಾರ ತಿಳಿಸಿದೆ.

ಜಾಮೀನಿಗೆ ನಕಾರ: ಈ ನಡುವೆ, ದೇಶದ್ರೋಹದ ಆರೋಪದ ಹಿನ್ನೆಲೆಯಲ್ಲಿ ಬಂಧನಕ್ಕೆ ಒಳಗಾಗಿರುವ ಚಿನ್ಮೋಯ್‌ ಕೃಷ್ಣದಾಸ್‌ ಅವರಿಗೆ ಜಾಮೀನು ನೀಡಲು ಬಾಂಗ್ಲಾದೇಶದ ಕೋರ್ಟ್‌ ನಿರಾಕರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next