Advertisement

ಪೊಲಿಟಿಕಲ್ ಹೈಡ್ರಾಮಾ; ರೆಸಾರ್ಟ್ ರಾಜಕೀಯ, ವಜಾ, ಬಲಪ್ರದರ್ಶನ!

04:40 PM Feb 08, 2017 | Sharanya Alva |

ಚೆನ್ನೈ: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಓ ಪನ್ನೀರ್ ಸೆಲ್ವಂ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾ ನಟರಾಜನ್ ವಿರುದ್ಧ ಬಂಡಾಯದ ಬಾವುಟ ಹಾರಿಸಿದ ಬೆನ್ನಲ್ಲೇ ತಮಿಳುನಾಡು ರಾಜಕಾರಣದಲ್ಲಿ ಬಿಕ್ಕಟ್ಟು ಮತ್ತಷ್ಟು ತೀವ್ರಗೊಂಡಿದ್ದು, ಇದೀಗ ರೆಸಾರ್ಟ್ ರಾಜಕೀಯಕ್ಕೆ ನಾಂದಿ ಹಾಡಿದೆ.

Advertisement

ಜನತೆಗೆ ಸತ್ಯ ತಿಳಿಸುವುದು ರಾಜ್ಯ ಸರ್ಕಾರದ ಕೆಲಸ. ಹಾಗಾಗಿ ಜಯಾ ನಿಗೂಢ ಸಾವಿನ ಬಗ್ಗೆ ತನಿಖೆಯಾಗಬೇಕು ಎಂದು ಪನ್ನೀರ್ ಸೆಲ್ವಂ ಸುದ್ದಿಗೋಷ್ಠಿಯಲ್ಲಿ ತಿಳಿಸಿ, ತಾನು ವಿಧಾನಸಭೆಯಲ್ಲಿ ಬಲಪ್ರದರ್ಶನ ತೋರಿಸುವೆ ಎಂದು ಹೇಳಿದ್ದರು.

ಅದರ ಬೆನ್ನಲ್ಲೇ ನಿಯೋಜಿತ ಮುಖ್ಯಮಂತ್ರಿ ಶಶಿಕಲಾ ಅವರು ಎಐಎಡಿಎಂಕೆ ಪಕ್ಷದ ಕಚೇರಿಯಲ್ಲಿ ಮಹತ್ವದ ಸಭೆ ನಡೆಸಿದ್ದು, ಇದರಲ್ಲಿ ಪಕ್ಷದ 130 ಶಾಸಕರು ಪಾಲ್ಗೊಳ್ಳುವ ಮೂಲಕ ಸೆಲ್ವಂಗೆ ತಿರುಗೇಟು ನೀಡಿದ್ದರು.

ಜೆ.ಜಯಲಲಿತಾ ಅವರ ನಿಧನದ ಬಳಿಕ ಶಶಿಕಲಾ ನಟರಾಜನ್ ಅವರು ತಮಿಳುನಾಡಿನ ಮುಖ್ಯಮಂತ್ರಿಯಾಗಬೇಕೇ ಅಥವಾ ಬೇಡವೆ ಎಂಬ ಪರ, ವಿರೋಧದ ಚರ್ಚೆಯ ನಡುವೆಯೇ ಪನ್ನೀರ್ ಸೆಲ್ವಂ ಸೆಡ್ಡು ಹೊಡೆಯುವ ಮೂಲಕ ರಾಜಕೀಯ ಮತ್ತೊಂದು ತಿರುವು ಪಡೆದುಕೊಂಡಂತಾಗಿದೆ. 

ಹೈಡ್ರಾಮಾ…ಇಂದು ಏನೇನ್ ನಡೆಯಿತು?
* ಜಯಾ ನಿಗೂಢ ಸಾವಿನ ತನಿಖೆಗೆ ಆದೇಶಿಸಿದ ಪನ್ನೀರ್ ಸೆಲ್ವಂ
*ತಮಿಳುನಾಡಿನ ವಿಧಾನಸಭೇಲಿ ಬಲಪ್ರದರ್ಶಿಸುವೆ; ಸೆಲ್ವಂ
*ಎಐಎಡಿಎಂಕೆ ಕಚೇರಿಯಲ್ಲಿ ಶಶಿಕಲಾ ನಟರಾಜನ್ ನೇತೃತ್ವದಲ್ಲಿ ಮಹತ್ವದ ಸಭೆ
* ಶಶಿಕಲಾಗೆ 130 ಶಾಸಕರ ಬೆಂಬಲ
*ಶಶಿಕಲಾ ಎಐಎಡಿಎಂಕೆ ಪಕ್ಷದ ಪ್ರಧಾನ ಕಾರ್ಯದರ್ಶಿ ಆಯ್ಕೆ ಬಗ್ಗೆ ಚುನಾವಣಾ ಆಯೋಗದ ಅಪಸ್ವರ
*ಪನ್ನೀರ್ ಸೆಲ್ವಂ ಸುದ್ದಿಗೋಷ್ಠಿ, ಶಶಿಕಲಾ ನಟರಾಜನ್ ಸುದ್ದಿಗೋಷ್ಠಿ
*ಪನ್ನೀರ್ ಸೆಲ್ವಂ ಆಪ್ತ ಜಿ.ರಾಮಚಂದ್ರನ್ ವಜಾಗೊಳಿಸಿದ ಶಶಿಕಲಾ
*130 ಶಾಸಕರು ರಹಸ್ಯ ಸ್ಥಳಕ್ಕೆ ಪ್ರಯಾಣ
*ಕುದುರೆ ವ್ಯಾಪಾರದ ಭಯದಲ್ಲಿ ಶಶಿಕಲಾಗೆ ಬೆಂಬಲ ನೀಡಿದ ಶಾಸಕರು ರೆಸಾರ್ಟ್ ಗೆ
*ತಮಿಳುನಾಡು ರಾಜ್ಯಪಾಲರ ವಿರುದ್ಧ ದೂರು ನೀಡಲು ಸಂಸದರ ನಿರ್ಧಾರ
*ಕಾನೂನು ತಜ್ಞರ ಸಲಹೆ ಕೇಳಿದ ತಮಿಳುನಾಡಿನ ಉಸ್ತುವಾರಿ ರಾಜ್ಯಪಾಲ ವಿದ್ಯಾಸಾಗರ್ ರಾವ್
*ಮುಂಬೈನಲ್ಲಿ ಠಿಕಾಣಿ ಹೂಡಿರುವ ರಾಜ್ಯಪಾಲರು
* ಇಂದು ರಾತ್ರಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಭೇಟಿಗೆ ಎಐಎಡಿಎಂಕೆ ಸಂಸದರ ನಿರ್ಧಾರ
*ಓ ಪನ್ನೀರ್ ಸೆಲ್ವಂ ವಿರುದ್ಧ ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ವಾಗ್ದಾಳಿ
*ಪಕ್ಷದ ಬಿಕ್ಕಟ್ಟಿನ ಹಿಂದೆ ಡಿಎಂಕೆ ಕೈವಾಡ: ಶಶಿಕಲಾ ಆರೋಪ
*ತಮಿಳುನಾಡಿನ ರಾಜಕೀಯ ಬಿಕ್ಕಟ್ಟಿನ ಹಿಂದೆ ಕೇಂದ್ರದ ಹುನ್ನಾರ: ಕಾಂಗ್ರೆಸ್
*ತಮಿಳುನಾಡು ರಾಜಕೀಯ ಬೆಳವಣಿಗೆ ಹಿಂದೆ ಬಿಜೆಪಿ ಇಲ್ಲ: ಪನ್ನೀರ್ ಸೆಲ್ವಂ

Advertisement
Advertisement

Udayavani is now on Telegram. Click here to join our channel and stay updated with the latest news.

Next