ನವದೆಹಲಿ: ದೇಶದ ಅತೀ ದೊಡ್ಡ ಕುಡಿಯುವ ನೀರಿನ ಮಾರಾಟ ಕಂಪನಿಯಾದ “ಬಿಸ್ಲೇರಿ”ಯನ್ನು ಖರೀದಿಸುವ ನಿಟ್ಟಿನಲ್ಲಿ ಟಾಟಾ ಸೇರಿದಂತೆ ಹಲವು ಪ್ರಮುಖ ಕಂಪನಿಗಳ ಜೊತೆ ಮಾತುಕತೆ ನಡೆಸಲಾಗಿದೆ ಎಂದು ಹಿರಿಯ ಕೈಗಾರಿಕೋದ್ಯಮಿ ರಮೇಶ್ ಚೌಹಾಣ್ ಪಿಟಿಐ ನ್ಯೂಸ್ ಏಜೆನ್ಸಿಗೆ ಗುರುವಾರ (ನವೆಂಬರ್ 24) ತಿಳಿಸಿದ್ದಾರೆ.
ಇದನ್ನೂ ಓದಿ:ಗಾಲ್ವಾನ್ ಕುರಿತು ಟ್ವೀಟ್ ; ವ್ಯಾಪಕ ಆಕ್ರೋಶದ ಬೆನ್ನಲ್ಲೇ ಕ್ಷಮೆ ಕೇಳಿದ ನಟಿ
ಜನಪ್ರಿಯ ಬಿಸ್ಲೇರಿ ಕಂಪನಿಯನ್ನು ಟಾಟಾ ಕನ್ಸೂಮರ್ ಪಾಡಕ್ಟ್ಸ್ ಲಿಮಿಟೆಡ್ (ಟಿಸಿಪಿಎಲ್) 7,000 ಕೋಟಿ ರೂಪಾಯಿಗೆ ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಸಿದ್ಧವಾಗಿದೆ ಎಂದು ಎಕಾಮಿಕ್ಸ್ ಟೈಮ್ಸ್ ವರದಿ ಮಾಡಿದ ನಂತರ ಚೌಹಾಣ್ ಈ ಪ್ರತಿಕ್ರಿಯೆ ನೀಡಿರುವುದಾಗಿ ವರದಿ ಹೇಳಿದೆ.
“ನಮ್ಮ ಬಿಸ್ಲೇರಿ ಕಂಪನಿಯನ್ನು ಖರೀದಿಸುವ ಸಂಸ್ಥೆಗಳನ್ನು ಹುಡುಕುತ್ತಿದ್ದೇವೆ. ಆದರೆ ಟಾಟಾ ಗ್ರೂಪ್ ಜತೆಗೆ ಖರೀದಿ ಒಪ್ಪಂದವಾಗಿದೆ”ಎಂಬ ವರದಿಯನ್ನು ಬಿಸ್ಲೇರಿ ಅಧ್ಯಕ್ಷ ರಮೇಶ್ ಚೌಹಾಣ್ ತಳ್ಳಿಹಾಕಿದ್ದಾರೆ ಎಂದು ವರದಿ ವಿವರಿಸಿದೆ.
ಬಿಸ್ಲೇರಿ ಕಂಪನಿ ಮಾರಾಟಕ್ಕಾಗಿ ನಾವು ಹಲವಾರು ಖರೀದಿದಾರರ ಜೊತೆ ಮಾತುಕತೆ ನಡೆಸುತ್ತಿದ್ದೇವೆ ಎಂದು ಚೌಹಾಣ್ ಹೇಳಿದ್ದಾರೆ. ಬಿಸ್ಲೇರಿ ಕಂಪನಿಯನ್ನು ಟಾಟಾ ಸಮೂಹ ಸಂಸ್ಥೆಗೆ ಮಾರಾಟ ಮಾಡಲು ಒಪ್ಪಿದ್ದೀರಿ ಎಂಬ ವರದಿ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ರಮೇಶ್ ಚೌಹಾಣ್, ಇಲ್ಲ..ಅದು ಸಮರ್ಪಕವಾದ ಮಾಹಿತಿಯಲ್ಲ, ನಾವು ಈ ಬಗ್ಗೆ ಇನ್ನೂ ಚರ್ಚಿಸುತ್ತಿದ್ದೇವೆ ಎಂದು ಹೇಳಿದರು.
ಕಂಪನಿಯ ಬೆಳವಣಿಗೆ ಮತ್ತು ಅದರ ವಹಿವಾಟನ್ನು ವಿಸ್ತರಿಸುವ ಬಗ್ಗೆ ಬಿಸ್ಲೇರಿ ಇಂಟರ್ ನ್ಯಾಷನಲ್ ಜೊತೆ ಚರ್ಚೆ ನಡೆಯುತ್ತಿರುವುದಾಗಿ ಟಾಟಾ ಗ್ರೂಪ್ ಸಂಸ್ಥೆ ತಿಳಿಸಿದೆ. ಬಿಸ್ಲೇರಿ ಹೊರತುಪಡಿಸಿ ಚೌಹಾಣ್ ಥಮ್ಸ್ ಅಪ್, ಗೋಲ್ಡ್ ಸ್ಪಾಟ್, ಮಾಝಾ ಮತ್ತು ಲಿಮ್ಕಾದಂತಹ ಸೂಪರ್ ಬ್ರ್ಯಾಂಡ್ ಗಳನ್ನು ಮಾರುಕಟ್ಟೆಗೆ ಪರಿಚಯಿಸಿದ್ದರು. ಈ ಎಲ್ಲಾ ಬ್ರ್ಯಾಂಡ್ ಗಳನ್ನು 1993ರಲ್ಲಿ ಕೋಕಾ ಕೋಲಾ ಕಂಪನಿ ತನ್ನ ತೆಕ್ಕೆಗೆ ತೆಗೆದುಕೊಂಡಿತ್ತು.