Advertisement

ಏಕಕಾಲಕ್ಕೆ ಟಿವಿ ಮೂಲಕ ಟ್ರಂಪ್‌-ಬೈಡೆನ್‌ ಪ್ರಚಾರ

12:07 PM Nov 03, 2015 | mahesh |

ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷೀಯ ಆಕಾಂಕ್ಷಿಗಳಾದ ಡೆಮಾ ಕ್ರಾಟ್‌ನ ಜೋ ಬೈಡೆನ್‌ ಮತ್ತು ರಿಪಬ್ಲಿಕನ್‌ನ ಡೊನಾಲ್ಡ್‌ ಟ್ರಂಪ್‌ ಶುಕ್ರವಾರ ಟಿವಿ ಮೂಲಕ ಏಕಕಾಲಕ್ಕೆ, ಪ್ರತ್ಯೇಕ ಟೌನ್‌ಹಾಲ್‌ ಚರ್ಚೆಯಲ್ಲಿ ಪಾಲ್ಗೊಂಡಿದ್ದಾರೆ.

Advertisement

ಎರಡನೇ ಅಧ್ಯಕ್ಷೀಯ ಚರ್ಚಾ ಕಾರ್ಯಕ್ರಮ ರದ್ದಾದ ಹಿನ್ನೆಲೆಯಲ್ಲಿ ಉಭಯ ನಾಯಕರೂ ಟಿವಿ ಚಾನೆಲ್‌ಗ‌ಳ ಮೂಲಕ ಪೂರ್ವ ನಿರ್ಧರಿತ ವ್ಯಕ್ತಿಗಳ ಪ್ರಶ್ನೆಗೆ ಉತ್ತರಿಸಿದ್ದಾರೆ. ಫ್ಲೋರಿಡಾದ ಮಿಯಾಮಿಯಲ್ಲಿನ ನ್ಯಾಶನಲ್‌ ಬ್ರಾಡ್‌ಕಾಸ್ಟಿಂಗ್‌ ಕಂಪನಿ(ಎನ್‌ಬಿಸಿ) ಟ್ರಂಪ್‌ ಟೌನ್‌ಹಾಲ್‌ ಚರ್ಚೆ ಆಯೋಜಿಸಿದರೆ, ಪೆನ್ಸಿಲ್ವೇನಿಯಾದಲ್ಲಿ ಅಮೆರಿಕನ್‌ ಬ್ರಾಡ್‌ಕಾಸ್ಟಿಂಗ್‌ ಕಂಪೆನಿ (ಎಬಿಸಿ) ಜೋ ಬೈಡೆನ್‌ ಅವರ ಚರ್ಚೆಗೆ ವೇದಿಕೆ ಒದಗಿಸಿತು.

ಈ ನಡುವೆ, ಜೋ ಬೈಡೆನ್‌ ಜತೆಗಿನ ಮೊದಲ ಡಿಬೇಟ್‌ಗೂ ಮುನ್ನ ಕೊರೊನಾ ಪರೀಕ್ಷೆಗೆ ಒಳಗಾಗಿದ್ದಿರೇ ಎಂಬ ಪ್ರಶ್ನೆಗೆ ಟ್ರಂಪ್‌ ಅವರು ಹಾರಿಕೆಯ ಉತ್ತರ ನೀಡಿದ್ದಾರೆ. ಸುದ್ದಿಗಾರರ ಪ್ರಶ್ನೆಗೆ ಸೂಕ್ತ ಉತ್ತರ ನೀಡಲು ನಿರಾಕರಿಸಿದ ಅವರು, “ಪರೀಕ್ಷೆ ನಡೆಸಿರಲೂಬಹುದು, ನಡೆಸದೇ ಇರಲೂ ಬಹುದು’ ಎಂದು ಹೇಳಿದ್ದಾರೆ.

ಮೂವರಿಗೆ ಸೋಂಕು: ಇದೇ ವೇಳೆ, ಜೋ ಬೈಡೆನ್‌ ಅವರ ಅಧ್ಯಕ್ಷೀಯ ಪ್ರಚಾರದ ಭಾಗವಾಗಿದ್ದವರ ಪೈಕಿ ಮೂವರಿಗೆ ಸೋಂಕು ದೃಢಪಟ್ಟಿದೆ. ಉಪಾಧ್ಯಕ್ಷ ಸ್ಥಾನದ ಆಕಾಂಕ್ಷಿ ಕಮಲಾ ಹ್ಯಾರಿಸ್‌ ಸೋಂಕಿತರ ಸಂಪರ್ಕಕ್ಕೆ ಬಂದಿರುವ ಕಾರಣ ಅವರು ಪ್ರಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದಾರೆ

ಜಗತ್ತಿನ ವಾಯು ಮಾಲಿನ್ಯಕ್ಕೆ ಭಾರತ ಕಾರಣ
ಜಗತ್ತಿನ ವಾಯು ಮಾಲಿನ್ಯಕ್ಕೆ ಭಾರತ, ಚೀನ ರಷ್ಯಾಗಳೇ ಕಾರಣ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಆರೋಪಿಸಿದ್ದಾರೆ. ಉತ್ತಕ ಕೆರೊಲಿನಾ ಪ್ರಾಂತ್ಯದಲ್ಲಿ ಚುನಾವಣ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಪರಿಸರ ಸಂರಕ್ಷಣೆಯ ಜತೆಗೆ ದೇಶ ಇಂಧನ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸಿದೆ ಎಂದರು. ಆದರೆ ಭಾರತ, ಚೀನ, ರಷ್ಯಾಗಳೇ ಜಗತ್ತಿನ ಇತರ ಭಾಗಗಳಲ್ಲಿ ವಾಯು ಮಾಲಿನ್ಯಕ್ಕೆ ಕಾರಣವಾಗಿವೆ ಎಂದು ದೂರಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next