Advertisement

ನಾಯಕತ್ವ ನೀಡಿಕೆಗೆ ವಿಶ್ವ ಭಾರತ ದಕ್ಷಿಣ ಆಫ್ರಿಕಾದತ್ತ ನೋಡುತ್ತಿದೆ

07:00 AM Jun 08, 2018 | Karthik A |

ಪೀಟರ್‌ಮಾರಿಟ್ಜ್ ಬರ್ಗ್‌: ನಾಯಕತ್ವ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ವಿಶ್ವವೇ ದಕ್ಷಿಣ ಆಫ್ರಿಕ ಮತ್ತು ಭಾರತದತ್ತ ನೋಡುತ್ತಿದೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಹೇಳಿದ್ದಾರೆ. ಅನ್ಯಾಯ ಮತ್ತು ತಾರತಮ್ಯದ ವಿರುದ್ಧ ಹೋರಾಟ ನಡೆಸುವಲ್ಲಿ ದಕ್ಷಿಣ ಆಫ್ರಿಕಾ ನಾಯಕ ನೆಲ್ಸನ್‌ ಮಂಡೇಲಾ ಮತ್ತು ಮಹಾತ್ಮಾ ಗಾಂಧಿ ನಡೆಸಿದ ಹೋರಾಟ ಪ್ರಮುಖವಾದದ್ದು ಎಂದು ಹೇಳಿದ್ದಾರೆ.

Advertisement

ಮಹಾತ್ಮಾ ಗಾಂಧಿ ಜೂ.7 1893ರಂದು ಬಿಳಿಯರಿಗೆ ಮೀಸಲಾಗಿ ಇರಿಸಿದ್ದ ರೈಲ್ವೆ ಬೋಗಿಯಿಂದ ಹೊರಗೆ ಎಸೆಯಲ್ಪಟ್ಟ ದಿನದ 125ನೇ ವರ್ಷಾಚರಣೆ ಪ್ರಯುಕ್ತ ದಕ್ಷಿಣ ಆಫ್ರಿಕದ ಪೀಟರ್‌ಮಾರಿಟ್ಜ್ಬರ್ಗ್‌ನಲ್ಲಿ ಆಯೋಜಿಸಲಾಗಿದ್ದ ವಿಶೇಷ ಕಾರ್ಯಕ್ರಮದಲ್ಲಿ ಸುಷ್ಮಾ ಸ್ವರಾಜ್‌ ದಿಕ್ಸೂಚಿ ಭಾಷಣ ಮಾಡಿದ್ದಾರೆ. ಅಷ್ಟೇ ಅಲ್ಲದೆ, ಪೆಂಟ್ರಿಕ್‌ ನಿಂದ ಪೀಟರ್‌ಮಾರಿಟ್‌lಬರ್ಗ್‌ಗೆ ರೈಲಿನಲ್ಲೇ ಪ್ರಯಾಣ ಬೆಳೆಸಿದ್ದಾರೆ. 125 ವರ್ಷಗಳ ಹಿಂದೆ ಬಿಳಿಯರಿಗೆಂದೇ ಮೀಸಲಾಗಿ ಇರಿಸಿದ್ದ ಬೋಗಿ ಇದಾಗಿತ್ತು.

ಮಂಡೇಲಾ ಮತ್ತು ಮಹಾತ್ಮಾ ಗಾಂಧಿ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಿಗೆ ಆಶಾಭಾವನೆ ನೀಡಿದ ನಾಯಕರಾಗಿದ್ದಾರೆ. ಪೀಟರ್‌ಮಾರಿಟ್ಜ್ ಬರ್ಗ್‌ನಿಂದ ಇಬ್ಬರು ಸಮರ್ಥ ನಾಯಕರು ಹೊರ ಹೊಮ್ಮುವಂತಾಯಿತು. 1839ರ ಘಟನೆ ಮಹಾತ್ಮಾ ಗಾಂಧಿಯವರಿಗೆ ತಾರತಮ್ಯದ ವಿರುದ್ಧದ ಹೋರಾಟಕ್ಕೆ ದಾರಿ ಮಾಡಿಕೊಟ್ಟಿತು ಎಂದು ಸುಷ್ಮಾ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next