Advertisement

Rajasthan: ಕರ್ತವ್ಯದಲ್ಲಿದ್ದ ಅಧಿಕಾರಿ ಮೇಲೆ ಅಭ್ಯರ್ಥಿ ಹಲ್ಲೆ

11:14 PM Nov 13, 2024 | Team Udayavani |

ಜೈಪುರ: ರಾಜಸ್ಥಾನ ಉಪಚುನಾವಣೆ ವೇಳೆ ಕರ್ತವ್ಯದಲ್ಲಿ ನಿರತರಾಗಿದ್ದ ಸರಕಾರಿ ಅಧಿಕಾರಿಗೆ ಪಕ್ಷೇ ತರ ಅಭ್ಯರ್ಥಿಯೊಬ್ಬರು ಕಪಾಳಮೋಕ್ಷ ಮಾಡಿದ್ದಾರೆ. ದೇವಲಿ-ಉನಿಯಾರ ಕ್ಷೇತ್ರದ ವಿಧಾನಸಭಾ ವ್ಯಾಪ್ತಿಯ ಮತಗಟ್ಟೆಯೊಂದರ ಬಳಿ ಈ ಘಟನೆ ನಡೆದಿದೆ.

Advertisement

ಮೂವರು ವ್ಯಕ್ತಿಗಳಿಗೆ ಅಕ್ರಮವಾಗಿ ಮತ ಚಲಾಯಿಸಲು ಸಹಾಯ ಮಾಡಿದ್ದಾರೆ ಎಂದು ಆರೋಪಿಸಿ, ಉಪ- ವಿಭಾಗೀಯ ಮ್ಯಾಜಿಸ್ಟ್ರೇಟ್‌ (ಎಸ್‌ಡಿಎಂ) ಅಮಿತ್‌ ಚೌಧರಿ ಮೇಲೆ, ಸ್ವತಂತ್ರ ಸ್ಫರ್ಧಿ ನರೇಶ್‌ ಮೀನಾ ಹಲ್ಲೆ ನಡೆಸಿದ್ದಾರೆ. ಕಾಂಗ್ರೆಸ್‌ ಮಾಜಿ ನಾಯಕ ರಾಗಿರುವ ಮೀನಾ, ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

Advertisement

Udayavani is now on Telegram. Click here to join our channel and stay updated with the latest news.

Next