Advertisement
ಮುಟ್ಟಿದ್ದೆಲ್ಲ ಸಾಧನೆಗಳಾಗಿ, ಇಟ್ಟಿದ್ದೆಲ್ಲ ಐತಿಹಾಸಿಕ ಹೆಜ್ಜೆಗಳಾಗಿ ಮುನ್ನುಗ್ಗುವಾಗ ಸವಾಲುಗಳೂ ಧುತ್ತನೆ ಎದ್ದುಬಂದವು.
Related Articles
Advertisement
ಮಿಡಿತ-ತುಡಿತ: ಇಷ್ಟು ದೊಡ್ಡ ಪ್ರಮಾಣದ ಬಿಕ್ಕಟ್ಟು ಎದುರಿಸುವಾಗ ಅನನುಕೂಲ ಸಂಭವಿಸಿಲ್ಲ ಎಂದು ಖಡಾಖಂಡಿತವಾಗಿ ಹೇಳಲಾರೆ. ನಮ್ಮ ಕಾರ್ಮಿಕರು, ವಲಸೆ ಕಾರ್ಮಿಕರು, ಸಣ್ಣ ಪ್ರಮಾಣದ ಕೈಗಾರಿಕೆಗಳ ಕುಶಲಜೀವಿಗಳು, ವ್ಯಾಪಾರಿಗಳು, ಅಲ್ಲದೆ ಇತರೆ ದೇಶವಾಸಿಗಳು ಭಾರೀ ದುಃಖಕ್ಕೆ ಗುರಿಯಾಗಿದ್ದಕ್ಕೆ ಖೇದವಿದೆ. ನಾವೆಲ್ಲರೂ ದುಡಿದು ಅವರ ಕಣ್ಣೀರು ಒರೆಸೋಣ. ಅದರ ಜತೆಯಲ್ಲೇ, ಕೋವಿಡ್ ವಿಚಾರದಲ್ಲಿ ಅಚ್ಚರಿಯ ಗೆಲುವು ಸಾಧಿಸಿದ ಮಾದರಿಯಲ್ಲೇ, ಆರ್ಥಿಕ ಪುನರುಜ್ಜೀವನದಲ್ಲೂ ವಿಶ್ವದ ಮುಂದೆ ಸೂಕ್ತ ಉದಾಹರಣೆಯಾಗಿ ಭಾರತವನ್ನು ನಿಲ್ಲಿಸೋಣ.
ಸ್ವಾವಲಂಬಿ ಭಾರತ ಕಟ್ಟಬೇಕಿದೆ: ಈ ಸಂದಿಗ್ಧ ಕಾಲಾವಧಿಯಲ್ಲಿ ನಾವು ಸ್ವಾವಲಂಬಿಗಳಾಗಲು, ಆತ್ಮನಿರ್ಭರ ಭಾರತ ಕಟ್ಟಲು 20 ಲಕ್ಷ ಕೋಟಿ ರೂ. ಪ್ಯಾಕೇಜ್ ಅನ್ನು ಮೀಸಲಿಡಲಾಗಿದೆ. ಇದು ಪ್ರತಿ ಭಾರತೀಯನ ಮುಂದೆ ಅವಕಾಶಗಳನ್ನು ತೆರೆದಿಟ್ಟು, ಹೊಸಯುಗಕ್ಕೆ ನಾಂದಿ ಹಾಡಲಿದೆ. ರೈತರು, ಕಾರ್ಮಿಕರು, ಸಣ್ಣ ಉದ್ಯಮಿಗಳು ಅಥವಾ ಸ್ಟಾರ್ಟ್‌ಅಪ್‌ನ ಯುವಕರಿಗೂ ಇದರ ಪ್ರಯೋಜನ ದಕ್ಕಲಿದೆ. ಇದು ಆಮದು ತಗ್ಗಿಸಿ, ಸ್ವಾವಲಂಬಿ ಭಾರತವನ್ನು ಸೃಷ್ಟಿಸುತ್ತದೆ.
ಅನವರತ ದುಡಿಯುತ್ತಿರುವೆ: ‘ದೇಶದ ಸವಾಲುಗಳನ್ನು ಗೆಲ್ಲಲು ಹಗಲು- ರಾತ್ರಿ ದುಡಿಯುತ್ತಿದ್ದೇನೆ. ಒಂದು ಪಕ್ಷ ನನ್ನಲ್ಲಿ ನ್ಯೂನತೆಗಳು ಇರಬಹುದು; ಆದರೆ ದೇಶದಲ್ಲಿ ಯಾವುದೇ ಕೊರತೆಗಳೂ ಇಲ್ಲ. ನನ್ನ ಸಂಕಲ್ಪಕ್ಕೆ ಶಕ್ತಿಯ ಮೂಲವೆಂದರೆ ನೀವು, ನಿಮ್ಮ ಬೆಂಬಲ, ಆಶೀರ್ವಾದ ಮತ್ತು ನಿಮ್ಮ ಪ್ರೀತಿ’. “ಕೃತಂ ಮೆ ದಕ್ಷಿಣೆ ಹಸ್ತೆ, ಜಯೋ ಮೆ ಸತ್ಯ ಆಹಿತಃ’ ಎಂಬ ಮಾತುಂಟು. ಇದರರ್ಥ- “ನಾವು ಒಂದು ಕಡೆ ಕ್ರಿಯೆ, ಕರ್ತವ್ಯದಲ್ಲಿ ಮುಳುಗಿದರೆ, ಮತ್ತೂಂದೆಡೆ ಯಶಸ್ಸು ಖಚಿತವಾಗುತ್ತದೆ’ ಎಂದು. ನನ್ನ ದೇಶಕ್ಕಾಗಿ ಯಶಸ್ಸನ್ನು ಪ್ರಾರ್ಥಿಸುತ್ತಾ, ಮತ್ತೂಮ್ಮೆ ನಿಮಗೆ ನಮಸ್ಕರಿಸುತ್ತೇನೆ.
ನಿಮಗೆ, ನಿಮ್ಮ ಕುಟುಂಬಕ್ಕೆ ನನ್ನ ಹೃತ್ಪೂರ್ವಕ ಶುಭಾಶಯಗಳು’.ನಿಮ್ಮ ಪ್ರಧಾನ ಸೇವಕ
– ನರೇಂದ್ರ ಮೋದಿ
(ಒಟ್ಟಾರೆ ಇಡೀ ಪತ್ರದಲ್ಲಿ ಭರವಸೆಯ ಬಿಂಬಗಳೇ ತುಂಬಿಕೊಂಡಿವೆ. ನಿನ್ನೆಯ ಭಾರತದ ಅವಲೋಕನ, ನಾಳೆಯ ಭಾರತದ ಚಿತ್ರಗಳು ಸ್ಪಷ್ಟವಾಗಿವೆ) ಚಾರಿತ್ರಿಕ ಸಾಧನೆ ಉಲ್ಲೇಖ
– ಕಾಶ್ಮೀರದ 370ನೇ ವಿಧಿ ರಾಷ್ಟ್ರೀಯ ಏಕತೆ ಮತ್ತು ಏಕೀಕರಣದ ಮನೋಭಾವವನ್ನು ಹೆಚ್ಚಿಸಿದೆ.
– ಸುಪ್ರೀಂ ಕೋರ್ಟ್‌ನ ಗೌರವಾನ್ವಿತ ತೀರ್ಪು, ಶತಮಾನಗಳ ರಾಮಮಂದಿರ ಸಮಸ್ಯೆಗೆ ಸೌಹಾರ್ದ ಅಂತ್ಯ ಕಲ್ಪಿಸಿದೆ.
– ತ್ರಿವಳಿ ತಲಾಖ್ ಇತಿಹಾಸದ ಕಸದ ಬುಟ್ಟಿಗೆ ಸೇರಿದೆ.
– ಪೌರತ್ವ ಕಾಯ್ದೆ ತಿದ್ದುಪಡಿ, ಭಾರತದ ಕಾರುಣ್ಯ ಮತ್ತು ಅಂತರ್ಗತ ಮನೋಭಾವದ ಅಭಿವ್ಯಕ್ತಿಯಾಗಿದೆ.
– ರಕ್ಷಣಾ ಪಡೆಗಳ ಮುಖ್ಯಸ್ಥರ ಹುದ್ದೆ ರಚನೆ ಮೂರೂ ದಳಗಳೊಂದಿಗೆ ಸಮನ್ವಯತೆ ಸಾಧಿಸಿದೆ. ನಾವು ಮಾಡಿದ್ದು, ನೀವು ಕಂಡಿದ್ದು
– ಪಿಎಂ ಕಿಸಾನ್ ಸಮ್ಮಾನ್ ನಿಧಿಯಡಿ ಒಂದು ವರ್ಷದಲ್ಲಿ 72 ಕೋಟಿ ರೂ.ಗಳಿಗೂ ಅಧಿಕ ಹಣ 9.50 ಕೋಟಿ ರೈತರ ಖಾತೆಗಳಿಗೆ ಜಮೆ.
– ಜಲಜೀವನ್ ಮಿಷನ್ ಯೋಜನೆಯಡಿ 15 ಕೋಟಿಗೂ ಅಧಿಕ ಗ್ರಾಮೀಣ ಕುಟುಂಬಗಳಿಗೆ ಪೈಪ್ ಮೂಲ ಕ ಶುದ್ಧ ಜಲ ವಿತರಣೆ ಗುರಿ.
– 50 ಕೋಟಿ ಜಾನುವಾರುಗಳ ಉತ್ತಮ ಆರೋಗ್ಯಕ್ಕಾಗಿ ಉಚಿತ ವ್ಯಾಕ್ಸಿನೇಷನ್ ನಡೆಸುವ ಬೃಹತ್ ಅಭಿಯಾನ ಚಾಲ್ತಿ.
– ರೈತರು, ಕೃಷಿ ಕಾರ್ಮಿಕರು ಸೇರಿದಂತೆ ಅಸಂಘಟಿತ ವಲಯದ 60 ವರ್ಷ ದಾಟಿದ ಹಿರಿಯರಿಗೆ ಮಾಸಿಕ 3 ಸಾವಿರ ರೂ.ಗಳ ಅನಿಯಮಿತ ಪಿಂಚಣಿಯ ಭರವಸೆ.
– ಮೀನುಗಾರರಿಗೆ ಬ್ಯಾಂಕ್ ಸಾಲ ಸೌಲಭ್ಯ ಪಡೆಯುವ ಜತೆಗೆ, ಪ್ರತ್ಯೇಕ ಇಲಾಖೆ ರಚನೆ.
– ವ್ಯಾಪಾರಿಗಳ ಸಮಸ್ಯೆಗಳನ್ನು ಪರಿಹರಿಸಲು ‘ವ್ಯಾಪಾರಿ ಕಲ್ಯಾಣ್ ಮಂಡಳಿ’ಯನ್ನು ಸ್ಥಾಪಿಸಲು ನಿರ್ಧಾರ.
– ಸ್ವಸಹಾಯ ಗುಂಪುಗಳ 7 ಕೋಟಿಗೂ ಅಧಿಕ ಮಹಿಳೆಯರಿಗೆ ಹೆಚ್ಚಿನ ಆರ್ಥಿಕ ನೆರವು. ಸ್ವಸಹಾಯ ಸಂಘಗಳಿಗೆ 10 ಲಕ್ಷ ರೂ. ಸಾಲದ ಮೊತ್ತ ಈಗ ಗ್ಯಾರಂಟಿ ಇಲ್ಲದೆ 20 ಲಕ್ಷ ರೂ.ಗೆ ಏರಿಕೆ.