Advertisement

ಮಮತಾ ಅವರ ಬಂಗಾಲದಲ್ಲಿ ಬಿಜೆಪಿ ಪ್ರಧಾನ ವಿರೋಧ ಪಕ್ಷ

03:14 PM May 17, 2018 | udayavani editorial |

ಕೋಲ್ಕತ : ಪಶ್ಚಿಮ ಬಂಗಾಲ ಪಂಚಾಯತ್‌ ಚುನಾವಣೆಗಳ ಮತ ಎಣಿಕೆ ಕಾರ್ಯ ಇಂದು ನಡೆಯುತ್ತಿದ್ದು ತೃಣಮೂಲ ಕಾಂಗ್ರೆಸ್‌ ಪ್ರಬಲ ಮುನ್ನಡೆಯನ್ನು ಸಾಧಿಸುತ್ತಿರುವುದು ನಿಚ್ಚಳವಾಗಿ ಕಂಡು ಬಂದಿದೆ. 

Advertisement

2011ರಲ್ಲಿ ಸಿಪಿಎಂ ಅಧಿಕಾರವನ್ನು ಸಂಪೂರ್ಣವಾಗಿ ಕಳೆದುಕೊಂಡು ಮೂಲೆಗುಂಪಾದ ಬಳಿಕ ಭಾರತೀಯ ಜನತಾ ಪಕ್ಷವೇ ಪ್ರಧಾನ ವಿರೋಧ ಪಕ್ಷವಾಗಿ ರಾಜ್ಯದಲ್ಲಿ ಹೊರಹೊಮ್ಮುತ್ತಿದೆ. ಆದರೆ ಟಿಎಂಸಿಗಿಂತ ಬಹಳ ದೂರದಲ್ಲಿ ಅದು ನಿಂತಿರುವುದು ಕಂಡು ಬರುತ್ತದೆ.

ಇಂದು ಮಧ್ಯಾಹ್ನದ ವೇಳೆಗೆ ತೃಣಮೂಲ ಕಾಂಗ್ರೆಸ್‌ 2,400 ಗ್ರಾಮ ಪಂಚಾಯತ್‌ ಸ್ಥಾನಗಳನ್ನು ಗೆದ್ದುಕೊಂಡಿದೆಯಾದರೆ ಬಿಜೆಪಿ 386 ಸ್ಥಾನಗಳನ್ನು ಜಯಿಸಿದೆ. 

ಚುನಾವಣೆಗೆ ಮುನ್ನವೇ ಟಿಎಂಸಿ ಮೂರನೇ ಒಂದಂಶ ಗ್ರಾಮ ಪಂಚಾಯತ್‌ ಸ್ಥಾನಗಳನ್ನು ಟಿಎಂಸಿ ಅವಿರೋಧವಾಗಿ ಗೆದ್ದುಕೊಂಡಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next