Advertisement
ಹಾಸನ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಕಣಕ್ಕಿಳಿಸುವ ಕುರಿತು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕುಮಾರಸ್ವಾಮಿ ಅವರು ಮೊದಲು ತಮ್ಮ ಮನೆ ನಿರ್ವಹಿಸಲಿ. ಕುಟುಂಬದ 10-12 ಮಂದಿ ಚುನಾವಣೆಯಲ್ಲಿ ನಿಂತರೂ ಅವರಿಗೆ ಸಮಾಧಾನವಿಲ್ಲ. ಹಾಗಿದ್ದ ಮೇಲೂ ಪರಸ್ಪರ ಬಡಿದಾಡುತ್ತಿರುವುದೇಕೆ? ಕುಟುಂಬವನ್ನೇ ನಿರ್ವಹಿಸಲಾಗದವರು ರಾಜ್ಯವನ್ನು ಹೇಗೆ ನಿಭಾಯಿಸುತ್ತಾರೆ ಎಂದು ಪ್ರಶ್ನಿಸಿದರು.
ಕಳೆದ ಒಂಬತ್ತು ವರ್ಷಗಳಿಂದ ತೃತೀಯ ಶಕ್ತಿ ಒಂದಾಗಿಸುವ ಪ್ರಯತ್ನ ನಡೆಯುತ್ತಿದೆ. ಅವರಲ್ಲಿ ಒಗ್ಗಟ್ಟು ಹಾಗೂ ಸ್ಪಷ್ಟ ಉದ್ದೇಶವಿಲ್ಲದ್ದರಿಂದ ಅದು ಸಾಧ್ಯವಾಗುತ್ತಿಲ್ಲ. ಹೇಗಾದರೂ ಮಾಡಿ ಪ್ರಧಾನಿಯಾಗಬೇಕೆನ್ನುವ ಉದ್ದೇಶ ಅವರದ್ದು. ಉದಾತ್ತ ಮನೋಭಾವ ಇದ್ದರೆ ತೃತೀಯ ರಂಗ ನಿರ್ಮಾಣವಾಗುತ್ತಿತ್ತು. ಅದು ತೃತೀಯ ರಂಗವಲ್ಲ ಮೂರನೇ ದರ್ಜೆಯ ರಂಗವಾಗಿ ಹೊರಹೊಮ್ಮಲಿದೆ ಎಂದು ವ್ಯಂಗ್ಯವಾಡಿದರು. ಭಾರತ ಜಗತ್ತಿನ ಹಿರಿಯಣ್ಣ ಆಗಬೇಕು, ಭಾರತ ಜಗನ್ಮಾತೆಯಾಗಬೇಕು ಎನ್ನುವ ಕಲ್ಪನೆ ಬಿಜೆಪಿಯಲ್ಲಿದೆ. ಅದರಿಂದಾಗಿ ನಮ್ಮಲ್ಲಿ ಒಮ್ಮೆಯೂ ಒಡಕಾಗಿಲ್ಲ. ಆದರೆ ತೃತೀಯ ರಂಗದ್ದು ಹಾಗಲ್ಲ ಎಂದರು.
Related Articles
Advertisement
ರಾಹುಲ್ ಗಾಂಧಿಗೆ ಭಾರತ ಮತ್ತು ಇಲ್ಲಿಯ ವಿಜ್ಞಾನಿಗಳ ಬಗ್ಗೆ ನಂಬಿಕೆಯಿಲ್ಲ. ಹೀಗಾಗಿ ಕೋವಿಡ್ ವ್ಯಾಕ್ಸಿನ್ ಬಗ್ಗೆ ಆಗಾಗ ಸುಳ್ಳು ಸುದ್ದಿ ಹಬ್ಬಿಸಿ ಅಪಮಾನ ಮಾಡುತ್ತಿದ್ದಾರೆ. ಅದನ್ನು ನಿಲ್ಲಿಸಲಿ ಎಂದರು.