Advertisement
ಇಂಥ ಕ್ಯಾಂಟೀನ್‌ಗಳು ಸರಕಾರಿ ಆಸ್ಪತ್ರೆಗಳಲ್ಲಿ ಆರಂಭಗೊಂಡರೆ ರೋಗಿ ಗಳಿಗೆ ಮತ್ತು ಅವರ ಸಹಾಯಕರಿಗೆ ಅನುಕೂಲವಾಗಲಿದೆ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ.
ಜಿಲ್ಲಾ ವೆನಾÉಕ್ ಹಾಗೂ ಲೇಡಿ ಗೋಶನ್ ಆಸ್ಪತ್ರೆಗಳಿಗೆ ನಿತ್ಯವೂ ದಕ್ಷಿಣ ಕನ್ನಡ,ಉಡುಪಿ,ಉತ್ತರ ಕನ್ನಡ,ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ ಸೇರಿ ದಂತೆ ವಿವಿಧ ಜಿಲ್ಲೆಗಳಿಂದ ಸಾವಿ ರಾರು ರೋಗಿಗಳು ತಪಾಸಣೆ ಹಾಗೂ ಚಿಕಿತ್ಸೆಗೆಂದು ಬರುತ್ತಾರೆ. ವೆನಾÉಕ್ ಆಸ್ಪತ್ರೆಯಲ್ಲಿ ಸುಮಾರು 800 ಮಂದಿ ಒಳರೋಗಿಗಳಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಾವಿರಾರು ಮಂದಿ ಹೊರರೋಗಿಗಳಾಗಿ ಚಿಕಿತ್ಸೆ ಪಡೆಯುತ್ತಾರೆ. ಇದೇ ರೀತಿಯಾಗಿ ಲೇಡಿಗೋಶನ್ ಆಸ್ಪತ್ರೆಯಲ್ಲೂ ಸುಮಾರು 500 ರೋಗಿಗಳು ಚಿಕಿತ್ಸೆ ಪಡೆಯುತ್ತಾರೆ. ಜಿಲ್ಲೆಯಲ್ಲಿ ತಾಲೂಕು ಮಟ್ಟದಲ್ಲಿ ಸರಕಾರಿ , ಸಮುದಾಯ ಆಸ್ಪತ್ರೆಗಳಿವೆ. ಇಲ್ಲಿ ಆರ್ಥಿಕವಾಗಿ ಹಿಂದುಳಿದವರೇ ಹೆಚ್ಚು ಮಂದಿ ಚಿಕಿತ್ಸೆಗೆ ಬರುತ್ತಾರೆ. ಇವರಿಗೆ ಆಸ್ಪತ್ರೆ ವತಿಯಿಂದ ಊಟ ನೀಡಲಾಗುತ್ತಿದೆ. ರೋಗಿಗಳ ಆರೈಕೆಗಾಗಿ ಬರುವ ಅವರ ಸಂಬಂಧಿಕರು ಹೊರಗೆ ಹಣ ತೆತ್ತು ಊಟ ಉಪಾಹಾರ ಮಾಡಬೇಕಾಗುತ್ತದೆ. ಅದಕ್ಕಾಗಿ ಬಹಳಷ್ಟು ಹಣವನ್ನು ವ್ಯಯ ಮಾಡಬೇಕಾಗಿದೆ. ಹೀಗಾಗಿ ಇವರಿಗೆ ಕಡಿಮೆ ದರದಲ್ಲಿ ಊಟ, ಉಪಾಹಾರಗಳು ಲಭ್ಯವಾದರೆ ಪ್ರಯೋಜನವಾಗಲಿದೆ. ವೆನಾÉಕ್ ಆಸ್ಪತ್ರೆಯಲ್ಲಿ ರೋಗಿಗಳ ಆರೈಕೆಗೆ ಬರುವವರಿಗೆ ಮಂಜೇಶ್ವರದ ಪಾವೂರಿನ ಸ್ನೇಹಾಲಯ ಆಶ್ರಮ ಉಚಿತವಾಗಿ ಊಟ ಪೂರೈಸುತ್ತಿದೆ. ಇದರಿಂದ ಬಡರೋಗಿಗಳ ಕುಟುಂಬಗಳಿಗೆ ಪ್ರಯೋಜನವಾಗಿದೆ. ಶೀಘ್ರ ಅನುಷ್ಟಾನಗೊಳ್ಳಲಿ
ಎಲ್ಲಾ ಜಿಲ್ಲಾ ಹಾಗೂ ತಾಲೂಕು ಸರಕಾರಿ ಆಸ್ಪತ್ರೆಗಳಲ್ಲಿ ಕ್ಯಾಂಟೀನ್, ಹಣ್ಣುಗಳ ಮಳಿಗೆ, ನಂದಿನಿ ಹಾಲಿನ ಮಳಿಗೆಗಳನ್ನು ಒಳಗೊಂಡ ನಾಗರಿಕ ಸೌಲಭ್ಯಗಳ ಸಂಕೀರ್ಣಗಳನ್ನು ಸ್ಥಾಪಿಸಲು ಸರಕಾರ ಆಲೋಚಿಸುತ್ತಿದೆ ಎನ್ನಲಾಗಿದೆ. ಈ ಮಾದರಿಯನ್ನು ಕೆ.ಆರ್. ಪುರ ಸಾರ್ವಜನಿಕ ಆಸ್ಪತ್ರೆ ಸೇರಿದಂತೆ ಬೆಂಗಳೂರಿನಲ್ಲಿ 7 ಕಡೆಗಳಲ್ಲಿ ಆರಂಭಿಸಲಿದೆ. ದೊಡ್ಡ ಬಳ್ಳಾಪುರ ಮಹಿಳಾ ಆಸ್ಪತ್ರೆಯಲ್ಲಿ ಈಗಾಗಲೇ ಆರಂಭವಾಗಿದೆ. ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಸರಕಾರಿ ಆಸ್ಪತ್ರೆಗಳಲ್ಲೂ ಸ್ಥಾಪನೆಯಾದರೆ ಅನುಕೂಲವಾಗಲಿದೆ.
Related Articles
Advertisement
ತೀರ ಅವಶ್ಯ“”ಆರೋಗ್ಯ ಸಚಿವ ರಮೇಶ್ ಕುಮಾರ್ ಕೆಲವು ತಿಂಗಳ ಹಿಂದೆ ಜಿಲ್ಲಾ ವೆನಾÉಕ್ ಆಸ್ಪತ್ರೆಯಲ್ಲಿ ರಿಯಾಯತಿ ದರದ ಕ್ಯಾಂಟೀನ್ ಸ್ಥಾಪಿಸುವ ಬಗ್ಗೆ ಒಲವು ವ್ಯಕ್ತಪಡಿಸಿ ದ್ದರು. ಸರಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಸರಕಾರದ ವತಿ ಯಿಂದ ಉಚಿತ ಊಟ ನೀಡ ಲಾಗುತ್ತದೆ. ರೋಗಿಗಳ ಆರೈಕೆಗೆ ಬರುವವರು ಹೊಟೇಲ್‌ಗಳನ್ನು ಆಶ್ರಯಿಸಬೇಕಾಗಿದೆ. ಆದ ಕಾರಣ ಇಲ್ಲೂ ಇಂದಿರಾ ಕ್ಯಾಂಟೀನ್ ಮಾದರಿ ಜಾರಿಯಾದರೆ ಅನುಕೂಲವಾಗುತ್ತದೆ ಎನ್ನುತ್ತಾರೆ ಮಾಜಿ ಕಾರ್ಪೊರೇಟರ್, ವೆನಾÉಕ್ ಆಸ್ಪತ್ರೆಯಲ್ಲಿ ರೋಗಿಗಳಿಗೆ ಸ್ಪಂದಿಸು ತ್ತಿರುವ ಪದ್ಮನಾಭ ಅಮೀನ್.