Advertisement
ಸುಮಾರು 6.15 ಕೋಟಿ ರೂ. ವೆಚ್ಚದಲ್ಲಿ ಬಂಟ್ವಾಳದ ಸಮುದಾಯ ಆರೋಗ್ಯ ಕೇಂದ್ರವನ್ನು ನೂರು ಹಾಸಿಗೆಗಳ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಿ ಕಟ್ಟಡ ಸಹಿತ ಇತರ ಸೌಲಭ್ಯಗಳನ್ನು ಒದಗಿಸಲಾಗಿತ್ತು. 2017ರಲ್ಲಿ ಮೇಲ್ದರ್ಜೆಗೇರಿದ ಆಸ್ಪತ್ರೆಯನ್ನು ಸಿಎಂ ಉದ್ಘಾಟಿಸಿದ್ದರು. ಆದರೆ ಸಾಕಷ್ಟು ಹುದ್ದೆಗಳನ್ನು ತುಂಬುವಲ್ಲಿ ಮಾತ್ರ ವಿಫಲವಾಗಿತ್ತು. ಇದ ರಿಂದ ಗುರಿ ಸಾಧಿಸುವಲ್ಲಿ ವಿಫಲವಾಗಿದೆ.
ಬಂಟ್ವಾಳ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಕಳೆದ ಮೇ ತಿಂಗಳೊಂದರಲ್ಲಿ 749 ಮಂದಿ ಒಳರೋಗಿಗಳಾಗಿ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. 10,494 ಮಂದಿ ಹೊರ ರೋಗಿಗಳಾಗಿ ಚಿಕಿತ್ಸೆ ಪಡೆದಿದ್ದಾರೆ. ಸಹಸ್ರಾರು ಸಂಖ್ಯೆಯ ರೋಗಿಗಳು ಇಲ್ಲಿನ ಆಸ್ಪತ್ರೆಯ ಸದುಪಯೋಗ ಪಡೆಯುತ್ತಿದ್ದಾರೆ. ಆದರೆ ಸಾಕಷ್ಟು ಸಂಖ್ಯೆಯಲ್ಲಿ ಸಿಬಂದಿ ನೇಮಿಸದ
ಕಾರಣ ಎಲ್ಲವೂ ಗುತ್ತಿಗೆ ಗ್ರೂಪ್ ಡಿ. ನೌಕರರ ಕೊರತೆ ನೀಗಿಸಲು 18 ಮಂದಿ ಹೊರಗುತ್ತಿಗೆ ಸಿಬಂದಿಯನ್ನು ನೇಮಿಸಲಾಗಿದೆ. ಇಬ್ಬರು ಚಾಲಕರು ಹೊರಗುತ್ತಿಗೆಯವರು, ವೈದ್ಯರನ್ನು ಹೊರಗುತ್ತಿಗೆಯಲ್ಲಿ ನೇಮಿಸಿದ್ದರೂ ಅವರು ಬರಲು ಒಪ್ಪದ ಕಾರಣ ಸ್ತ್ರೀರೋಗ ವೈದ್ಯರ ಹುದ್ದೆ ಖಾಲಿಯಾಗಿದೆ. ಇದರಿಂದ ಪ್ರಸವ ಉದ್ದೇಶಕ್ಕೆ ಬರುವ ಮಹಿಳೆಯರ ಸಂಖ್ಯೆ ಸಾಕಷ್ಟು ಕಡಿಮೆ ಆಗಿದೆ ಎಂದು ವೈದ್ಯಾಧಿಕಾರಿ ತಿಳಿಸಿದ್ದಾರೆ. ಜನೌಷಧ ಕೇಂದ್ರ
ಬಂಟ್ವಾಳ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಜನೌಷಧ ಕೇಂದ್ರವನ್ನು ಒದಗಿಸಲಾಗಿದೆ. ಇದರಿಂದ ದೊಡ್ಡ ಸಂಖ್ಯೆಯ ರೋಗಿಗಳಿಗೆ ಪ್ರಯೋಜನ ಆಗಿದೆ. ಸರಕಾರಿ ಆಸ್ಪತ್ರೆಯಲ್ಲಿ ಸಿಗದ ಔಷಧಗಳು ಇಲ್ಲಿ ಲಭ್ಯವಿವೆ. ಅನೇಕ ಸಂದರ್ಭಗಳಲ್ಲಿ ರೋಗ್ಯ ಇಲಾಖೆ ಇಲ್ಲಿಂದಲೇ ಔಷಧಗಳನ್ನು ಖರೀದಿಸುವ ಸಂದರ್ಭವೂ ಎದುರಾಗಿದೆ. ಅತ್ಯಂತ ಕಡಿಮೆ ದರದಲ್ಲಿ, ಅಂದರೆ ಶೇ. 80ರಷ್ಟು ಕಡಿಮೆ ದರದಲ್ಲಿ ಇಲ್ಲಿ ಔಷಧಗಳು ಲಭ್ಯವಾಗುತ್ತವೆ.
Related Articles
ಆರೋಗ್ಯ ಕೇಂದ್ರದಲ್ಲಿ ದೊಡ್ಡ ಸಂಖ್ಯೆಯ ಸಿಬಂದಿ ಕೊರತೆ ಇದ್ದರೂ ಅದನ್ನು ಹೊರಗುತ್ತಿಗೆ ಮತ್ತು ಎರವಲು ಸೇವೆಯ ಮೂಲಕ ತುಂಬುವ ಕೆಲಸ ಆಗಿದೆ. ರೋಗಿಗಳಿಗೆ ಸಮಸ್ಯೆಯಾಗದಂತೆ ಕ್ರಮ ಮಾಡಿದೆ. ಸಿಬಂದಿ ಕೊರತೆಯನ್ನು ತುಂಬುವಲ್ಲಿ ಸರಕಾರಕ್ಕೆ ಬರೆಯಲಾಗಿದೆ. ಮುಂದಿನ ದಿನಗಳಲ್ಲಿ ಸರಕಾರದಿಂದ ಸೂಕ್ತ ಕ್ರಮ ಆಗಬಹುದು.
– ಡಾ| ಸದಾಶಿವ
ಮುಖ್ಯ ವೈದ್ಯಾಧಿಕಾರಿ,
ಬಂಟ್ವಾಳ ತಾ| ಸಾರ್ವಜನಿಕ ಆಸ್ಪತ್ರೆ
Advertisement
ರಾಜಾ ಬಂಟ್ವಾಳ