Advertisement
ಭಾರತದ ಗೆಲುವಿಗೆ ನಿಗದಿಯಾಗಿರುವುದು 106 ರನ್ನುಗಳ ಸಣ್ಣ ಗುರಿ. ಮೂರನೇ ದಿನದಾಟದ ಕೊನೆಯ 6 ಓವರ್‌ಗಳನ್ನು ಅತ್ಯಂತ ಯಶಸ್ವಿಯಾಗಿ ನಿಭಾಯಿಸಿದ ಕೆ.ಎಲ್. ರಾಹುಲ್-ಮುರಳಿ ವಿಜಯ್ ಈಗಾಗಲೇ 19 ರನ್ ತಂದಿತ್ತಿದ್ದಾರೆ. ಸರಣಿ ಜಯಕ್ಕೆ ಬೇಕಿರುವುದು ಇನ್ನು 87 ರನ್ ಮಾತ್ರ. ಧರ್ಮಶಾಲಾ ಟ್ರ್ಯಾಕ್ ಎಷ್ಟೇ ತಿರುವು ಪಡೆದರೂ ಉಳಿದ ಈ ಮೊತ್ತವನ್ನು ಗಳಿಸುವುದು ಖಂಡಿತ ಕಷ್ಟವಲ್ಲ. ಅಂದಮಾತ್ರಕ್ಕೆ ಟೀಮ್ ಇಂಡಿಯಾ ಮೈಮರೆ ಯುವಂತಿಲ್ಲ. ಆಸ್ಟ್ರೇಲಿಯದ ದ್ವಿತೀಯ ಇನ್ನಿಂಗ್ಸ್ ಕುಸಿತವನ್ನು ಆತಿಥೇಯರು ಎಚ್ಚರಿಕೆಯಿಂದ ಗಮನಿಸಬೇಕಿದೆ.
ಈ ಪಂದ್ಯದಲ್ಲಿ ಗೆಲುವಿನ ಕದ ತೆರೆಯಬೇಕಾದರೆ ರಹಾನೆ ಪಡೆ ಮೊದಲು ಇನ್ನಿಂಗ್ಸ್ ಹಿನ್ನಡೆಯಿಂದ ಪಾರಾಗ ಬೇಕಿತ್ತು. ಸಾಧ್ಯವಾದರೆ ಒಂದಿಷ್ಟಾದರೂ ಮುನ್ನಡೆ ಸಂಪಾದಿಸಬೇಕಿತ್ತು. ಬಳಿಕ ಆಸ್ಟ್ರೇಲಿಯವನ್ನು ಬಡಬಡನೆ ಉದುರಿಸಬೇಕಿತ್ತು. ಅದೇನು ವಿಸ್ಮಯವೋ, ಇದೆಲ್ಲವೂ ಸೋಮವಾರದ ಆಟದಲ್ಲಿ ಸಾಕಾರಗೊಂಡಿತು; ಟೀಮ್ ಇಂಡಿಯಾದ ಅದೃಷ್ಟವನ್ನು ತೆರೆದಿರಿಸಿತು.
Related Articles
Advertisement
ಭಾರತದ ಬೌಲಿಂಗ್ ಮ್ಯಾಜಿಕ್ದ್ವಿತೀಯ ಸರದಿಯಲ್ಲಿ ಭಾರತದ ಬೌಲರ್‌ಗಳು ಸೇರಿಕೊಂಡು ಆಸ್ಟ್ರೇಲಿಯದ ಮೇಲೆರಗಿ ಹೋದ ಪರಿ ನಿಜಕ್ಕೂ ರಂಜನೀಯವಾಗಿತ್ತು. ಮೊದಲು ಉಮೇಶ್ ಯಾದವ್-ಭುವನೇಶ್ವರ್ ಕುಮಾರ್, ಬಳಿಕ ರವೀಂದ್ರ ಜಡೇಜ-ರವಿಚಂದ್ರನ್ ಅಶ್ವಿನ್ ಘಾತಕ ಬೌಲಿಂಗಿನ ನೈಜ ರೂಪವನ್ನು ಅನಾವರಣಗೊಳಿಸಿದರು. ಜಡೇಜ, ಅಶ್ವಿನ್ ತಲಾ 3 ವಿಕೆಟ್ ಬೇಟೆಯಾಡಿದರೆ, ಯಾದವ್ ಆರಂಭಿಕರನ್ನು ಮನೆಗೆ ಕಳುಹಿಸಿದರು. ಸ್ಮಿತ್ ಆವರನ್ನು ಬೌಲ್ಡ್ ಮಾಡಿದ ಭುವನೇಶ್ವರ್ ಎಸೆತದ ಬ್ಯೂಟಿಗೆ ಬಹುಶಃ ಸಾಟಿ ಇರಲಿಕ್ಕಿಲ್ಲ. ಆದರೆ ಚೈನಾಮನ್ ಕುಲದೀಪ್ ಯಾದವ್ ಮಾತ್ರ ವಿಕೆಟ್ ಕೀಳಲು ವಿಫಲರಾದರು. ಅವರಿಗೆ ಲಭಿಸಿದ್ದು ಐದೇ ಓವರ್. ಭಾರತದ 32 ರನ್ “ಸಾಲ’ ಚುಕ್ತಾ ಮಾಡುವಷ್ಟರಲ್ಲೇ ಆಸ್ಟ್ರೇಲಿಯನ್ನರ 3 ವಿಕೆಟ್ ಉದುರಿ ಹೋಗಿತ್ತು. 4ನೇ ವಿಕೆಟಿಗೆ ಹ್ಯಾಂಡ್ಸ್
ಕಾಂಬ್-ಮ್ಯಾಕ್ಸ್‌ವೆಲ್ 56 ರನ್ ಪೇರಿಸಿ ಹೋರಾಟ ಸಂಘಟಿಸಿದರೂ ಈ ಜೋಡಿ ಬೇರ್ಪಟ್ಟ ಬಳಿಕ ಮತ್ತೆ ವಿಕೆಟ್ ಪತನ ತೀವ್ರ ಗೊಂಡಿತು. ಆಸ್ಟ್ರೇಲಿಯದ ಸರದಿಯಲ್ಲಿ 45 ರನ್ ಮಾಡಿದ ಮ್ಯಾಕ್ಸ್‌ವೆಲ್ ಅವರದೇ ಹೆಚ್ಚಿನ ಗಳಿಕೆ. ಕೀಪರ್ ವೇಡ್
ಔಟಾಗದೆ 25 ರನ್ ಮಾಡಿದರು. ಈ ಸರಣಿಯ ತ್ರಿ-ಶತಕವೀರ ಸ್ಮಿತ್ 17 ರನ್ನಿಗೆ ಆಟ ಮುಗಿಸಿದರು. ಇನ್ನೊಂದೇ ಒಂದು ರನ್ ಮಾಡಿದ್ದೇ ಆದರೆ ಅವರು ಈ ಸರಣಿಯಲ್ಲಿ 500 ರನ್ ಪೂರ್ತಿ ಗೊಳಿಸು ತ್ತಿದ್ದರು! ಜಡೇಜ ಜಬರ್ದಸ್ತ್ ಸಾಹಸ
ಭಾರತದ ಈ ಬೊಂಬಾಟ್ ಪ್ರದರ್ಶನದ ಹಿಂದಿನ ರೂವಾರಿಯೆಂದರೆ ರವೀಂದ್ರ ಜಡೇಜ. ಅವರ ಆಲ್‌ರೌಂಡ್ ಪ್ರದರ್ಶನದಿಂದ ಟೀಮ್ ಇಂಡಿಯಾ ತನ್ನ ಹಿಡಿತವನ್ನು ಬಿಗಿಗೊಳಿಸುತ್ತ ಹೋಯಿತು. 16 ರನ್ ಮಾಡಿ ಬ್ಯಾಟಿಂಗ್ ಕಾಯ್ದುಕೊಂಡಿದ್ದ ಜಡೇಜ 63ರ ತನಕ ತಮ್ಮ ಆಟವನ್ನು ವಿಸ್ತರಿಸಿದರು. ಸಾಹಾ ಜತೆ ಸೇರಿ ತಂಡದ ಮೊತ್ತವನ್ನು 317ರ ತನಕ ಬೆಳೆಸಿದರು. ಈ ಹಂತದಲ್ಲಿ ಕಮಿನ್ಸ್ ಎಸೆತವೊಂದಕ್ಕೆ ಸ್ಟಂಪ್ ಎಗರಿಸಿಕೊಂಡರು. ಅತ್ಯಂತ ಆಕ್ರಮಣಕಾರಿಯಾಗಿ ಗೋಚರಿಸಿದ ಜಡೇಜ 95 ಎಸೆತಗಳಿಂದ ಈ ಬಹುಮೂಲ್ಯ ಇನ್ನಿಂಗ್ಸ್ ಕಟ್ಟಿದರು. ಸಿಡಿಸಿದ್ದು 4 ಸಿಕ್ಸರ್, 4 ಬೌಂಡರಿ. ಸಾಹಾ ಜತೆಗೂಡಿ 7ನೇ ವಿಕೆಟಿಗೆ 96 ರನ್ ಪೇರಿಸುವ ಮೂಲಕ ಜಡೇಜ ಟೀಮ್ ಇಂಡಿಯಾ ಪಾಲಿಗೆ ಆಪ್ತರಕ್ಷಕನಾದರು. ಜಡೇಜ ಔಟಾದ ಮರು ಓವರಿನಲ್ಲೇ ಭುವನೇಶ್ವರ್ ಖಾತೆ ತೆರೆಯದೆ ಬೌಲ್ಡ್ ಆದರು. ಹತ್ತರಲ್ಲಿದ್ದ ಸಾಹಾ 102 ಎಸೆತಗಳಿಂದ 31 ರನ್ ಮಾಡಿ 9ನೆಯವರಾಗಿ ನಿರ್ಗಮಿಸಿದರು. ಆಸ್ಟ್ರೇಲಿಯ ಪ್ರಥಮ ಇನ್ನಿಂಗ್ಸ್ 300
ಭಾರತ ಪ್ರಥಮ ಇನ್ನಿಂಗ್ಸ್ (2ನೇ ದಿನ: 6 ವಿಕೆಟಿಗೆ 248)
ವೃದ್ಧಿಮಾನ್ ಸಾಹಾ ಸಿ ಸ್ಮಿತ್ ಬಿ ಕಮಿನ್ಸ್ 31
ರವೀಂದ್ರ ಜಡೇಜ ಬಿ ಕಮಿನ್ಸ್ 63
ಭುವನೇಶ್ವರ್ ಕುಮಾರ್ ಸಿ ಸ್ಮಿತ್ ಬಿ ಓ’ಕೀಫ್ 0
ಕುಲದೀಪ್ ಯಾದವ್ ಸಿ ಹ್ಯಾಝಲ್‌ವುಡ್ ಬಿ ಲಿಯೋನ್ 7
ಉಮೇಶ್ ಯಾದವ್ ಔಟಾಗದೆ 2 ಇತರ 20
ಒಟ್ಟು (ಆಲೌಟ್) 332
ವಿಕೆಟ್ ಪತನ: 7-317, 8-318, 9-318. ಬೌಲಿಂಗ್:
ಜೋಶ್ ಹ್ಯಾಝಲ್‌ವುಡ್ 25-8-51-1
ಪ್ಯಾಟ್ ಕಮಿನ್ಸ್ 30-8-94-3
ನಥನ್ ಲಿಯೋನ್ 34.1-5-92-5
ಸ್ಟೀವ್ ಓ’ಕೀಫ್ 27-4-75-1
ಗ್ಲೆನ್ ಮ್ಯಾಕ್ಸ್‌ವೆಲ್ 2-0-5-0
ಆಸ್ಟ್ರೇಲಿಯ ದ್ವಿತೀಯ ಇನ್ನಿಂಗ್ಸ್
ಮ್ಯಾಟ್ ರೆನ್‌ಶಾ ಸಿ ಸಾಹಾ ಬಿ ಯಾದವ್ 8
ಡೇವಿಡ್ ವಾರ್ನರ್ ಸಿ ಸಾಹಾ ಬಿ ಯಾದವ್ 6
ಸ್ಟೀವನ್ ಸ್ಮಿತ್ ಬಿ ಭುವನೇಶ್ವರ್ 17
ಪೀಟರ್ ಹ್ಯಾಂಡ್ಸ್‌ಕಾಂಬ್ ಸಿ ರಹಾನೆ ಬಿ ಅಶ್ವಿನ್ 18
ಗ್ಲೆನ್ ಮ್ಯಾಕ್ಸ್‌ವೆಲ್ ಎಲ್‌ಬಿಡಬ್ಲ್ಯು ಅಶ್ವಿನ್ 45
ಶಾನ್ ಮಾರ್ಷ್ ಸಿ ಪೂಜಾರ ಬಿ ಜಡೇಜ 1
ಮ್ಯಾಥ್ಯೂ ವೇಡ್ ಔಟಾಗದೆ 25
ಪ್ಯಾಟ್ ಕಮಿನ್ಸ್ ಸಿ ರಹಾನೆ ಬಿ ಜಡೇಜ 12
ಸ್ಟೀವ್ ಓ’ಕೀಫ್ ಸಿ ಪೂಜಾರ ಬಿ ಜಡೇಜ 0
ನಥನ್ ಲಿಯೋನ್ ಸಿ ವಿಜಯ್ ಬಿ ಯಾದವ್ 0
ಜೋಶ್ ಹ್ಯಾಝಲ್‌ವುಡ್ ಎಲ್‌ಬಿಡಬ್ಲ್ಯು ಅಶ್ವಿನ್ 0 ಇತರ 5
ಒಟ್ಟು (ಆಲೌಟ್) 137
ವಿಕೆಟ್ ಪತನ: 1-10, 2-31, 3-31, 4-87, 5-92, 6-106, 7-121, 8-121, 9-122. ಬೌಲಿಂಗ್:
ಭುವನೇಶ್ವರ್ ಕುಮಾರ್ 7-1-27-1
ಉಮೇಶ್ ಯಾದವ್ 10-3-29-3
ಕುಲದೀಪ್ ಯಾದವ್ 5-0-23-0
ರವೀಂದ್ರ ಜಡೇಜ 18-7-24-3
ಆರ್. ಅಶ್ವಿನ್ 13.5-4-29-3 ಭಾರತ ದ್ವಿತೀಯ ಇನ್ನಿಂಗ್ಸ್ (ಗೆಲುವಿನ ಗುರಿ 106 ರನ್)
ಕೆ.ಎಲ್. ರಾಹುಲ್ ಬ್ಯಾಟಿಂಗ್ 13
ಮುರಳಿ ವಿಜಯ್ ಬ್ಯಾಟಿಂಗ್ 6 ಇತರ 0
ಒಟ್ಟು (ವಿಕೆಟ್ ನಷ್ಟವಿಲ್ಲದೆ) 19 ಬೌಲಿಂಗ್:
ಪ್ಯಾಟ್ ಕಮಿನ್ಸ್ 3-1-14-0
ಜೋಶ್ ಹ್ಯಾಝಲ್‌ವುಡ್ 2-0-5-0
ಸ್ಟೀವ್ ಓ’ಕೀಫ್ 1-1-0-0 ಎಕ್ಸ್‌ಟ್ರಾ ಇನ್ನಿಂಗ್ಸ್
ಭಾರತ ಗುರಿ ಮುಟ್ಟಲು ವಿಫಲವಾದ ಅತೀ ಸಣ್ಣ ಮೊತ್ತವೆಂದರೆ 120 ರನ್. ಅದು ವೆಸ್ಟ್ ಇಂಡೀಸ್ ಎದುರಿನ 1997ರ ಬ್ರಿಜ್‌ಟೌನ್ ಟೆಸ್ಟ್ (81 ಆಲೌಟ್). ಆಸ್ಟ್ರೇಲಿಯ ವಿರುದ್ಧ ಚೇಸ್ ಮಾಡಲಾಗದ ಸಣ್ಣ ಮೊತ್ತವೆಂದರೆ 231 ರನ್. 1956-57ರ ಕೋಲ್ಕತಾ ಟೆಸ್ಟ್‌ನಲ್ಲಿ ಭಾರತ 136 ರನ್ನಿಗೆ ಸರ್ವಪತನ ಕಂಡಿತ್ತು. ರವೀಂದ್ರ ಜಡೇಜ 2016-17ರ ಋತುವಿನಲ್ಲಿ 6 ಸಲ 50 ಪ್ಲಸ್ ರನ್ ಬಾರಿಸಿ ಕೊಹ್ಲಿ, ವಿಜಯ್, ರಾಹುಲ್ ಸಾಲಿನಲ್ಲಿ ಕಾಣಿಸಿಕೊಂಡರು. ಪೂಜಾರ 12 ಸಲ ಈ ಸಾಧನೆಗೈದು ಅಗ್ರಸ್ಥಾನದಲ್ಲಿದ್ದಾರೆ. ಜಡೇಜ ಕ್ರಿಕೆಟ್ ಋತುವೊಂದರಲ್ಲಿ 500 ರನ್ ಹಾಗೂ 50 ವಿಕೆಟ್ ಸಾಧನೆಗೈದ ವಿಶ್ವದ 3ನೇ ಕ್ರಿಕೆಟಿಗನೆನಿಸಿ ದರು. ಉಳಿದಿಬ್ಬರೆಂದರೆ ಕಪಿಲ್‌ದೇವ್ (1979-80) ಮತ್ತು ಮಿಚೆಲ್ ಜಾನ್ಸನ್ (2008-09). ನಥನ್ ಲಿಯೋನ್ ಭಾರತದ ವಿರುದ್ಧ ಅತ್ಯಧಿಕ ವಿಕೆಟ್ ಉರುಳಿಸಿದ 2ನೇ ಸ್ಪಿನ್ನರ್ ಎನಿಸಿದರು (64 ವಿಕೆಟ್). ಮುತ್ತಯ್ಯ ಮುರಳೀಧರನ್ ಅಗ್ರಸ್ಥಾನದಲ್ಲಿದ್ದಾರೆ (105). ಲಿಯೋನ್ ಭಾರತದ ವಿರುದ್ಧ ಇನ್ನಿಂಗ್ಸ್ ಒಂದರಲ್ಲಿ 5ನೇ ಸಲ 5 ಪ್ಲಸ್ ವಿಕೆಟ್ ಕಿತ್ತರು (14 ಟೆಸ್ಟ್). ಆಸ್ಟ್ರೇಲಿಯ 4ನೇ ಸಲ ಭಾರತದ ವಿರುದ್ಧ 150ಕ್ಕೂ ಕಡಿಮೆ ಓವರ್‌ಗಳನ್ನು ಆಡಿತು (ಎರಡೂ ಇನ್ನಿಂಗ್ಸ್‌ಗಳಲ್ಲಿ ಆಲೌಟ್ ಆದ ಸಂದರ್ಭಗಳಲ್ಲಿ). ಈ ಪಂದ್ಯದಲ್ಲಿ ಆಸೀಸ್ ಎದುರಿಸಿದ ಓವರ್‌ಗಳ ಸಂಖ್ಯೆ 142.2. ಉಮೇಶ್ ಯಾದವ್ ಸರಣಿಯೊಂದರಲ್ಲಿ ಸರ್ವಾಧಿಕ 17 ವಿಕೆಟ್ ಕಿತ್ತು ವೈಯಕ್ತಿಕ ದಾಖಲೆ ನಿರ್ಮಿಸಿದರು.