ಉಡುಪಿ: ಆಯುರ್ವೇದ ಚಿಕಿತ್ಸೆ ಬಗ್ಗೆ ಯುರೋಪಿನ ಕ್ರೋವೆಷೀಯ ದೇಶದ ಝಗ್‌ರೆಬ್‌ನಲ್ಲಿ ಆ 10ರ ವರೆಗೆ ನಡೆಯುತ್ತಿರುವ ಕಾರ್ಯಾಗಾರದಲ್ಲಿ ವಿಶೇಷ ಆಹ್ವಾನಿತ ತಜ್ಞರಾದ ಉಡುಪಿ ಎಸ್‌ಡಿಎಂ ಆಯರ್ವೇದ ಫಾರ್ಮಸಿಯ ಜಿ.ಎಂ. ಡಾ| ಮುರಳೀಧರ ಬಲ್ಲಾಳ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದಾರೆ.
ಇವರು “ಭಾರತದಲ್ಲಿನ ಪ್ರಾಚೀನ ಆಯರ್ವೇದ ವೈಭವ ಮತ್ತು ರಸಾಯನ ಚಿಕಿತ್ಸಾ ರಹಸ್ಯಗಳು’ (ಪುನರುಜ್ಜೀವನಗೊಳಿಸುವ ಗಿಡಮೂಲಿಕೆ ಔಷಧಗಳು) ಬಗ್ಗೆ ಅಂತಾರಾಷ್ಟ್ರೀಯ ಆಯುರ್ವೇದ ವೈದ್ಯ ಸಮುದಾಯದೊಂದಿಗೆ ಕಾರ್ಯಾಗಾರ ಮತ್ತು ಸಮಾಲೋಚನೆ ನಡೆಸಲಿದ್ದಾರೆ.
ಅಂತಾರಾಷ್ಟ್ರೀಯ ಸಮುದಾಯದಿಂದ ಆಯುರ್ವೇದದ ಬಗ್ಗೆ ಸಕಾರಾತ್ಮಕ ಪ್ರತಿಕ್ರಿಯೆ ಮತ್ತು ಉತ್ಸಾಹದಿಂದಾಗಿ ಇವರು ಭಾಗವಹಿಸುತ್ತಿರುವ 5ನೇ ಅಂತಾರಾಷ್ಟ್ರೀಯ ಸಮ್ಮೇಳನ ಇದಾಗಿದೆ.
ರಸಾಯನ ಚಿಕಿತ್ಸೆಯನ್ನು ಕೇಂದ್ರೀಕರಿಸಿ ನಡೆಯಲಿರುವ ಈ ಕಾರ್ಯಾಗಾರದಲ್ಲಿ ಎಸ್‌ಡಿಎಂ ಫಾರ್ಮಸಿ ಉಡುಪಿ ಈಗಾಗಲೇ ಹಲವಾರು ರಸಾಯನ ಚಿಕಿತ್ಸಾ ಔಷಧಗಳನ್ನು ತಯಾರಿಸುತ್ತಿದ್ದು, ಇದರ ಚಿಕಿತ್ಸೆ ಮತ್ತು ಪ್ರಾತ್ಯಕ್ಷಿಕೆ ಬಗ್ಗೆ ಇವರು ವಿವರ ನೀಡಲಿದ್ದಾರೆ.
ಇದನ್ನೂ ಓದಿ: MUDA Scam; ಬಿಜೆಪಿ ವಿರುದ್ದ ಕಾನೂನು ಮತ್ತು ರಾಜಕೀಯ ಹೋರಾಟಕ್ಕೆ ಸಿದ್ದ: ಸಿಎಂ ಸಿದ್ದರಾಮಯ್ಯ