Advertisement

ಹಕ್ಕುಗಳ ಜತೆಗೆ ಕರ್ತವ್ಯವನ್ನೂ ಪಾಲಿಸಲಿ ಜನಪ್ರತಿನಿಧಿಗಳು

12:02 PM Feb 15, 2017 | |

ಬೆಂಗಳೂರು: ವಿಧಾನಮಂಡಲ ಅಧಿವೇಶನದಲ್ಲಿ ಜನಪ್ರತಿನಿಧಿಗಳು ಹಕ್ಕುಗಳ ಬಗ್ಗೆ ಮಾತನಾಡುತ್ತಾರೆ ಹೊರತು, ಕರ್ತವ್ಯಗಳ ಬಗ್ಗೆ ಯಾರೂ ಮಾತನಾಡುವುದಿಲ್ಲ ವಿಧಾನಪರಿಷತ್‌ ಸಭಾಪತಿ ಡಿ.ಎಚ್‌.ಶಂಕರಮೂರ್ತಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Advertisement

ವಿಶ್ವ ವೀರಶೈವ ಸಂಸ್ಕೃತಿ ಪ್ರತಿಷ್ಠಾನ ಮತ್ತು ಕರ್ನಾಟಕ ಸಾಂಸ್ಕೃತಿಕ ಅಕಾಡೆಮಿ ವತಿಯಿಂದ ಕನ್ನಡಭವನದ ನಯನ ಸಭಾಂಗಣದಲ್ಲಿ ಆಯೋಜಿಸಿದ್ದ ಗುಣವಂತ ಮಂಜುರವರ “ಗಾಂಧಿ ಊರಿನ ಮೋದಿ’ ಕೃತಿ ಬಿಡುಗಡೆ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ  ಮಾತನಾಡಿದ ಅವರು, “ಜನಪ್ರತಿನಿಧಿಗಳು ಹಕ್ಕುಗಳಂತೆಯೇ ಕರ್ತವ್ಯಗಳನ್ನು ನಿರ್ವಹಿಸುವುದು ಅತ್ಯಗತ್ಯ,” ಎಂದು ಹೇಳಿದರು.

“ಸಾರ್ವಜನಿಕ ಕ್ಷೇತ್ರದಲ್ಲಿರುವ ಜನಪ್ರತಿನಿಧಿಗಳ ಮೇಲೆ ಮಹತ್ತರ ಜವಾಬ್ದಾರಿ ಇರುತ್ತದೆ. ಅದನ್ನು ಅರಿತು ನಡೆದುಕೊಳ್ಳಬೇಕು. ದೇಶದ ಜನರ ಹಿತಾಸಕ್ತಿ, ಭದ್ರತೆ ವಿಚಾರವಾಗಿ ಯಾವುದೇ ರಾಜೀ ಮಾಡಿಕೊಳ್ಳಬಾರದು. ಇತರರಿಗೆ ಮಾದರಿಯಾದಂತ ನಡವಳಿಕೆ ಹೊಂದುವುದು ಒಬ್ಬ ಉತ್ತಮ ರಾಜಕಾರಣಿಯ ಸದ್ಗುಣ,” ಎಂದರು. 

ಮಾಜಿ ಕೇಂದ್ರ ಸಚಿವ ಡಾ.ಎಂ.ವಿ.ರಾಜಶೇಖರನ್‌ ಮಾತನಾಡಿ, “”ಜನಸೇವೆಯನ್ನು ಶ್ರೇಷ್ಠ ತ್ಯಾಗದ ಕೆಲಸ ಎಂಬುದನ್ನು ಮರೆತಿರುವ ರಾಜಕಾರಣಿಗಳು ದ್ವೇಷ, ಅಸೂಯೆ, ಆರೋಪ ಪ್ರತ್ಯೋರೋಪ ಮಾಡುವುದರಲ್ಲೇ ಕಾಲ ಕಳೆಯುತ್ತಿದ್ದಾರೆ. ರಾಜಕೀಯ ಮುಖಂಡರ ಈ ದುಸ್ಥಿತಿ ಕಂಡು ಬೇಸರವಾಗಿದೆ,” ಎಂದು ವಿಷಾದ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next