Advertisement

ಬಾರಾಮತಿಗೆ ಡ್ಯಾಂ ನೀರು ತಡೆದ ಮಹಾರಾಷ್ಟ್ರ ಸರಕಾರ, ಶರದ್‌ ಪವರ್‌ ಗೆ ಭಾರೀ ಹಿನ್ನಡೆ

09:52 AM Jun 14, 2019 | Sathish malya |

ಮುಂಬಯಿ : ಎನ್‌ಸಿಪಿ ಅಧ್ಯಕ್ಷ ಶರದ್‌ ಪವಾರ್‌ ಅವರ ಭದ್ರಕೋಟೆ ಎನಿಸಿಕೊಂಡಿರುವ ಬಾರಾಮತಿ ಕ್ಷೇತ್ರಕ್ಕೆ ಅಗತ್ಯಕ್ಕಿಂತಲೂ ಹೆಚ್ಚಿನ, ಅತ್ಯಧಿಕ ಪ್ರಮಾಣದ ನೀರು ಡ್ಯಾಂ ನಿಂದ ಹರಿಸಲಾಗುತ್ತಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ನಡೆಸಿದ ಅಧ್ಯಯನ ವರದಿಯನ್ನು ಅನುಸರಿಸಿ ಮಹಾರಾಷ್ಟ್ರ ಸರಕಾರ ಬಾರಾಮತಿ ಕ್ಷೇತ್ರಕ್ಕೆ ಡ್ಯಾಂ ನಿಂದ ಹೆಚ್ಚುವರಿ ನೀರು ಹರಿಯುವುದನ್ನು ತಡೆಯಲು ನಿರ್ಧರಿಸಿದೆ.

Advertisement

ಮಹಾರಾಷ್ಟ್ರ ಸರಕಾರದ ಈ ನಿರ್ಧಾರ ಶರದ್‌ ಪವಾರ್‌ ಗೆ ಭಾರೀ ದೊಡ್ಡ ಹಿನ್ನಡೆ ಎಂದು ತಿಳಿಯಲಾಗಿದೆ. ಬಾರಾಮತಿ ಕಡೆಗೆ ಹರಿಯುವ ಹೆಚ್ಚುವರಿ ನೀರನ್ನು ಈಗಿನ್ನು ರಾಜ್ಯದ ಕೊರತೆ ಪೀಡಿತ ಪ್ರದೇಶಗಳ ಕಡೆಗೆ ಹಾಯಿಸಲು ಸರಕಾರ ತೀರ್ಮಾನಿಸಿದೆ.

ಬಿಜೆಪಿ ನೇತೃತ್ವದ ರಾಜ್ಯ ಸರಕಾರದ ಈ ನಿರ್ಧಾರವು ರಾಜಕೀಯ ಪ್ರೇರಿತವೆಂದು ವಿಶ್ಲೇಷಿಸಲಾಗಿದೆ. ಎನ್‌ಸಿಪಿ ಮುಖ್ಯಸ್ಥ ಪವಾರ್‌ ಅವರು ಬಾರಾಮತಿ ಕ್ಷೇತ್ರದಿಂದ ಲೋಕಸಭೆಗೆ ಹಲವು ಬಾರಿ ಗೆದ್ದು ಸಂಸತ್‌ ಪ್ರವೇಶಿಸಿದ್ದಾರೆ. ಪ್ರಕೃತ ಈ ಕ್ಷೇತ್ರವನ್ನು ಪವಾರ್‌ ಅವರ ಪುತ್ರಿ ಸುಪ್ರಿಯಾ ಸುಳೆ ಪ್ರತಿನಿಧಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next