Advertisement

ದಕ್ಷಿಣ ಕಾಶ್ಮೀರ: 24 ತಾಸಲ್ಲಿ ಉಗ್ರರಿಂದ ಪೊಲೀಸರ 9 ಬಂಧುಗಳ ಅಪಹರಣ

12:12 PM Aug 31, 2018 | Team Udayavani |

ಕಾಶ್ಮೀರ : ಪೊಲೀಸರ ಮೇಲಿನ ಇನ್ನೊಂದು ದಾಳಿಯಲ್ಲಿ ಉಗ್ರರು ನಿನ್ನೆ ಗುರುವಾರ ರಾತ್ರಿ ಶೋಪಿಯಾನ್‌, ಕುಲಗಾಂವ್‌, ಅನಂತ್‌ನಾಗ್‌ ಮತ್ತು ಆವಂತಿಪುರದಲ್ಲಿ ಜಮ್ಮು ಕಾಶ್ಮೀರ ಪೊಲೀಸರು ಮತ್ತು ಸೇನಾ ಸಿಬಂದಿಗಳ ಕುಟುಂಬದ 9 ಮಂದಿಯನ್ನು ಅಪಹರಿಸಿದ್ದಾರೆ.

Advertisement

ಅಪಹೃತರಾಗಿರುವವರಲ್ಲಿ ಡಿವೈಎಸ್ಪಿ ಒಬ್ಬರ ಸಹೋದರನೂ ಸೇರಿದ್ದಾರೆ. 

ಉಗ್ರರಿಂದ ನಡೆದಿರುವ ಈ ಅಪಹರಣದ ಬಗ್ಗೆ ಪೊಲೀಸರು ತತ್‌ಕ್ಷಣಕ್ಕೆ  ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಅಪಹರಣದ ವರದಿಗಳನ್ನು ತಾವು ಖಚಿತಪಡಿಸಿಕೊಳ್ಳುತ್ತಿದ್ದೇವೆ ಎಂದಷ್ಟೇ ಹೇಳಿದ್ದಾರೆ. 

ಉಗ್ರರಿಂದ ನಡೆದಿರುವ ಈ ಅಪಹರಣಕ್ಕೆ ಸಾಕ್ಷಿಯಾಗಿರುವ ಅಧಿಕಾರಿಯೊಬ್ಬರು ಘಟನೆಯ ಮಾಹಿತಿಯನ್ನು ನೀಡಿದ್ದಾರೆ.  

Advertisement

Udayavani is now on Telegram. Click here to join our channel and stay updated with the latest news.

Next