Advertisement

2022ರಲ್ಲಿ ದೇಶದಲ್ಲಿ ಕ್ಯಾನ್ಸರ್‌ನಿಂದ 9.1 ಲಕ್ಷ ಮಂದಿ ಸಾವು- ವಿಶ್ವ ಆರೋಗ್ಯ ಸಂಸ್ಥೆ ವರದಿ

09:03 PM Feb 02, 2024 | Team Udayavani |

ನವದೆಹಲಿ: ಭಾರತದಲ್ಲಿ 2022ರಲ್ಲಿ ಹೊಸದಾಗಿ 14.1 ಲಕ್ಷಕ್ಕೂ ಅಧಿಕ ಕ್ಯಾನರ್‌ ಪ್ರಕರಣಗಳು ಪತ್ತೆಯಾಗಿವೆ. ಕ್ಯಾನ್ಸರ್‌ನಿಂದ 9.1 ಲಕ್ಷಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ವರದಿ ತಿಳಿಸಿದೆ. ಪುರುಷರಲ್ಲಿ ತುಟಿ, ಗಂಟಲು ಮತ್ತು ಶ್ವಾಸಕೋಶದ ಕ್ಯಾನರ್‌ ಪ್ರಕರಣಗಳು ಅಧಿಕ. ತುಟಿ, ಗಂಟಲು ಕ್ಯಾನ್ಸರ್‌ ಪ್ರಮಾಣ ಶೇ.15.6ರಷ್ಟಿದ್ದು, ಶಾಸಕೋಶದ ಕ್ಯಾನ್ಸರ್‌ನ ಶೇ.8.5ರಷ್ಟು ಪ್ರಕರಣಗಳು ದಾಖಲಾಗಿವೆ.

Advertisement

ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್‌ ಮತ್ತು ಗರ್ಭ ಕಂಠದ ಕ್ಯಾನ್ಸರ್‌ ಪ್ರಕರಣಗಳು ಅಧಿಕ. ಹೊಸ ಪ್ರಕರಣಗಳ ಪೈಕಿ ಸ್ತನ ಕ್ಯಾನ್ಸರ್‌ ಶೇ.27ರಷ್ಟಿದ್ದು, ಗರ್ಭ ಕಂಠದ ಕ್ಯಾನ್ಸರ್‌ನ ಶೇ.18ರಷ್ಟು ಪ್ರಕರಣಗಳು ದಾಖಲಾಗಿವೆ ಎಂದು WHO ಅಂಗಸಂಸ್ಥೆಯಾಗಿರುವ ಕ್ಯಾನ್ಸರ್‌ ಸಂಶೋಧನೆ ಕುರಿತ ಅಂತಾರಾಷ್ಟ್ರೀಯ ಸಂಸ್ಥೆ(ಐಸಿಎಆರ್‌) ಮಾಹಿತಿ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next