Advertisement

ಇಮ್ರಾನ್‌ ಖಾನ್‌ ಹೊಸ ಹಾದಿ; 65ರಲ್ಲಿ ಮೂರನೇ ಶಾದಿ!

11:53 AM Feb 19, 2018 | |

ಇಸ್ಲಮಾಬಾದ್‌:ಪಾಕಿಸ್ಥಾನದ ಮಾಜಿ ಕ್ರಿಕೆಟಿಗ, ತೆಹರಿಕ್‌-ಇ-ಇನ್‌ಸಾನ್‌ ಪಕ್ಷದ ಅಧ್ಯಕ್ಷ ಇಮ್ರಾನ್‌ ಖಾನ್‌ ತನ್ನ 65 ನೇ ಹರೆಯದಲ್ಲಿ 3 ನೇ ನಿಖಾ ಮಾಡಿಕೊಂಡು ಸುದ್ದಿಯಾಗಿದ್ದಾರೆ. 

Advertisement

ತನ್ನ ಧಾರ್ಮಿಕ ಸಲಹೆಗಾರ್ತಿಯಾಗಿದ್ದ  40ರ ಹರೆಯದ 5 ಮಕ್ಕಳ ತಾಯಿಯಾಗಿರುವ ಬುಶ್ರಾ ಮನೇಕಾ ಎನ್ನುವರೊಂದಿಗೆ ಲಾಹೋರ್‌ನಲ್ಲಿ ಹೊಸ ಬಾಳಿಗೆ ಕಾಲಿರಿಸಿದ್ದಾರೆ.

ಬಶ್ರಾ ಸಹೋದರನ ಮನೆಯಲ್ಲಿ  ನಡೆದ ಸರಳ ಸಮಾರಂಭದಲ್ಲಿ ನಿಖಾ ನಡೆದಿದ್ದು, ಬೆರಳೆಣಿಕೆಯ ಆಪ್ತರು ಮತ್ತು ಸಂಬಂಧಿಕರು ಮಾತ್ರ ಹಾಜರಿದ್ದರು ಎಂದು ತಿಳಿದು ಬಂದಿದೆ.

ಇಮ್ರಾನ್‌ ಖಾನ್‌ಗೆ ಈ ವಯಸ್ಸಿನಲ್ಲಿ ಇನ್ನೊಂದು ಮದುವೆಯಾದರೆ ಅದೃಷ್ಟ ಖುಲಾಯಿಸುತ್ತದೆ. ಪಾಕ್‌ ಪ್ರಧಾನಿಯಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗಿದ್ದು, ಅದಕ್ಕಾಗಿಯೇ ಮತ್ತೊಂದು ಮದುವೆಯಾಗಿದ್ದಾರೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next