Advertisement

ಮೋದಿ ಮೆಚ್ಚಿದ ವಿಶ್ವಬ್ಯಾಂಕ್‌

03:45 AM Jan 13, 2017 | Harsha Rao |

ನ್ಯೂಯಾರ್ಕ್‌: ಅಪನಗದೀಕರಣ ಕ್ರಮವನ್ನು ದುರಂತ ಎಂದು ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಜರಿದ ಮರುದಿನವೇ, ಅಪನಗದೀಕರಣ ಕ್ರಮವನ್ನು ವಿಶ್ವಬ್ಯಾಂಕ್‌ ಹೊಗಳಿದೆ. ಈ ಮೂಲಕ ಮನಮೋಹನ ಸಿಂಗ್‌ ಮುಖಭಂಗ ಅನುಭವಿಸಿದ್ದರೆ, ಪ್ರಧಾನಿ ನರೇಂದ್ರ ಮೋದಿ ಕುರಿತು ಮಾರುಕಟ್ಟೆಯಲ್ಲಿ ವಿಶ್ವಾಸ ವೃದ್ಧಿಯಾಗಿದೆ.

Advertisement

ಅಪನಗದೀಕರಣದಿಂದ ಉಂಟಾಗಿರುವ ಯಾವುದೇ ಅಡ್ಡ ಪರಿಣಾಮಗಳು ಶೀಘ್ರ ಕಣ್ಮರೆಯಾಗಲಿವೆ. ಭಾರತದ ಆರ್ಥಿಕ ಅಭಿವೃದ್ಧಿ ದರ ಇನ್ನೂ ಸದೃಢವಾಗಿಯೇ ಇದೆ. 2017ರ ಆರ್ಥಿಕ ವರ್ಷದಲ್ಲಿ ಶೇ.7ಕ್ಕೆ ತಲುಪಲಿದ್ದು, 2018ರ ಆರ್ಥಿಕ ವರ್ಷದಲ್ಲಿ ಶೇ.7.6 ಹಾಗೂ 2019ಕ್ಕೆ ಶೇ.7.8ಕ್ಕೆ ಏರಲಿದೆ ಎಂದು ವಿಶ್ವಬ್ಯಾಂಕ್‌ ಹೇಳಿದೆ.

ಅಪನಗದೀಕರಣದಿಂದ ಉದ್ಯಮ ಮತ್ತು ಗೃಹಸಂಬಂಧಿ ಆರ್ಥಿಕ ಚಟುವಟಿಕೆಗಳಿಗೆ ಹಿನ್ನಡೆಯಾಗಲಿದೆ. ಆದರೆ, ಜಿಎಸ್‌ಟಿ, ಕಾರ್ಮಿಕ ಮತ್ತು ಭೂ ಸುಧಾರಣೆಗಳಂತಹ ಆರ್ಥಿಕ ಸುಧಾರಣೆಗಳು ಆರ್ಥಿಕತೆಗೆ ಚೇತರಿಕೆ ನೀಡಲಿವೆ. ಅಲ್ಲದೆ, ತಳಮಟ್ಟದ ದೇಶೀಯ ಪೂರೈಕೆಗಳಿಗೆ ಹಾಗೂ ಉತ್ಪಾದನೆ ಹೆಚ್ಚಳಕ್ಕೆ ಉಂಟಾಗಿದ್ದ ಅಡ್ಡಿಗಳು ನಿವಾರಣೆಯಾಗಲಿವೆ ಎಂದು ಅಭಿಪ್ರಾಯಪಟ್ಟಿದೆ.

ಮೂಲಭೂತ ವೆಚ್ಚಗಳಿಂದ ಉದ್ಯಮ ವಾತಾವರಣ ಹೆಚ್ಚಲಿದ್ದು, ಬಂಡವಾಳಗಳನ್ನು ಆಕರ್ಷಿಸಲಿದೆ. ಮೇಕ್‌ ಇನ್‌ ಇಂಡಿಯಾ ಯೋಜನೆಯು ಉತ್ಪಾದನೆ ಕ್ಷೇತ್ರಕ್ಕೆ ಪ್ರೇರಣೆ ಸಿಗಲಿದೆ. ಇದಕ್ಕೆ ದೇಶೀಯ ಬೇಡಿಕೆಗಳು ಇನ್ನಿತರ ನಿಯಂತ್ರಕ ಸುಧಾರಣೆಗಳು ಬೆಂಬಲ ಒದಗಿಸಲಿವೆ. ಮಧ್ಯಮ ಹಣದುಬ್ಬರ ಮತ್ತು 7ನೇ ವೇತನ ಆಯೋಗದ ಶಿಫಾರಸಿನಂತೆ ವೇತನ ಹೆಚ್ಚಳವು ನೈಜ ಆದಾಯ ವೃದ್ಧಿ ಹಾಗೂ ಉಪಭೋಗಕ್ಕೆ ಬೆಂಬಲ ನೀಡಲಿದೆ ಎಂದು ವಿಶ್ವಬ್ಯಾಂಕ್‌ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next