Advertisement

BJP ವಿಜಯೇಂದ್ರ ಪರ ಬಣದ ಮಹತ್ವದ ಸಭೆ ; ಯಾರ‍್ಯಾರು ಭಾಗಿ ..?

01:02 PM Dec 15, 2024 | Team Udayavani |

ದಾವಣಗೆರೆ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಪರ ಬಣದ‌ ಶಾಸಕರು, ಮಾಜಿ ಸಚಿವರು, ಮಾಜಿ ಶಾಸಕರ ಸಭೆ ದಾವಣಗೆರೆಯ ಹೊರ ವಲಯದ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಡಿ. 15ರ ರವಿವಾರ ಪ್ರಾರಂಭವಾಯಿತು.

Advertisement

ಹಳೆ ಪಿ.ಬಿ. ರಸ್ತೆಯ ಸಾಯಿ ಇಂಟರ್ ನ್ಯಾಷನಲ್ ಹೋಟೆಲ್ ಸಭಾಂಗಣದಲ್ಲಿ ಮಾಜಿ ಸಚಿವರಾದ ಎಂ‌.ಪಿ. ರೇಣುಕಾಚಾರ್ಯ, ಎಸ್.ಎ. ರವೀಂದ್ರನಾಥ್, ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಹರತಾಳ್ ಹಾಲಪ್ಪ ಇತರ ಮುಖಂಡರ ನೇತೃತ್ವದಲ್ಲಿ ಸಭೆ ಆಯೋಜಿಸಲಾಗಿದೆ.

ಸಭೆಗೂ ಮುನ್ನ ಎಲ್ಲಾ ಮುಖಂಡರು ದಾವಣಗೆರೆ ನಗರದ ದೇವತೆ ಶ್ರೀ ದುರ್ಗಾಂಬಿಕಾ ದೇವಿ ದೇವಸ್ಥಾನ ಹಾಗೂ ಬಾತಿ ಶ್ರೀ ರೇವಣಸಿದ್ದೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ಎಸ್.ವಿ. ರಾಮಚಂದ್ರಪ್ಪ, ವೈ.‌ ಸಂಪಂಗಿ, ಬ್ಯಾಡಗಿ ವಿರುಪಾಕ್ಷಪ್ಪ, ಅರುಣ್ ಕುಮಾರ್, ಕೊಳ್ಳೆಗಾಲ ಮಹೇಶ್, ಗಂಗಾಧರ ನಾಯ್ಕ್, ಕುಮಾರಸ್ವಾಮಿ, ಸೀಮಾ ಮಸೂತಿ, ಎಂ. ಬಸವರಾಜ್ ನಾಯ್ಕ್, ಎಸ್. ತಿಪ್ಪೇಸ್ವಾಮಿ, ಕಡೂರು ಬೆಳ್ಳಿ ಪ್ರಕಾಶ್, ರಾಜಶೇಖರ ಶೀಲವಂತ್, ಮಸ್ಕಿ ಪ್ರತಾಪ್ ಗೌಡ್ರು, ಮೈಸೂರು ನಾಗೇಂದ್ರ, ಗುಂಡ್ಲುಪೇಟೆ ನಿರಂಜನ್, ಜಗದೀಶ್ ಮೇಟಿಗುಡ್ಡ, ಸುರೇಶ್ ಮಾರಿಹಾಳ್, ಹರತಾಳ್ ಹಾಲಪ್ಪ, ಅಶೋಕ್ ಕಾಟ್ವೇ, ಪ್ರತಾಪ್ ಗೌಡ ಪಾಟೀಲ್, ಹರತಾಳ್ ಹಾಲಪ್ಪ, ಸೋಮಶೇಖರ ರೆಡ್ಡಿ, ದೇವನಹಳ್ಳಿ ಚಂದ್ರಪ್ಪ, ಪಿಳ್ಳಮುನಿ ಶ್ಯಾಮಪ್ಪ, ಶಿಡ್ಲಘಟ್ಟ ರಾಜಣ್ಣ, ಗುಂಡಪ್ಪ ವಕೀಲ್, ಶಿವರಾಜ್ ಸಜ್ಜನ್, ಹರ್ಷವರ್ಧನ್, ಚಾಮರಾಜನಗರ ಬಾಲರಾಜ್, ಬಳ್ಳಾರಿ ವಿರುಪಾಕ್ಷಪ್ಪ, ಶಿವರಾಜ್ ಸಜ್ಜನ್ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next