Advertisement
ತಮ್ಮ ವಿರುದ್ಧ ವೀಡಿಯೋ ಬಿಡುಗಡೆ ಬಾಂಬ್ ಸಿಡಿಸಿದ ಯತ್ನಾಳ್ ಮಾತಿಗೆ ರವಿವಾರ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ವಿಜಯೇಂದ್ರ, ಹೊಂದಾಣಿಕೆ ರಾಜಕಾರಣದ ಆವಶ್ಯಕತೆ ನನಗಿಲ್ಲ. ಅದೇನು ದಾಖಲೆ ಇದೆಯೋ ಬಿಡುಗಡೆ ಮಾಡಲಿ ಎಂದರು.
ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಗುಂಪಿನ ನಾಯಕರು ರವಿವಾರ ಸಭೆ ನಡೆಸಿದ್ದು, ಯತ್ನಾಳ್ ತಂಡದ ವಿರುದ್ಧ ವರಿಷ್ಠರು ಯಾವ ನಿರ್ಣಯ ಕೈಗೊಳ್ಳಲಿದ್ದಾರೆ ಎಂಬ ಕುರಿತು ಡಿ. 9ರ ವರೆಗೆ ಕಾದು ನೋಡಲು ನಿರ್ಧರಿಸಿ ದ್ದಾರೆ. ಬಳಿಕ ಡಿ. 10ರಂದು ದಾವಣಗೆರೆಯಲ್ಲಿ ಮತ್ತೂಂದು ಸಭೆ ನಡೆಸಲು ಸಜ್ಜಾಗಿದ್ದಾರೆ.