Advertisement
ಪಟ್ಟಣದ ಪ್ರವಾಸಿಮಂದಿರದಲ್ಲಿ ದೇವನಹಳ್ಳಿ ತಾಲೂಕು ಸರ್ಕಾರಿ ಪಡಿತರ ವಿತರ ಕರ ನೂತನ ಸಂಘವನ್ನು ಉದ್ಘಾಟಿಸಿ ಮಾತನಾಡಿದ ಅವರು ಕೋವಿಡ್ ಸಮಯದಲ್ಲಿ ಪ್ರಾಣದ ಹಂಗನ್ನು ತೊರೆದು ಇಡೀ ರಾಜ್ಯದಲ್ಲಿ 4 ಕೋಟಿ ಜನರಿಗೆ ಪಡಿತರ ವಿತರಣೆ ಮಾಡಿದ್ದಾರೆ.
Related Articles
Advertisement
ಬಾಕಿ ಕಮಿಷನ್ ತುರ್ತು ನೀಡಿ: ರಾಜ್ಯದ ಪಡಿತರ ವಿತರಕರ ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ಬಾಕಿ ಉಳಿದಿರುವ ಕಮಿಷನ್ ಹಣವನ್ನು 15 ದಿನಗಳೊಳಗಾಗಿ ಪಡಿತರ ವಿತರಕರ ಖಾತೆಗೆ ಜಮಾ ಮಾಡುವಂತೆ ಸರಕಾರದ ಮೇಲೆ ಒತ್ತಡ ಹೇರಲಾಗಿದೆ. ಅತೀ ಶೀಘ್ರದಲ್ಲೇ ಕಮಿಷನ್ ಹಣ ಪಾವತಿಯಾಗಲಿದೆ. ಪಡಿತರ ವಿತರಕರು ಸರ್ಕಾರದ ಕೊಂಡಿಯಂತೆ ಕೆಲಸ ನಿರ್ವಹಿಸುತಿದ್ದಾರೆ. ರಾಜ್ಯದಲ್ಲಿ ಮಾದರಿಯಾಗಿ ಪಡಿತರ ವಿತರಣೆ ಮಾಡುತ್ತಿದ್ದೇವೆ. ಕೊರೊನಾ ವೇಳೆ 4 ಕೋಟಿ 30 ಲಕ್ಷ ಜನರಿಗೆ ಪಡಿತರ ವಿತರಕರು ತಮ್ಮ ಜೀವದ ಹಂಗನ್ನು ತೊರೆದು ಪಡಿತರ ವಿತರಣೆ ಮಾಡಿದ್ದೇವೆ. ಪ್ರತಿಯೊಬ್ಬರು ಸಂಘಕ್ಕೆ ಬೆಂಬಲವಾಗಿ ನಿಲ್ಲಬೇಕು. ದೇವನಹಳ್ಳಿಯಲ್ಲಿ ಪ್ರಥಮ ವಾಗಿ ನೂತನ ಸಂಘ ಸ್ಥಾಪಿಸಿ ಉತ್ತಮ ಕೆಲಸ ಮಾಡಿದ್ದಾರೆ. ಇದರಿಂದ ಪ್ರತಿಯೊಬ್ಬರ ಸಮಸ್ಯೆ ಚರ್ಚಿಸಿ ಸಮಸ್ಯೆಗಳನ್ನು ಇತ್ಯರ್ಥಪಡಿಸಿ ಕೊಳ್ಳಬಹುದಾಗಿದೆ ಎಂದರು.
ಪಡಿತರ ವಿತರಕರ ಸಂಘ ಸ್ಥಾಪನೆ: ತಾಲೂಕು ಸೊಸೈಟಿ ಅಧ್ಯಕ್ಷ ಎ.ದೇವರಾಜ್ ಮಾತನಾಡಿ ತಾಲೂಕಿನಲ್ಲಿ ಪಡಿತರ ವಿತರಕರ ಸಂಘ ಸ್ಥಾಪನೆಯಾಗಿದೆ. ಪ್ರತಿ ಪಡಿತರು ತಮ್ಮ ನ್ಯಾಯಬೆಲೆ ಅಂಗಡಿಗಳಲ್ಲಿ ಗ್ರಾಹಕರಿಗೆ ಪಡಿತರ ಸಾಮಗ್ರಿಗಳನ್ನು ನೀಡುತ್ತಿದ್ದಾರೆ. ಈ ಮೊದಲೇ ಸಂಘ ಪ್ರಾರಂಭವಾಗಬೇಕಾಗಿತ್ತು ಎಂದು ಹೇಳಿದರು.
ದೇವನಹಳ್ಳಿ ತಾಲೂಕು ಸರ್ಕಾರಿ ಪಡಿತರ ವಿತರಕರ ಸಂಘದ ಪದಾದಿಕಾರಿಗಳು: ಅಧ್ಯಕ್ಷ ಸಿ.ರಾಜಣ್ಣ, ಉಪಾಧ್ಯಕ್ಷ ಗೋಪಾಲಕೃಷ್ಣ, ಪ್ರಧಾನ ಕಾರ್ಯದರ್ಶಿ ಎನ್. ವೆಂಕಟೇಶ್, ಸಂಘಟನಾ ಕಾರ್ಯದರ್ಶಿ ಅನಂತಕುಮಾರ್, ಎಂ.ಕೆ. ಖಜಾಂಚಿ ಶ್ರೀ ರಾಮ, ಸದಸ್ಯರಾದ ನಾರಾಯಣ ಸ್ವಾಮಿ, ಭರತ್.ಬಿ.ಆರ್, ವೆಂಕಟೇಶ್.ಪಿ, ವಿ.ನಾಗಮ್ಮ ನೇಮಕವಾಗಿ ದ್ದಾರೆ. ಇದೆ ವೇಳೆ ಆಹಾರ ಮತ್ತು ನಾಗರೀಕ ಸರಬರಾಜು ಮತು ಗ್ರಾಹಕ ವ್ಯವಹಾರಗಳ ಇಲಾಖೆ ಜಂಟಿ ಉಪನಿರ್ದೇಶಕಿ ಗಿರಿಜಾದೇವಿ, ಆಹಾರ ಶಿರಸ್ತೇದಾರ್ ಶ್ರೀಧರ್, ಪುರಸಭೆ ಅಧ್ಯಕ್ಷೆ ಗೋಪಮ್ಮ, ಉಪಾಧ್ಯಕ್ಷೆ ಗೀತಾ ಶ್ರೀಧರ್ ಮೂರ್ತಿ, ಜಿಲ್ಲಾ ಸಹಕಾರಿ ಒಕ್ಕೂಟದ ಅಧ್ಯಕ್ಷ ಎ.ಸಿ.ನಾಗರಾಜ್, ಪುರಸಭಾ ಸದಸ್ಯ ಜಿ.ಎ.ರವೀಂದ್ರ ತಾಲೂಕಿನ ಎಲ್ಲ ಪಡಿತರ ವಿತರಕರು ಹಾಗೂ ಸಹಾಯಕರು ಇದ್ದರು.