Advertisement

IMDb 2023 ರ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಕನ್ನಡದ ಏಕೈಕ ಚಿತ್ರ

06:20 PM Jan 09, 2023 | Team Udayavani |

ಮುಂಬಯಿ: ಐಎಂಡಿಬಿ 2023 ರ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಕನ್ನಡದ ಏಕೈಕ ಚಿತ್ರ ಸ್ಥಾನ ಪಡೆದಿದೆ.11 ಹಿಂದಿ ಚಲನಚಿತ್ರಗಳು ಪಟ್ಟಿಯಲ್ಲಿ ಪ್ರಾಬಲ್ಯ ಹೊಂದಿದ್ದು, ಐದು ತಮಿಳು , ಮೂರು ತೆಲುಗು ಮತ್ತು ಕನ್ನಡದ ಬಹು ನಿರೀಕ್ಷಿತ ಚಿತ್ರ ”ಕಬ್ಜಾ” ಚಿತ್ರ ಮಾತ್ರ ಸ್ಥಾನ ಪಡೆದಿದೆ.

Advertisement

”ಕಬ್ಜಾ” ಆರ್.ಚಂದ್ರು ನಿರ್ದೇಶನದ ಚಿತ್ರದಲ್ಲಿ ರಿಯಲ್ ಸ್ಟಾರ್ ಉಪೇಂದ್ರ, ಕಿಚ್ಚ ಸುದೀಪ್ , ಶ್ರಿಯಾ ಸರನ್ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.ಈ ಚಲನಚಿತ್ರವು  1980 ರ ದಶಕದ ದರೋಡೆಕೋರನ ಜೀವನದ ಒಂದು ಒಳ ನೋಟ ಹೊಂದಿದೆ ಎಂದು ವರದಿಯಾಗಿದೆ.

ಈಗಾಗಲೇ ವಿವಾದಕ್ಕೆ ಸಿಲುಕಿ ಭಾರಿ ಸುದ್ದಿಯಾಗಿರುವ ಸೂಪರ್‌ಸ್ಟಾರ್ ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಅವರ ‘ಪಠಾಣ್’ ಕೂಡ 2023 ರ ಬಹು ನಿರೀಕ್ಷಿತ ಚಲನಚಿತ್ರವಾಗಿದೆ. ಇದರೊಂದಿಗೆ ಶಾರುಖ್ ಅವರದ್ದೇ ಜವಾನ್ ಮತ್ತು ರಾಜ್‌ಕುಮಾರ್ ಹಿರಾನಿ ನಿರ್ದೇಶನದ ಡುಂಕಿ ಸೇರಿದಂತೆ ಇತರ ಚಿತ್ರಗಳು ಸಹ IMDb ಹಂಚಿಕೊಂಡ 2023 ರ ಅತ್ಯಂತ ನಿರೀಕ್ಷಿತ ಚಲನಚಿತ್ರಗಳಲ್ಲಿ ಸೇರಿವೆ.

IMDb 2022 ರ ಉದ್ದಕ್ಕೂ ಬಳಕೆದಾರರ ನಿಜವಾದ ಪುಟ ವೀಕ್ಷಣೆಗಳ ಆಧಾರದ ಮೇಲೆ ಹೆಚ್ಚು ನಿರೀಕ್ಷಿತ ಭಾರತೀಯ ಚಲನಚಿತ್ರಗಳ ಪಟ್ಟಿಯನ್ನು ನಿರ್ಧರಿಸುತ್ತದೆ.

ಬಹು ನಿರೀಕ್ಷಿತ ಚಿತ್ರಗಳ ಹೆಸರು ಹೀಗಿವೆ
ಪಠಾಣ್
ಪುಷ್ಪಾ: ಪಾರ್ಟ್ 2
ಜವಾನ್
ಆದಿ ಪುರುಷ್
ಸಲಾರ್
ವರಿಸು
ಕಬ್ಜಾ
ದಳಪತಿ 67
ದಿ ಆರ್ಚೀಸ್
ಡಂಕಿ
ಟೈಗರ್ 3
ಕಿಸಿ ಕಾ ಭಾಯಿ ಕಿಸಿ ಕಿ ಜಾನ್
ತುನಿವು
ಅನಿಮಲ್
ಏಜೆಂಟ್
ಇಂಡಿಯನ್ 2
ವಾಡಿವಾಸಲ್
ಶೆಹಜಾದಾ
ಬಡೇ ಮಿಯಾ ಚೋಟೆ ಮಿಯಾ
ಭೋಲಾ

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next