Advertisement
ರೈತರು ತಮ್ಮ ಆರ್ಥಿಕ ಸ್ಥಿರತೆ, ವಾಣಿಜ್ಯೋದ್ಯಮಕ್ಕೆಂದು ಮಾತ್ರ ವ್ಯವಸಾಯವನ್ನು ಮಾಡುವುದಿಲ್ಲ. ದೇಶ, ಸಮಾಜದ ಜನರ ಒಳಿತಿಗೆಂದು ಹಗಲಿರುಳು ಎನ್ನದೇ ಕಷ್ಟಪಟ್ಟು ಕೆಲಸ ಮಾಡುವ ಒಂದು ಜೀವವೆಂದರೆ ಅದು ರೈತ. ಕೇವಲ ಮನುಷ್ಯ ಕುಲವನ್ನು ಸಲಹದೆ ಪ್ರಾಣಿ ಪಕ್ಷಿಗಳ ಜೀವನಕ್ಕೂ ಆಧಾರವಾಗಿದ್ದಾನೆ.
Related Articles
Advertisement
ಕಳೆದ ವರ್ಷ ಸರಿಯಾದ ಮಳೆ ಇಲ್ಲದೆ ಬೆಳೆಯು ಬಂದಿಲ್ಲ, ಕುಡಿಯಲು ನೀರು ಸಹ ಸಿಗುತ್ತಿಲ್ಲ. ಅದೆಷ್ಟೋ ಕಡೆಗಳಲ್ಲಿ ಕುಡಿಯುವ ನೀರಿನ ಅಭಾವ ಈಗಾಗಲೇ ಆರಂಭವಾಗಿದೆ. ಹಲವಾರು ಗ್ರಾಮಗಳು ಇದರಿಂದ ನಿತ್ಯ ಬಳಲುತ್ತಿವೆ. ವರ್ಷವಿಡೀ ಅನ್ನವನ್ನು ನೀಡಿದ ಅನ್ನದಾತನಿಗೆ ಕುಡಿಯುವ ನೀರಿನ ಸರಿಯಾದ ವ್ಯವಸ್ಥೆಯನ್ನು ಮಾಡದೆ ಹೋದರೆ ಅವರು ಕೊಟ್ಟ ಅನ್ನಕ್ಕೆ ನಾವು ದ್ರೋಹ ಬಗೆದಂತೆ.
ರೈತರು ತಮ್ಮ ಬೆಳೆಗೆ ಎಂದು ಬೆಲೆ ಸಿಗಲಿಲ್ಲವೆಂದು ಕೃಷಿ ನಿಲ್ಲಿಸಲಿಲ್ಲ., ನಮ್ಮನ್ನು ಉಪವಾಸ ಇರಿಸಲಿಲ್ಲ. ಹೀಗಿರುವಾಗ ಹನಿ ನೀರಿಗೂ ಅವರ ಕಣ್ಣಲ್ಲಿ ನೀರು ಹಾಕಿಸುವುದು ಸರಿಯೇ?. ಇಷ್ಟು ದಿನಗಳು ಆಗಿರುವ ತಪ್ಪುಗಳನ್ನು ಇನ್ನಾದರೂ ಸರಿ ಮಾಡಿಕೊಳ್ಳೋಣ. ಮಿತವಾಗಿ ಎಲ್ಲರೂ ನೀರನ್ನು ಬಳಸಿ ಜಲ ಸಂರಕ್ಷಣೆಯಲ್ಲಿ ಬಾಗಿಯಾಗೋಣ. ರೈತರ ಈ ಸಮಸ್ಯೆಗೆ ಶೀಘ್ರದಲ್ಲಿ ಪರಿಹಾರ ಒದಗಿಸುವಂತೆ ಸರಕಾರಕ್ಕೆ ಮನವಿ ಮಾಡುವ ಮೂಲಕ ಅನ್ನದಾತನು ನೀಡಿದ ಅನ್ನದ ಋಣಕ್ಕೆ ಗೌರವಿಸೋಣ.
ಪೂಜಾ ಹಂದ್ರಾಳ,
ಶಿರಸಿ