ಇಲ್ಲಿ ಜಾತಿ ಸಂಘರ್ಷ ಇಲ್ಲ. ಧರ್ಮಗಳಿಗೆ ಧಕ್ಕೆ ಆಗೋ ಅಂಶಗಳೂ ಇಲ್ಲ. ರೇಷ್ಮಾ ಎಂಬ ಮುಸ್ಲಿಂ ಪಾತ್ರ ಇದ್ದಾಕ್ಷಣ, ನೂರೆಂಟು ಅರ್ಥಗಳು ಬರುತ್ತವೆ. “ಟೆರರಿಸ್ಟ್’ಗೂ ರೇಷ್ಮಾ ಎಂಬ ಮುಸ್ಲಿಂ ಹುಡುಗಿಗೂ ಏನು ಸಂಬಂಧ ಎಂಬುದೇ ತಿರುಳು.
ರಾಗಿಣಿ ಅಂದರೆ ಪಕ್ಕಾ ಗ್ಲಾಮರ್ ಹುಡುಗಿ. ಅಷ್ಟೇ ಮಾಸ್ ಲುಕ್ ಇರುವ ನಟಿ ಎಂಬೆಲ್ಲಾ ಮಾತುಗಳಿವೆ. ಆದರೆ, ಅವರು ಇದ್ದಕ್ಕಿದ್ದಂತೆ “ಟೆರರಿಸ್ಟ್’ ಆಗಿದ್ದೇಕೆ? ಈ ಪ್ರಶ್ನೆಗೆ ಉತ್ತರಿಸುವ ರಾಗಿಣಿ, “ಮೊದಲು ಈ ಚಿತ್ರ ಒಪ್ಪೋಕೆ ಕಾರಣ, ಕಥೆ ಮತ್ತು ಪಾತ್ರ. ಯಾವುದೇ ಒಬ್ಬ ನಟ ಅಥವಾ ನಟಿಗೆ ಹೊಸಬಗೆಯ ಪಾತ್ರ ಮಾಡಬೇಕೆಂಬ ಆಸೆ ಇದ್ದೇ ಇರುತ್ತೆ. ಅಂತಹ ಹೊಸ ಪಾತ್ರ ಸಿಕ್ಕಿದ್ದರಿಂದ ಒಪ್ಪಿದ್ದೇನೆ. ನನ್ನ ಕೆರಿಯರ್‌ನಲ್ಲಿ ಇದುವರೆಗೆ ಎಲ್ಲಾ ತರಹದ ಪಾತ್ರ ಮಾಡಿದ್ದೇನೆ. ಪ್ರಯೋಗಾತ್ಮಕ ಚಿತ್ರದಲ್ಲಿ ನಟಿಸಬೇಕೆಂಬ ಆಸೆ ಇತ್ತು. ಅದೀಗ “ಟೆರರಿಸ್ಟ್’ ಮೂಲಕ ಈಡೇರಿದೆ. ಇದೇ ಮೊದಲ ಸಲ ನಾನು ರೇಷ್ಮಾ ಎಂಬ ಮುಸ್ಲಿಂ ಹುಡುಗಿಯ ಪಾತ್ರ ಮಾಡಿದ್ದೇನೆ. ಈ ಚಿತ್ರದ ವಿಶೇಷವೆಂದರೆ, ಇಲ್ಲಿ ಹೆಚ್ಚು ಮಾತುಗಳೇ ಇಲ್ಲ. ನಿರ್ದೇಶಕ ಪಿ.ಸಿ.ಶೇಖರ್ ಹೊಸತನದ ಕಥೆಗೊಂದು ಭಾವನಾತ್ಮಕ ಸ್ಪರ್ಶ ಕೊಟ್ಟಿದ್ದಾರೆ. ನನಗೆ ಸಿಕ್ಕ ಹೊಸ ಜಾನರ್‌ನ ಚಿತ್ರವಿದು. ಇಲ್ಲಿ ಭಯ, ಖುಷಿ, ಎಮೋಷನ್ಸ್ ಮತ್ತು ಭಾವನೆಗಳೇ ಮಾತಾಡುತ್ತವೆ. ಇಂತಹ ಚಿತ್ರದಲ್ಲಿ ಸಾಕಷ್ಟು ಸವಾಲುಗಳು ಎದುರಾಗುತ್ತವೆ. ಮೊದಲನೆಯದು, ಪಾತ್ರಕ್ಕೆ ನ್ಯಾಯ ಸಲ್ಲಿಸೋದು, ಎರಡನೆಯದು ಎಲ್ಲವನ್ನೂ ಭಾವನೆಗಳ ಮೂಲಕವೇ ಹೇಳುವುದು.
ಮೂರನೆಯದು ಯಾವುದೇ ಧರ್ಮ, ಜಾತಿಗೆ ಧಕ್ಕೆಯಾಗದಂತೆ ನೋಡಿಕೊಳ್ಳೋದು. “ಟೆರರಿಸ್ಟ್’ ಅಂದರೆ ವ್ಯಕ್ತಿ ಚಿತ್ರಣ ಬರುತ್ತೆ. ಇಲ್ಲಿ “ಟೆರರಿಸ್ಟ್’ ಯಾರೆಂಬುದೇ ಇಂಟ್ರೆಸ್ಟ್. “ಟೆರರಿಸ್ಟ್’ ಅಂದಾಕ್ಷಣ, ಯಾವುದಾದರೊಂದು ಧರ್ಮ, ಜಾತಿ ನೆನಪಾಗಬಹುದು. ಅದನ್ನೇನಾದರೂ ಹೈಲೆಟ್ ಮಾಡಲಾಗಿದೆಯಾ ಎಂಬ ಸಂದೇಹ ಬರೋದು ಸಹಜ. ಆ ಸಂದೇಹಕ್ಕೂ ರಾಗಿಣಿ ಉತ್ತರಿಸಿದ್ದಾರೆ. “ಆ ರೀತಿಯ ಕಲ್ಪನೆ ಬೇಡ. ಇಲ್ಲಿ ಜಾತಿ ಸಂಘರ್ಷವಿಲ್ಲ. ಧರ್ಮಗಳಿಗೆ ಧಕ್ಕೆಯಾಗುವ ಅಂಶಗಳಿಲ್ಲ. ರೇಷ್ಮಾ ಎಂಬ ಮುಸ್ಲಿಂ ಪಾತ್ರ ಇದ್ದಾಕ್ಷಣ, ನೂರೆಂಟು ಅರ್ಥ ಬರುತ್ತೆ. “ಟೆರರಿಸ್ಟ್’ಗೂ ರೇಷ್ಮಾ ಎಂಬ ಮುಸ್ಲಿಂ ಹುಡುಗಿಗೂ ಏನು ಸಂಬಂಧ ಎಂಬುದೇ ಕಥೆ ಇಲ್ಲಿ ರೇಷ್ಮಾ ಎಂಬ ಮುಗ್ಧ ಹುಡುಗಿಯ ಕಣ್ಣೀರಿದೆ, ಅವಳ ತುಟಿಯಂಚಿನಲ್ಲೊಂದಷ್ಟು ನಗುವಿದೆ, ಭಾವುಕತೆ ಇದೆ. ಒಂದು ಮನರಂಜನೆ ಜೊತೆಗೆ ಗಂಭೀರ ವಿಷಯ ಹೈಲೆಟ್. ಇನ್ನು, ಇಲ್ಲಿ ಸಾಕಷ್ಟು ಸಮಸ್ಯೆಗಳ ನಡುವೆಯೇ ಚಿತ್ರೀಕರಣ ಮಾಡಲಾಗಿದೆ. ಆ ಸಮಸ್ಯೆ ಎಷ್ಟಿತ್ತು ಎಂಬುದನ್ನು ಚಿತ್ರದಲ್ಲೇ ನೋಡಬೇಕು. ಇಲ್ಲಿ ರೇಷ್ಮಾ ಅಮಾಯಕಿನಾ, ಭ್ರಷ್ಟರ ವಿರುದ್ಧ ಧ್ವನಿ ಎತ್ತುತ್ತಾಳಾ? ಇದಕ್ಕೆ ಉತ್ತರ “ಟೆರರಿಸ್ಟ್’ ವೀಕ್ಷಣೆ’ ಎಂಬುದು ರಾಗಿಣಿ ಮಾತು.
“ಟೆರರಿಸ್ಟ್’ಗೂ ರೇಷ್ಮಾಗೂ ಏನು ಸಂಬಂಧ ಎಂದು ನೀವು ಕೇಳಬಹುದು. ರಾಗಿಣಿ ಹೇಳುವಂತೆ, “ಸಾಮಾನ್ಯವಾಗಿ “ಟೆರರಿಸ್ಟ್’ ಅಂದರೆ, ಹುಡುಗ ನೆನಪಾಗಬಹುದು. ಆದರೆ, ಇಲ್ಲಿ “ಟೆರರಿಸ್ಟ್’ ಅಂದರೆ, ಹುಡುಗಿ ಛಾಯೆ ಕಾಣಸಿಗುತ್ತೆ. ಅದೇ ಇಲ್ಲಿರುವ ವಿಶೇಷ. ಒಂದು ವ್ಯವಸ್ಥೆಯಲ್ಲಿ ಏನೆಲ್ಲಾ ಆಗಿಹೋಗುತ್ತೆ ಅನ್ನುವುದನ್ನು ಸೂಕ್ಷ್ಮ ವಿಷಯಗಳ ಮೂಲಕ ಹೇಳಲಾದ ಚಿತ್ರವಿದು’ ಎನ್ನುತ್ತಾರೆ ರಾಗಿಣಿ.
ವಿಭ