Advertisement

ನಾನು ನಂಬರ್ 1, ನಂಬರ್ 2 ರೇಸ್ ನಲ್ಲಿ ಇಲ್ಲ : ಅಕ್ಷಯ್ ಕುಮಾರ್

10:31 PM Aug 05, 2022 | Team Udayavani |

ಇಂದೋರ್ : ಯಾವುದೇ ರೀತಿಯ ವೃತ್ತಿಪರ ಸ್ಪರ್ಧೆಯಿಂದ ದೂರವಿರುತ್ತೇನೆ ಮತ್ತು ನಟನೆಯಲ್ಲಿ ನಿರ್ದಿಷ್ಟ ಇಮೇಜ್‌ಗೆ ಸೀಮಿತವಾಗಲು ಬಯಸುವುದಿಲ್ಲ ಎಂದು ಬಾಲಿವುಡ್ ನಟ ಅಕ್ಷಯ್ ಕುಮಾರ್ ಶುಕ್ರವಾರ ಹೇಳಿದ್ದಾರೆ.

Advertisement

ಆಗಸ್ಟ್ 11 ರಂದು ಬಿಡುಗಡೆಯಾಗಲಿರುವ ಅವರ ಚಿತ್ರ “ರಕ್ಷಾ ಬಂಧನ” ದ ಪ್ರಚಾರ ಕಾರ್ಯಕ್ರಮದಲ್ಲಿ ನಟ ಮಾತನಾಡುತ್ತಿದ್ದರು.”ನನ್ನನ್ನು ಕೆಲವೊಮ್ಮೆ ನಂಬರ್ ಒನ್, ನಂಬರ್ ಟು, ಮತ್ತು ಕೆಲವೊಮ್ಮೆ ನಂಬರ್ ಥ್ರೀ ನಟ ಎಂದು ಕರೆಯುತ್ತಾರೆ. ಆದರೆ ನಾನು ರೇಸ್‌ನಲ್ಲಿ ಇಲ್ಲ. ನಾನು ಓಟದಲ್ಲಿ ಮೊದಲ, ಎರಡನೆಯ ಅಥವಾ ಮೂರನೇ ಸ್ಥಾನ ಪಡೆಯುವ ಕುದುರೆಯಲ್ಲ”ಎಂದು 54 ರ ಹರೆಯದ ನಟ ಸುದ್ದಿಗಾರರಿಗೆ ತಿಳಿಸಿದರು.

”ನಟನಾಗಿ, ನಾನು ಪಾತ್ರವನ್ನು ನಿರ್ವಹಿಸಿ ಒಂದು ಚಿತ್ರದಲ್ಲಿ ಸೀಮಿತವಾಗದಿರಲು ಪ್ರಯತ್ನಿಸುತ್ತೇನೆ.ವಿಭಿನ್ನ ಪಾತ್ರಗಳಲ್ಲಿ ನಟಿಸುವ ಆಸೆ ಇದೆ” ಎಂದರು.

ಗಲ್ಲಾಪೆಟ್ಟಿಗೆಯಲ್ಲಿ, “ರಕ್ಷಾ ಬಂಧನ” ಅಮೀರ್ ಖಾನ್ ಅಭಿನಯದ “ಲಾಲ್ ಸಿಂಗ್ ಚಡ್ಡಾ” ದೊಂದಿಗೆ ಮುಖಾಮುಖಿಯಾಗಲಿದೆ. ”ಎರಡು ಚಿತ್ರಗಳ ನಡುವೆ ಯಾವುದೇ ಪೈಪೋಟಿ ಇಲ್ಲ” ಎಂದು ಅಕ್ಷಯ್ ಹೇಳಿದರು. ಎರಡೂ ಚಲನಚಿತ್ರಗಳು ಉತ್ತಮವಾಗಿ ಕಲೆಕ್ಷನ್ ಮಾಡುತ್ತವೆ ಎಂದು ಅವರು ಭಾವಿಸಿದರು.

ಈ ಸಂದರ್ಭದಲ್ಲಿ, ಟ್ವಿಟರ್‌ನಲ್ಲಿ ಅವರ ಚಿತ್ರದ ಬಹಿಷ್ಕಾರಕ್ಕೆ ಕರೆ ನೀಡಲಾಗಿರುವ ಹ್ಯಾಶ್‌ಟ್ಯಾಗ್ ಕುರಿತು ಅಕ್ಷಯ್ ಕುಮಾರ್ ಅವರನ್ನು ಕೇಳಲಾಯಿತು, ಈ ಬಗ್ಗೆ ನನಗೇನು ತಿಳಿದಿಲ್ಲ ಎಂದರು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next