Advertisement

ಅಕ್ರಮವಾಗಿ ನಿರ್ಮಿಸಿದ್ದ ದರ್ಗಾ ನೆಲಸಮ

11:28 PM Mar 23, 2023 | Team Udayavani |

ಮುಂಬೈ: ಮಹಾರಾಷ್ಟ್ರ ರಾಜಧಾನಿ ಮುಂಬೈನ ಮಹೀಮ್‌ ಪ್ರದೇಶದಲ್ಲಿ ಭೂಮಿ ಒತ್ತುವರಿ ಮಾಡಿಕೊಂಡು ನಿರ್ಮಿ­ಸಲಾಗಿದ್ದ ದರ್ಗಾ ಒಂದನ್ನು ಬೃಹನ್ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ಗುರುವಾರ ನೆಲಸಮ­ಗೊಳಿಸಿತು.

Advertisement

ಯುಗಾದಿ ಹಬ್ಬದ ಪ್ರಯುಕ್ತ ವಿಡಿಯೋ ಒಂದರಲ್ಲಿ ಮಾತನಾ­ಡಿದ್ದ ಎಂಎನ್‌ಎಸ್‌ ಮುಖ್ಯಸ್ಥ ರಾಜ್‌ ಠಾಕ್ರೆ, “ಮುಂಬೈನ ಮಹೀಮ್‌ ಕರಾವಳಿ ಪ್ರದೇಶದಲ್ಲಿ 1-2 ವರ್ಷಗಳ ಹಿಂದೆ ದರ್ಗಾ ಇರಲಿಲ್ಲ. ಆದರೆ ಈಗ ಇದಕ್ಕಿದ್ದಂತೆ ದರ್ಗಾ ನಿರ್ಮಿಸಲಾಗಿದೆ. ಸಮುದ್ರದ ತೀರದ ಪ್ರದೇಶವನ್ನು ಒತ್ತುವರಿ ಮಾಡಿ­ಕೊಳ್ಳಲಾಗಿದೆ. ಇದು ಯಾರ ದರ್ಗಾ? ಅತಿಕ್ರಮವಾಗಿ ದರ್ಗಾ ನಿರ್ಮಿಸಿ ರುವುದು ಮಹಾರಾಷ್ಟ್ರ ಸರ್ಕಾರ ಮತ್ತು ಬಿಎಂಸಿ ವೈಫ‌ಲ್ಯಕ್ಕೆ ಸಾಕ್ಷಿಯಾಗಿದೆ. ಒಂದು ವೇಳೆ ದರ್ಗಾ ತೆರವುಗೊಳಿಸದಿದ್ದರೆ, ಆ ಸ್ಥಳದಲ್ಲಿ ಗಣಪತಿ ದೇಗುಲ ನಿರ್ಮಿಸ ಲಾಗುವುದು,’ ಎಂದು ಹೇಳಿ­ದ್ದರು.

ಗುರುವಾರ ಬಿಗಿ ಪೊಲೀಸ್‌ ಭದ್ರತೆಯಲ್ಲಿ ಅತಿಕ್ರಮವಾಗಿ ನಿರ್ಮಿಸ­ಲಾಗಿದ್ದ ದರ್ಗಾವನ್ನು ಬುಲ್ಡೋಜರ್‌ ಮೂಲಕ ನೆಲಸಮ­ಗೊಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next