Advertisement

ಬಿಆರ್‌ಟಿಎಸ್‌ನಲ್ಲಿ ಅಕ್ರಮ: ಆರೋಪ

09:48 AM Jun 08, 2020 | Suhan S |

ಧಾರವಾಡ: ಬಿಆರ್‌ಟಿಎಸ್‌ ಯೋಜನೆಯಲ್ಲಿ ಅಕ್ರಮ ನಡೆದಿದೆ ಎಂದು ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಪಿ.ಎಚ್‌.ನೀರಲಕೇರಿ ಆರೋಪಿಸಿದರು.

Advertisement

ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅವಳಿನಗರದಲ್ಲಿ ಚಾಲ್ತಿಯಲ್ಲಿರುವ ಬಿಆರ್‌ಟಿಎಸ್‌ ಯೋಜನೆ ಮೂಲನಕ್ಷೆಯ ಹತ್ತಿರವೂ ಇಲ್ಲ. ಮಳೆಯಾದರೆ ಸಾಕು ಆಲೂರು ವೃತ್ತದಿಂದ ಟೋಲ್‌ನಾಕಾ, ಟೋಲ್‌ ನಾಕಾದಿಂದ ಕೆಎಂಎಫ್‌ವರೆಗೂಮಳೆ ನೀರು ಸಂಗ್ರಹಗೊಂಡು ರಸ್ತೆ ಕೆರೆಯಂತೆ ಭಾಸವಾಗುತ್ತದೆ. ಕೂಡಲೇ ಇದನ್ನು ಸರಿಪಡಿಸದಿದ್ದಲ್ಲಿ ಉಗ್ರ ಹೋರಾಟ ಅನಿವಾರ್ಯ ಎಂದು ಎಚ್ಚರಿಸಿದರು.

ಬಿಆರ್‌ಟಿಎಸ್‌, ರಿಂಗ್‌ ರಸ್ತೆ, ಟೆಂಡರ್‌ ಶ್ಯೂರ್‌ ರಸ್ತೆ ಸೇರಿದಂತೆ ಎಲ್ಲ ಕಾಮಗಾರಿಗಳು ಪೂರ್ಣಗೊಳ್ಳುತ್ತಿಲ್ಲ. ಅರೇ ಬರೆ ಕಾಮಗಾರಿ ಮಾಡಿ ಜನಸಾಮಾನ್ಯರಿಗೆ ದಿನನಿತ್ಯ ಕಿರಿಕಿರಿ ಮಾಡುತ್ತಿದ್ದಾರೆ. ಶಾಸಕ ಅರವಿಂದ ಬೆಲ್ಲದ ಅವರು ಇತ್ತೀಚೆಗೆ ಬಿಆರ್‌ ಟಿಎಸ್‌ ಯೋಜನೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಜಿಲ್ಲಾಡಳಿತ ಸೇರಿದಂತೆ ವಿವಿಧ ಇಲಾಖೆಗಳು ನಿರ್ಲಿಪ್ತವಾಗಿವೆ ಎಂದು ಸ್ವತಃ ಶಾಸಕ ಅರವಿಂದ ಬೆಲ್ಲದ ಅವರೇ ಹೇಳಿಕೊಂಡಿದ್ದಾರೆ. ಅಧಿಕಾರಿ ವರ್ಗ ಸರಿಯಾಗಿ ಕೆಲಸ ಮಾಡುತ್ತಿಲ್ಲವೆಂದು ಮಾಧ್ಯಮಗಳ ಮುಂದೆಯೂ ಹೇಳಿಕೊಂಡಿದ್ದಾರೆ. ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ಅವರಿಗೆ ಆಡಳಿತ ಹೇಗೆ ನಡೆಸಬೇಕೆಂಬುದು ತಿಳಿದಿಲ್ಲ. ಹೀಗಾಗಿ ಅವರು ಕೂಡಲೇ ರಾಜಿನಾಮೆನೀಡಬೇಕೆಂದು ಆಗ್ರಹಿಸಿದರು. ದಾನಪ್ಪ ಕಬ್ಬೇರ, ಬಸವರಾಜ ಮಲಕಾರಿ, ಪ್ರಕಾಶ ಹಳ್ಯಾಳ ಪತ್ರಿಕಾಗೋಷ್ಠಿಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next