ಬೆಳ್ತಂಗಡಿ: ತಾಲೂಕಿನ ಮುಂಡಾಜೆ, ಕಡಿರುದ್ಯಾವರ ವ್ಯಾಪ್ತಿಯ ವಳಂಬ್ರ ಸಮೀಪ ಕುದುರೆಮುಖ ವನ್ಯಜೀವಿ ವಲಯ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಮರ ಕಡಿದಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಪುತ್ತೂರಿನ ವಿಶೇಷ ಪೊಲೀಸ್ ಅರಣ್ಯ ಸಂಚಾರಿ ದಳದ ತಂಡವು ಸೆ.28ರಂದು ದಾಳಿ ನಡೆಸಿದೆ.
ಅರಣ್ಯ ಪ್ರದೇಶದಲ್ಲಿ ದಾಳಿ ನಡೆಸುವ ವೇಳೆ ಸ್ಥಳದಿಂದ ಆರೋಪಿಗಳು ಕಾಲ್ಕಿತ್ತಿದ್ದು, ಬೇಂಗ ಜಾತಿಯ ಮರದ ದಿಮ್ಮಿ, ಹಲಗೆ, ಸೈಜುಗಳು ಸ್ಥಳದಲ್ಲಿ ಪತ್ತೆಯಾಗಿದೆ.
ಒಟ್ಟು 50.833 ಸಿಎಫ್.ಟಿ ದಿಮ್ಮಿ ಮೌಲ್ಯ 1 ಲಕ್ಷದ 50 ಸಾವಿರ ರೂ. ಆಗಿದೆ. ಕುದುರೆಮುಖ ವನ್ಯಜೀವಿ ವಲಯದ ವಳಂಬ್ರ ಎಂಬಲ್ಲಿಗೆ ನಾಲ್ಕು ಕಿ.ಮೀ. ದೂರು ಸಾಗಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.
ಇದನ್ನೂ ಓದಿ:ಪಿಲಿಕುಳ ನಿಸರ್ಗಧಾಮದ ಆರ್ಥಿಕ ಸಂಕಷ್ಟಕ್ಕೆ ಸ್ಪಂದಿಸಿ; ಕೈಗಾರಿಕೆಗಳಿಗೆ ಜಿಲ್ಲಾಡಳಿತ ಕೋರಿಕೆ
ಪುತ್ತೂರು ವಿಶೇಷ ಪೊಲೀಸ್ ಅರಣ್ಯ ಸಂಚಾರಿ ದಳದ ಉಪನಿರೀಕ್ಷಕ ಜಯ.ಕೆ. ಹಾಗೂ ಸಿಬಂದಿಗಳಾದ ಸುಂದರ್ ಶೆಟ್ಟಿ, ವಿಜಯ, ಉದಯ, ರಾಧಕೃಷ್ಣ. ಜಿ.ಬಿ. ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಈ ಕುರಿತು ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆಗೆ ಬೆಳ್ತಂಗಡಿ ವನ್ಯಜೀವಿ ಇಲಾಖೆಗೆ ಹಸ್ತಾಂತರ ಮಾಡಲಾಗಿದೆ.